More

    ಆತ್ಮಹತ್ಯೆಗೆ ರೈಲು ಹಳಿ ಮೇಲೆ ಮಲಗಿದ್ದವನ ಪ್ರಾಣವನ್ನು ಫೇಸ್​ಬುಕ್​ ಮೂಲಕವೇ ಕಾಪಾಡಿದ ಸ್ನೇಹಿತ!

    ವಿಜಯವಾಡ: ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡರೆ ಒಳ್ಳೆಯ ಕೆಲಸ ಮಾಡಬಹುದು ಎಂಬುದರಲ್ಲಿ ಸಂದೇಹವೇ ಇಲ್ಲ. ಅದೇ ರೀತಿ ಜಾಲತಾಣದಲ್ಲಿ ನಡೆಯುವ ವಂಚನೆಗಳು ಕಡಿಮೆ ಇಲ್ಲ. ಏನೇ ಆಗಲಿ ಆಯ್ಕೆ ಅವರವರ ಮನಸ್ಸಿಗೆ ಬಿಟ್ಟದ್ದು.

    ಫೇಸ್​ಬುಕ್​ನಲ್ಲಿ ಫ್ರೆಂಡ್ಸ್​ ರಿಕ್ವೆಸ್ಟ್​ ಸ್ವೀಕರಿಸುವಾಗ ಬಹಳ ಹುಷಾರಾಗಿರಬೇಕು. ಹಾಗಂತ ಎಲ್ಲರೂ ಕೆಟ್ಟವರೇನಲ್ಲ. ಕೆಲವು ಒಳ್ಳೆಯವರು ಸಹ ಇರುತ್ತಾರೆ ಎಂಬುದಕ್ಕೆ ಈ ಒಂದು ಘಟನೆ ಒಂದು ತಾಜಾ ಉದಾಹರಣೆ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೊಬ್ಬನ ಜೀವ ಫೇಸ್​ಬುಕ್​ ಸ್ನೇಹಿತನಿಂದಲೇ ಉಳಿದಿದೆ.

    ಈ ಘಟನೆ ಆಂಧ್ರ ಪ್ರದೇಶ ಅನಂತಪುರದಲ್ಲಿ ನಡೆದಿದೆ. ಸತೀಶ್​ ಎಂಬಾತ ತನ್ನ ಫೇಸ್​ಬುಕ್​ ಸ್ನೇಹಿತ ಅನ್ನಪೂರ್ಣ ಸೇವಾ ಸಮಿತಿ ಸಂಸ್ಥಾಪಕ ಮಹಾಕಾಳಿ ಪ್ರಕಾಶ್​ ಎಂಬುವರಿಗೆ ಶನಿವಾರ ಮಧ್ಯಾಹ್ನ ಮೆಸೇಜ್​ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾನೆ.

    ಇದನ್ನೂ ಓದಿರಿ: VIDEO: ಇಂಟರ್​ಕೋರ್ಸ್​ ಮಾಡಿಲ್ಲ ಅಂತ ಯಾವ್ ಬಾಯಲ್ಲಿ ಹೇಳ್ತಾನ್ರಿ…? ಪರೀಕ್ಷೆ ಮಾಡ್ತಾರೆ, ತಪ್ಪಿಸಿಕೊಳ್ಳೋದು ಸಾಧ್ಯನೇ ಇಲ್ಲ…

    ಬಳಿಕ ಪ್ರಕಾಶ್​ ಸಾಕಷ್ಟು ಬಾರಿ ಸತೀಶ್​ಗೆ ಕರೆ ಮಾಡಿದರೂ ಉತ್ತರಿಸದಿದ್ದಾಗ ತಕ್ಷಣ ಪ್ರಕಾಶ್​, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸುತ್ತಾನೆ. ಇದಕ್ಕೆ ತಕ್ಷಣ ಸ್ಪಂದಿಸುವ ಪೊಲೀಸರು ತಾಂತ್ರಿಕ ಸಹಾಯದಿಂದ ಸತೀಶ್​ 10 ಕಿ.ಮೀ ಅಂತರದಲ್ಲಿ ಮೆಸೇಜ್​ ಮಾಡಿರುವುದು ತಿಳಿಯುತ್ತದೆ. ಬಳಿಕ ಪೊಲೀಸರು ಆ ಸ್ಥಳವನ್ನು ಗುರುತಿಸುತ್ತಾರೆ.

    ಈ ವೇಳೆ ಸತೀಶ್​ ಆತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಮಲಗಿರುತ್ತಾನೆ. ಇದನ್ನು ನೋಡಿದ ಪೊಲೀಸರು ಸತೀಶ್​ನನ್ನು ರಕ್ಷಿಸುತ್ತಾರೆ. ಇನ್ನು ಏಳು ನಿಮಿಷಗಳಲ್ಲಿ ರೈಲು ಬರುವ ಸಾಧ್ಯತೆಯು ಇತ್ತು. ಆದರೆ, ಅಷ್ಟರಲ್ಲಾಗಲೇ ಆತನ ಜೀವವನ್ನು ಪೊಲೀಸರು ಉಳಿಸಿದ್ದಾರೆ. ಅದಕ್ಕೆ ಕಾರಣ ಸತೀಶನ ಫೇಸ್​ಬುಕ್​ ಫ್ರೆಂಡ್​. (ಏಜೆನ್ಸೀಸ್​)

    ವಾರದಲ್ಲಿ 2 ಸಾವಿರ ಮೊಟ್ಟೆ ಇಡುತ್ತೆ ಏಡಿ! ಅವುಗಳಿಗೂ ಇದೆ ಕುಟುಂಬ!

    ಸದ್ದಿಲ್ಲದೆ ಮದುವೆಯಾದ ಚೈತ್ರಾ ಕೊಟ್ಟೂರು! ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ

    ಬಿಜೆಪಿ ಗೆದ್ದರೆ ಪ್ರತಿ ಹೆಣ್ಣು ಮಗುವಿನ ಖಾತೆಗೆ 1 ಲಕ್ಷ ರೂಪಾಯಿ: ಖುಷ್ಬೂ ಸುಂದರ್​ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts