More

    FACT CHECK |ಅಂಬಾನಿ, ಅದಾನಿ ಪರವಾಗಿದೆ ಕೃಷಿ ಕಾನೂನು ಅಂತ ಕೇಂದ್ರ ಸಚಿವರು ಹೇಳಿದ್ರಾ?

    ಬೆಂಗಳೂರು: ಬಿಗ್ ಎಕ್ಸ್​ಪೋಸ್ ಎಂಬ ಶೀರ್ಷಿಕೆ ಅಡಿ ಆಕಾಶ್​ನೂರ್ ಸಿಂಗ್ ಗದ್ರಿ ವಿಡಿಯೋ ಒಂದನ್ನು ಟ್ವಿಟರ್​ನಲ್ಲಿ ಅಪ್ಲೋಡ್ ಮಾಡಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕಾನೂನುಗಳನ್ನು ಅಂಬಾನಿ, ಅದಾನಿಗಳ ಪರವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದಾಗಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಮತ್ತೊಂದು ಪೋಸ್ಟ್ ಮಾಡಿರುವ ಗದ್ರಿ, ಟ್ವಿಟರ್​ನಲ್ಲಿ ಸಚಿವ ತೋಮರ್ ಅವರು ತಮ್ಮನ್ನು ಬ್ಲಾಕ್ ಮಾಡಿಕೊಳ್ಳುವ ಮೂಲಕ ನಿಜ ಒಪ್ಪಿಕೊಂಡಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.

    ಗದ್ರಿ ಶೇರ್ ಮಾಡಿದ ವಿಡಿಯೋ ಕೆಟಿವಿ ಗ್ಲೋಬಲ್ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಸಾರವಾದುದು. ಈ ಚಾನೆಲ್ ಭಾರತದಲ್ಲಿ ಲಭ್ಯವಿಲ್ಲ. ಬ್ರಿಟನ್​ ಮೂಲದ ಚಾನೆಲ್ ಇದು. ಟ್ವಿಟರ್ ವೆರಿಫೈಡ್ ಖಾತೆ ಹೊಂದಿರುವ ಗದ್ರಿ ಪಂಜಾಬಿನವರಾದರೂ ಇರುವುದು ಅಮೆರಿಕ ಎಂಬುದನ್ನು ಟ್ವಿಟರ್ ಖಾತೆಯಲ್ಲಿ ಅಪ್ಡೇಟ್ ಮಾಡಿದ್ದಾರೆ.

    ಇದನ್ನೂ ಓದಿ: ಹೈಸ್ಕೂಲ್​ ಮಕ್ಕಳಿಗೆ ಇಲ್ಲಿದೆ ಮಹತ್ವದ ಮಾಹಿತಿ: ಸಂವೇದಾ ಇ-ಕ್ಲಾಸ್​ ವೇಳೆ ಬದಲು

    ವಿಡಿಯೋ ದೃಶ್ಯಾವಳಿಯಲ್ಲಿ ಹಸಿರು ಟರ್ಬನ್ ಸುತ್ತಿಕೊಂಡಿರುವ ಇಬ್ಬರು ರೈತ ನಾಯಕರಂತೆ ಟಿವಿ ಚಾನೆಲ್​ಗೆ ಹೇಳಿಕೆ ನೀಡಿದ್ದು, ಅವರಲ್ಲೊಬ್ಬಾತ ಹೇಳಿದ್ದಿಷ್ಟು – ಒಂದೊಮ್ಮೆ ನಾನು ಇವತ್ತು ಕಾನೂನು ಹಿಂಪಡೆದರೆ ನಾಳೆ ಅದಾನಿ, ಅಂಬಾನಿಗಳು ಬಂದು ಬಿಡ್ತಾರೆ ಅಂತ ತೋಮರ್​ ರೈತ ನಾಯಕರ ಸಭೆಯಲ್ಲಿ ಹೇಳಿದ್ರು.

    ಇದನ್ನೂ ಓದಿ: 50 ರೂ ಸಂಭಾವನೆ ಪಡೆಯುತ್ತಿದ್ದ ಶಾರುಖ್​ ಖಾನ್ ಕಡೆಯಿರುವ ಈ ನಾಲ್ಕು ಪ್ರಾಪರ್ಟಿ ಬೆಲೆ ಈಗ ಸಾವಿರ ಕೋಟಿ!?

    ಆದರೆ, ಈ ಹಸಿರು ಟರ್ಬನ್ ಸುತ್ತಿಕೊಂಡ ನಾಯಕರು ಯಾರೆಂಬುದು ಬಹಿರಂಗವಾಗಿಲ್ಲ. ಈ ಸುದ್ದಿ ರಾಜಕೀಯ ಸಂಚಲನ ಮೂಡಿಸುತ್ತಿರುವಂತೆಯೇ ಪಿಐಬಿ ಫ್ಯಾಕ್ಟ್​ಚೆಕ್​ ಇದು ಸುಳ್ಳು ಸುದ್ದಿ ಎಂಬುದನ್ನು ನಿರೂಪಿಸಿತು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಇಂಥ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿತು.

    ‘ಹಿಂದುಗಳಾಗಿದ್ರೆ ಚರ್ಚ್​ಗೆ ಹೋಗಬೇಡಿ, ಕ್ರಿಸ್​ಮಸ್​ನಲ್ಲಿ ಪಾಲ್ಗೊಳ್ಳಬೇಡಿ’: ಅಸ್ಸಾಂ ಬಜರಂಗ ದಳ ನಾಯಕನ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts