More

    ಪಠ್ಯದಿಂದ ಬಾಬ್ರಿ ಧ್ವಂಸ ಉಲ್ಲೇಖ ಕೈಬಿಟ್ಟಿ ಎಸಿಇಆರ್​ಟಿ!

    ನವದೆಹಲಿ: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಮತ್ತು ಗುಜರಾತ್ ಗಲಭೆಯಲ್ಲಿ ಮುಸ್ಲಿಮರ ಹತ್ಯೆಗೆ ಸಂಬಂಧಿಸಿದ ಉಲ್ಲೇಖಗಳನ್ನು ಪಠ್ಯಪುಸ್ತಕಗಳಿಂದ ಎನ್‌ಸಿಇಆರ್‌ಟಿ ತೆಗೆದುಹಾಕಿದೆ.

    ಇದನ್ನೂ ಓದಿ: Success Story: ಆ ರೈತನ ಬದುಕನ್ನೇ ಬದಲಿಸಿದ ಐಡಿಯಾ.. 50 ಸಾವಿರ ಬಂಡವಾಳ, 2.50 ಲಕ್ಷ ರೂ.ಆದಾಯ!

    ಇದು ಸೇರಿದಂತೆ ಬದಲಾವಣೆಗಳನ್ನು ಮಾಡಲಾಗುವುದು ಮತ್ತು ಹೊಸ ಶೈಕ್ಷಣಿಕ ವರ್ಷದಲ್ಲಿ 11 ಮತ್ತು 12 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ.

    12ನೇ ತರಗತಿಯ ‘ಇಂಡಿಯನ್ ಪಾಲಿಟಿಕ್ಸ್ ಆಫರ್ ಇಂಡಿಪೆಂಡೆನ್ಸ್’ ಪುಸ್ತಕದ 8ನೇ ಅಧ್ಯಾಯದಲ್ಲಿ ಭಾರತೀಯ ರಾಜಕೀಯದಲ್ಲಿ ಇತ್ತೀಚಿನ 5 ಘಟನೆಗಳನ್ನು ವಿವರಿಸಲಾಗಿದೆ. 1989ರ ನಂತರ ಕಾಂಗ್ರೆಸ್ ನ ಅವನತಿ, ಮಂಡಲ್ ಆಯೋಗ, 1991ರಲ್ಲಿ ಆರ್ಥಿಕ ಸುಧಾರಣೆಗಳ ಯುಗ, ರಾಜೀವ್ ಗಾಂಧಿ ಹತ್ಯೆ ಮತ್ತು ಬಾಬರಿ ಮಸೀದಿ ಧ್ವಂಸ. ರಾಮಜನ್ಮಭೂಮಿ ಅಭಿಯಾನ, ಯುಪಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಮತ್ತು ಕೋಮುಗಲಭೆಗಳನ್ನು ಈ ಪಾಠದಲ್ಲಿ ವಿವರಿಸಲಾಗಿದೆ. ಈ ಭಾಗವನ್ನು ಸಂಪೂರ್ಣವಾಗಿ ಬಿಟ್ಟುಬಿಡಲಾಗಿದೆ.

    11 ನೇ ತರಗತಿಯಲ್ಲಿ ಸೆಕ್ಯುಲರಿಸಂ ಕುರಿತಾದ 8ನೇ ಅಧ್ಯಾಯದಲ್ಲಿ, ಗುಜರಾತ್ ಗಲಭೆಗಳ ವಿಭಾಗದ ಉಲೇಖವು ಹೀಗಿದೆ: ‘2002 ರ ಗುಜರಾತ್ ಗಲಭೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು, ಹೆಚ್ಚಾಗಿ ಮುಸ್ಲಿಮರು ಕೊಲ್ಲಲ್ಪಟ್ಟರು’. ಇದರಲ್ಲಿ ಮುಸ್ಲಿಂ ಎಂಬ ಉಲ್ಲೇಖವನ್ನು ಕೈ ಬಿಡಲಾಗಿದೆ.

    ಪಾಕ್ ಆಕ್ರಮಿತ ಕಾಶ್ಮೀರದ ಕುರಿತ ಹಿಂದಿನ ಪಠ್ಯಪುಸ್ತಕದಲ್ಲಿ, ‘ಭಾರತವು ಈ ಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಹೇಳುತ್ತದೆ. ಪಾಕಿಸ್ತಾನವು ಈ ಪ್ರದೇಶವನ್ನು ಆಜಾದ್ ಪಾಕಿಸ್ತಾನ ಎಂದು ಕರೆಯುತ್ತದೆ. ಆದರೆ ಇದು ಪಾಕಿಸ್ತಾನ ಅತಿಕ್ರಮಿಸಲ್ಪಟ್ಟ ಭಾರತೀಯ ಪ್ರದೇಶವಾಗಿದೆ.

    ಈವರೆಗೆ ನೋಡಿದ್ದು ಕೇವಲ ಟ್ರೈಲರ್: ಸಿನಿಮಾ ಇನ್ನೂ ಬಾಕಿ ಇದೆ ಎಂದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts