More

    ಭಾರತದ ಗೂಗಲ್​ ಮ್ಯಾಪ್​ನಲ್ಲಿ ಎಲ್​ಒಸಿ ಮಾಯವಾಯ್ತಾ?: ಫ್ಯಾಕ್ಟ್​ಚೆಕ್​ನಲ್ಲಿ ಅಸಲಿ ಸತ್ಯ ಬಯಲು!

    ನವದೆಹಲಿ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಏರಿಯಾದ ಹವಾಮಾನ ವರದಿ ನೀಡಲು ಆರಂಭಿಸಿದ ಬೆನ್ನಲ್ಲೇ ಗಡಿನಿಯಂತ್ರಣ ರೇಖೆ (ಎಲ್​ಒಸಿ) ಗುರುತು ಇರದ ಭಾರತೀಯ ಗೂಗಲ್​ ಮ್ಯಾಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ತೊಡಗಿದೆ.

    ವೈರಲ್​ ಫೋಟೋವು ವಿಜೇಂದ್ರ ಡಿ.ಟಿ. ಹೆಸರಿನ ಫೇಸ್​ಬುಕ್ ಖಾತೆಯಲ್ಲಿ ಅಪ್​​ಲೋಡ್​ ಆಗಿದೆ. ಇಂಗ್ಲಿಷ್​ನಲ್ಲಿ ಅಡಿಬಹರನ್ನು ಬರೆಯಲಾಗಿದ್ದು, ಅದರ ಸಾರ ಹೀಗಿದೆ… ಬ್ರೇಕಿಂಗ್​ ನ್ಯೂಸ್​ ಎಂದು ಎಚ್ಚರಿಸಿ, ಗೂಗಲ್​ ಮ್ಯಾಪ್​ ಎಲ್​ಒಸಿ ಅನ್ನು ತೆಗೆದುಹಾಕಿದೆ. ಪಾಕ್​ ಆಕ್ರಮಿತ ಕಾಶ್ಮೀರ ಕೂಡ ನಮ್ಮದಾಗಲಿದೆ. ಇದಕ್ಕೆ ನಿಮ್ಮ ಸಹಮತವಿದ್ದರೆ ಥಂಬ್ಸ್​ ಅಪ್​ ಮಾಡಿ ಎಂದು ಬರೆಯಲಾಗಿದ್ದು, ಸಾಕಷ್ಟು ಮಂದಿ ಇದನ್ನು ಫೇಸ್​ಬುಕ್​ ಮತ್ತು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವೈರಲ್​ ಫೋಟೋವನ್ನು ಈ ಕೆಳಗೆ ನೀವು ಕಾಣಬಹುದಾಗಿದೆ.

    ಭಾರತದ ಗೂಗಲ್​ ಮ್ಯಾಪ್​ನಲ್ಲಿ ಎಲ್​ಒಸಿ ಮಾಯವಾಯ್ತಾ?: ಫ್ಯಾಕ್ಟ್​ಚೆಕ್​ನಲ್ಲಿ ಅಸಲಿ ಸತ್ಯ ಬಯಲು!

    ಇದನ್ನೂ ಓದಿ: ತಾಯಂದಿರ ದಿನವೇ ನಡೆಯಿತು ತಂದೆ-ತಾಯಿಯ ಭೀಕರ ಹತ್ಯೆ: ಮಗನೇಕೆ ಇಂಥ ನೀಚ ಕೆಲಸಕ್ಕೆ ಮುಂದಾದ?

    ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಸ್ಟ್​ ಎಷ್ಟು ಸತ್ಯವೆಂದು ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಫೋಟೋದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿದುಬಂದಿದೆ. ಭಾರತವನ್ನು ಬಿಟ್ಟು ಬೇರೆ ದೇಶಗಳಲ್ಲಿ ಇಂಡಿಯಾದ ಗೂಗಲ್​ ಮ್ಯಾಪ್ ನೋಡಿದರೆ ಅದರಲ್ಲಿ ಎಲ್​ಒಸಿ ಕಾಣುತ್ತದೆ. ಅದೇ ಇಂಡಿಯಾದ ಒಳಗಡೆ ನೋಡಿದರೆ ಎಲ್​ಒಸಿ ಕಾಣಿಸುವುದಿಲ್ಲ. ಏಕೆಂದರೆ ನಕ್ಷೆಯನ್ನು ಎಲ್ಲಿ ವೀಕ್ಷಿಸಲಾಗಿದೆ ಎಂಬುದರ ಆಧಾರದ ಮೇಲೆ ಗೂಗಲ್ ನಕ್ಷೆಗಳಲ್ಲಿ ವಿವಾದಿತ ಗಡಿಗಳನ್ನು ಮರುರೂಪಿಸಲಾಗುತ್ತದೆ ಎಂಬುದೇ ಇದಕ್ಕೆ ಕಾರಣವಾಗಿದೆ.

    ಸಂಬಂಧಿತ ಕೀವರ್ಡ್ಸ್​​ ಸಹಾಯದಿಂದ ಗೂಗಲ್​ ಸರ್ಚ್​ ಇಂಜಿನ್​​ನಲ್ಲಿ ಹುಡುಕಾಡಿದಾಗ “ದಿ ವಾಷಿಂಗ್ಟನ್​ ಪೋಸ್ಟ್​” ವೆಬ್​ಸೈಟ್​ನಲ್ಲಿ ಪ್ರಕಟವಾಗಿರುವ ಒಂದು ವರದಿ ಲಭ್ಯವಾಯಿತು. ಅದರ ಪ್ರಕಾರ ಭಾರತದಲ್ಲಿರುವ ಗೂಗಲ್​ ಮ್ಯಾಪ್​ ಇಡೀ ಜಮ್ಮು ಮತ್ತು ಕಾಶ್ಮೀರ ಸಂಪೂರ್ಣ ತನ್ನ ನಿಯಂತ್ರಣದಲ್ಲಿದೆ ಎಂದು ಪ್ರದರ್ಶಿಸುತ್ತದೆ. ಆದರೆ, ಮ್ಯಾಪ್​ ಅನ್ನು ಭಾರತ ಬಿಟ್ಟು ಇತರೆ ದೇಶಗಳಲ್ಲಿ ನೋಡಿದರೆ ಜಮ್ಮು ಮತ್ತು ಕಾಶ್ಮೀರದಿಂದ ಪಿಒಕೆ ಪ್ರತ್ಯೇಕವಾಗಿರುವುದನ್ನು ಸೂಚಿಸುವ ಒಂದು ಬೂದು ಬಣ್ಣದ ಗೆರೆ ಮ್ಯಾಪ್​ನಲ್ಲಿ ಕಾಣುತ್ತದೆ.

    ಇದನ್ನೂ ಓದಿ: ಅಬಕಾರಿ ಸಚಿವ ಎಚ್​. ನಾಗೇಶ್​ಗೆ ಸಿಎಂ ಬಿಎಸ್​ವೈ ಶಾಕ್​!

    ಮ್ಯಾಪ್​ ರಚಿಸುವಂತಹ ಸಂದರ್ಭದಲ್ಲಿ ಗೂಗಲ್​ ಸ್ಥಳೀಯ ಸರ್ಕಾರ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತದೆ. ಕೆಲವೊಮ್ಮೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಮ್ಯಾಪ್​ ರಚನೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡುತ್ತದೆ ಎಂದು ಇದೇ ವರ್ಷ ಫೆಬ್ರವರಿಯಲ್ಲಿ ಪ್ರಕಟವಾದ “ದಿ ವಾಷಿಂಗ್ಟನ್​ ಪೋಸ್ಟ್​” ವರದಿಯಲ್ಲಿ ಉಲ್ಲೇಖವಾಗಿದೆ.

    ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಇಂಡಿಯಾ ಟುಡೆ ಫ್ಯಾಕ್ಟ್​ಚೆಕ್​ ತಂಡ ವಿಪಿಎನ್ (ವರ್ಚುವಲ್ ಖಾಸಗಿ ನೆಟ್‌ವರ್ಕ್)​ ಬಳಸಿ ಸಿಂಗಾಪುರದಿಂದ ಭಾರತದ ಮ್ಯಾಪ್​ ಅನ್ನು ನೋಡಲಾಯಿತು. ಇದರಲ್ಲಿ ಎಲ್​ಸಿಯನ್ನು ಗುರುತಿಸುವ ಬೂದು ಬಣ್ಣದ ರೇಖೆ ಸ್ಪಷ್ಟವಾಗಿ ಕಾಣುತ್ತದೆ. ಆದರೆ, ಇಂಡಿಯಾದಲ್ಲಿ ನೋಡಿದ್ರೆ ರೇಖೆ ಕಾಣುವುದಿಲ್ಲ.

    ನಕ್ಷೆಗಳ ರಚನೆ ಮೇಲಿನ ಗೂಗಲ್ ನೀತಿಯ ಪ್ರಕಾರ “ವಿವಾದಿತ ಗಡಿಗಳನ್ನು ಡ್ಯಾಶ್ ಮಾಡಲಾದ ಬೂದು ಬಣ್ಣದ ರೇಖೆಯಾಗಿ ಪ್ರದರ್ಶಿಸಲಾಗುತ್ತದೆ. ಒಳಗೊಂಡಿರುವ ಸ್ಥಳಗಳು ಗಡಿಯನ್ನು ಒಪ್ಪುವುದಿಲ್ಲ. ”

    ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಜಾಹೀರಾತು ಹಾಕಿ ವಂಚನೆ; ಸೈಬರ್ ಕಳ್ಳರ ಕೃತ್ಯ ಹೆಚ್ಚಳ, ನಗರದಲ್ಲಿ ಮೂರು ಪ್ರತ್ಯೇಕ ಪ್ರಕರಣ

    ಹೀಗಾಗಿ ಗೂಗಲ್​ ಮ್ಯಾಪ್​ನಿಂದ ಎಲ್​ಒಸಿ ಅನ್ನು ತೆಗೆದುಹಾಕಲಾಗಿದೆ ಎಂದು ಜಾಲತಾಣದಲ್ಲಿ ಫೋಟೋ ಸಮೇತ ಹರಿದಾಡುತ್ತಿರುವ ಫೋಸ್ಟ್​ ಸಂಪೂರ್ಣ ನಕಲಿ ಎಂಬುದು ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. (ಏಜೆನ್ಸೀಸ್​)

    ರಾಯಚೂರಿನ ಮಾಜಿ ಸಂಸದ ರಾಜಾರಂಗಪ್ಪ ನಾಯಕ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts