More

    ಈ ರಾಜಕಾರಣಿ ಪಾರ್ಲಿಮೆಂಟ್​ಗೆ ಹಾಜರಾಗುತ್ತಿರಲಿಲ್ಲ ಎಂದು ವಜಾ ಮಾಡಿದರು!

    ಜಪಾನ್​: ಈ ರಾಜಕಾರಣಿ ಪಾರ್ಲಿಮೆಂಟ್​ಗೆ ಹಾಜರಾಗುತ್ತಿರಲಿಲ್ಲ ಎಂದು ಅವರನ್ನು ವಜಾ ಮಾಡಲಾಗಿದೆ. ಇದು ಬಹು ಅಪರೂಪದ ಘಟನೆಯಾಗಿದ್ದು ಇದು ನಡೆದದ್ದು ಜಪಾನ್​ ದೇಶದಲ್ಲಿ.

    ಈ ಶಾಸಕ ಬರೇ ರಾಜಕಾರಣಿ ಆಗಿರದೇ ಯೂಟ್ಯೂಬರ್​ ಕೂಡ ಆಗಿದ್ದಾರೆ! ಇವರ ಹೆಸರು ಯೋಶಿಕಾಜು ಹಿಗಾಶಿತಾನಿ. ಅವರು ಆನ್‌ಲೈನ್​ ಜಗತ್ತಲ್ಲಿ GaaSyy ಎಂದೇ ಪರಿಚಿತರು. ಅನೇಕ ತಿಂಗಳುಗಳ ಕಾಲ ಸಂಸತ್ತಿಗೆ ಬರುತ್ತಲೇ ಇರಲಿಲ್ಲ ಎಂಬ ಕಾರಣಕ್ಕಾಗಿ ಕ್ಷಮೆಯಾಚಿಸಲು ಮಾರ್ಚ್‌ನಲ್ಲಿ ಅವರ ಆದೇಶಿಸಲಾಗಿತ್ತು.

    ಈ ಯೋಶಿಕಾಜು ಹಿಗಾಶಿತಾನಿ ಜತೆಗೆ ಸೀಜಿಕಾ ಜೋಶಿ (48), (ಆನ್​ಲೈನ್​ನಲ್ಲಿ ಪಾಲಿಟಿಶಿಯನ್​ ಗರ್ಸ್​ 48) ಎಂಬ ಫ್ರಿಂಜ್ ಪಾರ್ಟಿಯ ಇಬ್ಬರು ಚುನಾಯಿತ ಸದಸ್ಯರಲ್ಲಿ ಒಬ್ಬರಾದ ಶಾಸಕರು ಬರಲೇಬೇಕಾಗಿದ್ದ ಅಧಿವೇಶನಕ್ಕೂ ಹಾಜರಾಗಲಿಲ್ಲ.

    ಇದನ್ನೂ ಓದಿ: ಟರ್ಕಿ ನಂತರ ಜಪಾನ್​ ಹಾಗೂ ಅಫ್ಘಾನಿಸ್ತಾನದಲ್ಲೂ ಭೂಕಂಪ!

    51 ವರ್ಷದ ಹಿಗಾಶಿತಾನಿ, ಹಾಜರಿರಬೇಕಾದ ಅಗತ್ಯವಿದ್ದರೂ ಜುಲೈ 2022ರ ಚುನಾವಣೆಯ ನಂತರ ಹೌಸ್ ಆಫ್ ಕೌನ್ಸಿಲರ್‌ಗಳಿಗೂ ಕಾಲಿಟ್ಟಿರಲಿಲ್ಲ.

    ಮಾಜಿ ಉದ್ಯಮಿ ಮತ್ತು ಯೂಟ್ಯೂಬರ್ ಸಂಸತ್ತಿಗೆ ಹಾಜರಾಗುವ ಬದಲಿಗೆ ದುಬೈನಲ್ಲಿರುವ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅವರು ಜಪಾನ್‌ಗೆ ಹಿಂತಿರುಗಿದರೆ ಅವರನ್ನು ಬಂಧಿಸಬಹುದು ಎಂದು ಹೇಳಿಕೊಂಡಿದ್ದಾರೆ. ಅಲ್ಲಿ ಅವರು ಮಾನನಷ್ಟದ ಆರೋಪದ ಮೇಲೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಸಂಸತ್ತಿಗೆ ಬರದೇ ಇರುವ ಕಾರಣ ಜಪಾನ್‌ನ ಮೇಲ್ಮನೆ ಮಂಗಳವಾರ ಅವರನ್ನು ಸಂಸತ್ತಿನಿಂದ ಹೊರಹಾಕಲು ನಿರ್ಧರಿಸಿದೆ.

    ಈ ಕ್ರಮವನ್ನು ಬುಧವಾರ ಅಧಿಕೃತಗೊಳಿಸಲಾಯಿತು. ಇವರು 1951 ರಿಂದ ಹೊರಹಾಕಲ್ಪಟ್ಟ ಮೊದಲ ಜಪಾನಿನ ಶಾಸಕರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಹಿಗಾಶಿತಾನಿ ಅವರ ಸ್ಥಾನಕ್ಕೆ ಅವರ ಪಕ್ಷದ ಇನ್ನೊಬ್ಬ ಸದಸ್ಯ ಬರುತ್ತಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts