More

    ಕರೊನಾ ರೋಗಿಗಳನ್ನು ನೋಡುತ್ತಲೇ ಸುಸ್ತಾಗಿ ಕುಸಿದುಬಿದ್ದ ಡಾಕ್ಟರ್​: ವಿಡಿಯೋ ವೈರಲ್

    ನವದೆಹಲಿ: ಚೀನಾದಲ್ಲಿ ಕೋವಿಡ್​ನ ಹೊಸ ವೇರಿಯಂಟ್ ಹಾವಳಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದು, ಎರಡು ದಿನಗಳಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಮಧ್ಯೆ ಕರೊನಾ ರೋಗಿಗಳನ್ನು ನೋಡಿನೋಡಿ ಸುಸ್ತಾಗಿ ವೈದ್ಯರೊಬ್ಬರು ಕುಸಿದು ಬಿದ್ದ ಪ್ರಸಂಗವೂ ನಡೆದಿದೆ.

    ಚೀನಾದ ಆಸ್ಪತ್ರೆಯ ಮಹಡಿಯೊಂದರಲ್ಲಿ ಮೇಲಿಂದ ಮೇಲೆ ಬರುತ್ತಲೇ ಇದ್ದ ರೋಗಿಗಳನ್ನು ನೋಡಿ ಚಿಕಿತ್ಸೆ ನೀಡಿ ನೀಡಿ ಸುಸ್ತಾದ ವೈದ್ಯರೊಬ್ಬರು ಕುರ್ಚಿಯಲ್ಲಿ ಕುಳಿತಲ್ಲೇ ಕೆಳಕ್ಕೆ ಕುಸಿದಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ತಕ್ಷಣವೇ ಮಹಿಳೆಯೊಬ್ಬಳು ನೆರವಿಗೆ ಧಾವಿಸಿದ್ದು, ಬಳಿಕ ಉಳಿದ ಡಾಕ್ಟರನ್ನು ಕೂಗಿ ಕರೆದಿದ್ದಳು. ಇತರ ವೈದ್ಯರು ಕೂಡಲೇ ಧಾವಿಸಿ ಸಿಪಿಆರ್ ಮಾಡಿ ಚಿಕಿತ್ಸೆ ನೀಡುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಚೀನಾದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೋಂಕಿತರಾಗುತ್ತಿರುವುದು, ಸ್ಮಶಾನಗಳಲ್ಲೂ ಜಾಗ ಇಲ್ಲದಂತಾಗುತ್ತಿರುವುದರ ಜತೆ ಈಗ ವೈದ್ಯರೂ ಚಿಕಿತ್ಸೆ ನೀಡಲಾಗದೆ ಕುಸಿದಂಥ ಪ್ರಕರಣ ಮತ್ತಷ್ಟು ಆತಂಕ ಮೂಡಿಸಿದೆ.

    ಎಲ್ಲರೂ ಕರೊನಾ ಲಸಿಕೆ ಮೂರನೇ ಡೋಸ್ ಪಡೆಯಬೇಕು; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಶೀಘ್ರ ಬಿಡುಗಡೆ: ಸಚಿವ ಸುಧಾಕರ್

    400 ರೂ. ದುಡಿಯುವ ದಿನಗೂಲಿಯ ಮನೆಗೆ ಐಟಿ ನೋಟಿಸ್; 14 ಕೋಟಿ ರೂ. ಬಾಕಿ ಇದೆ ಎಂದ ಆದಾಯ ತೆರಿಗೆ ಅಧಿಕಾರಿಗಳು!

    ಥಿಯೇಟರ್​ಗಳಲ್ಲಿ ನಿಪ್ಪಟ್ಟು-ಬೆಣ್ಣೆಮುರುಕು ಥರದ ಸಾಂಪ್ರದಾಯಿಕ ತಿನಿಸುಗಳು ಸಿಕ್ಕರೆಷ್ಟು ಚೆನ್ನ!; ವೋಕಲ್ ಫಾರ್ ಲೋಕಲ್​ಗೆ ದನಿ ಎತ್ತಿದ ಕೃಪಾಲ್

    ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts