More

    1,500 ಜನರನ್ನು ಕೆಲಸದಿಂದ ತೆಗೆದು ಹಾಕಿದ ಫೇಸ್​ಬುಕ್​ ಮಾತೃ ಸಂಸ್ಥೆ ಮೆಟಾ!

    ನವದೆಹಲಿ: ಫೇಸ್​ಬುಕ್​ ಮಾತೃ ಸಂಸ್ಥೆ Meta Platforms Inc. ಈ ವಾರದ ಆರಂಭದಲ್ಲಿ ಘೋಷಿಸಿದ್ದ ಉದ್ಯೋಗ ಕಡಿತವನ್ನು ಕೈಗೊಳ್ಳಲು ಪ್ರಾರಂಭಿಸಿದೆ. ನೇಮಕಾತಿ ಮತ್ತು ಮಾನವ ಸಂಪನ್ಮೂಲ ವಿಭಾಗದಲ್ಲಿ 1,500 ಉದ್ಯೋಗಿಗಳನ್ನು ಕೈಬಿಡುವ ಬಗ್ಗೆ ಪ್ರಾರಂಭಿಸಲಾಗಿದೆ ಎಂದು ಈ ವಿಚಾರವಾಗಿ ಮಾಹಿತಿ ಇರುವ ಜನರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂನಲ್ಲೂ ಇನ್ನು ಬ್ಲೂ ಟಿಕ್​ ಖರೀದಿಸಬಹುದು!

    ಉದ್ಯೋಗಿಗಳೊಂದಿಗಿನ ಆಂತರಿಕ ಸಭೆಯ ಸಂದರ್ಭದಲ್ಲಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳನ್ನು ವಜಾ ಮಾಡಿ ಪುನರ್​ ರಚನೆಯ ವಾತಾವರಣ ಅನೇಕ ಸಮಯದವರೆಗೆ ಇರುತ್ತದೆ ಎಂದು ಹೇಳಿದರು. ಜನರು ಆಂತರಿಕ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಿ ಎಂದು ಕೇಳಿದರು. ಉದ್ಯೋಗಿಗಳ ಕಡಿತದ ಮೊದಲ ಭಾಗವನ್ನು ಗುರುವಾರ ಬೆಳಿಗ್ಗೆ ಮೆಟಾ ಕಾರ್ಯನಿರ್ವಾಹಕರಿಗೆ ವಿವರಿಸಲಾಗಿದೆ ಎಂದು ಹೇಳಲಾಗಿದೆ.

    ಮಾರ್ಚ್ 14 ರಂದು, ಮೆಟಾ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸಿ 5,000 ಅನಗತ್ಯ ಉದ್ಯೋಗಗಳನ್ನು ತೆಗೆದುಹಾಕಲು ಯೋಜಿಸಿದೆ ಎಂದು ಜುಕರ್‌ಬರ್ಗ್ ಹೇಳಿದರು. ಆದರೆ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರುವ ಎಲ್ಲ ಜನರಿಗೆ ಇನ್ನೂ ಸೂಚನೆ ನೀಡಲಾಗಿಲ್ಲ.

    ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದಲೇ ಆಂಟಿಯ ಬರ್ಬರ ಹತ್ಯೆ! ಶವಪರೀಕ್ಷೆಯಲ್ಲಿ ರಹಸ್ಯ ಬಯಲು

    ಉದಾಹರಣೆಗೆ, ಎಂಜಿನಿಯರಿಂಗ್‌ ವಿಭಾಗದಲ್ಲಿ ಉದ್ಯೋಗಿಗಳ ಕಡಿತವನ್ನು ಏಪ್ರಿಲ್‌ನಲ್ಲಿ ಮಾಡುವುದಾಗಿ ನಿಗದಿಪಡಿಸಲಾಗಿದೆ. ನವೆಂಬರ್‌ನಲ್ಲಿ ಕಂಪನಿಯು 11,000 ಜನರನ್ನು ಅಥವಾ ಅದರ 13% ಸಿಬ್ಬಂದಿಯನ್ನು ಕಡಿತಗೊಳಿಸಿತ್ತು. ಮಾರ್ಕ್​ ಜುಕರ್‌ಬರ್ಗ್ ಗುರುವಾರ ಉದ್ಯೋಗಿಗಳಿಗೆ ಆ ಕಡಿತಗಳು ಕಾರ್ಯಕ್ಷಮತೆಗೆ ಹೆಚ್ಚು ಸಂಬಂಧಿಸಿವೆ ಎಂದು ಹೇಳಿದರು. ಆದರೆ ಇತ್ತೀಚಿನ ಕಡಿತಗಳು ಹಣಕಾಸಿನ ಅಗತ್ಯತೆ ಮತ್ತು ಉತ್ಪನ್ನದ ಆದ್ಯತೆಗಳಿಂದಾಗಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಮೆಟಾದ ವಕ್ತಾರರು ಕಡಿತದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts