More

    ಥಿಯೇಟರ್​ಗಳಲ್ಲಿ ನಿಪ್ಪಟ್ಟು-ಬೆಣ್ಣೆಮುರುಕು ಥರದ ಸಾಂಪ್ರದಾಯಿಕ ತಿನಿಸುಗಳು ಸಿಕ್ಕರೆಷ್ಟು ಚೆನ್ನ!; ವೋಕಲ್ ಫಾರ್ ಲೋಕಲ್​ಗೆ ದನಿ ಎತ್ತಿದ ಕೃಪಾಲ್

    ಬೆಂಗಳೂರು: ವೋಕಲ್ ಫಾರ್ ಲೋಕಲ್ ಎಂಬುದು ಪ್ರತಿ ಭಾರತೀಯನ ಮಂತ್ರ ಆಗಬೇಕು ಎಂದು ಆತ್ಮನಿರ್ಭರ ಘೋಷಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಒಂದು ಪಕ್ಕಾ ಲೋಕಲ್ ಕಥೆಯನ್ನೇ ಸಿನಿಮಾ ಮಾಡಿಕೊಂಡು ‘ಕಾಂತಾರ’ದ ಮೂಲಕ ದೇಶಾದ್ಯಂತ ಜನಪ್ರಿಯತೆ ಪಡೆದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತಮ್ಮ ಚಿತ್ರದ ಯಶಸ್ಸಿನ ಕುರಿತು ಇಂಥದ್ದೇ ಮಾತನ್ನು ಹೇಳಿದ್ದರು.

    ಮೋರ್ ಲೋಕಲ್ ಈಸ್ ಮೋರ್ ಯುನಿವರ್ಸಲ್ ಎಂಬುದು ನನ್ನ ನಂಬಿಕೆ ಎಂದು ‘ಕಾಂತಾರ’ದ ಯಶಸ್ಸಿನ ಕುರಿತು ಮಾತನಾಡಿದ ಹಲವೆಡೆ ರಿಷಬ್​ ಶೆಟ್ಟಿ ಈ ಮಾತನ್ನು ಹೇಳಿದ್ದರು. ಇದೀಗ ಅಂಥದ್ದೇ ಒಂದು ವಿಚಾರ ಸಿನಿಮಾ ಥಿಯೇಟರ್​ಗಳಲ್ಲಿನ ತಿಂಡಿಗೆ ಸಂಬಂಧಿಸಿದಂತೆ ಕೇಳಿಬಂದಿದೆ. ಫುಡ್ ವ್ಲಾಗರ್ ಆಗಿರುವ ಕೃಪಾಲ್ ಅಮನ್ನ ಇಂಥದ್ದೊಂದು ದನಿ ಎತ್ತಿದ್ದಾರೆ.

    ಸಿನಿಮಾ ಥಿಯೇಟರ್​ಗಳಲ್ಲಿ ಒಟ್ಟಾರೆ ಟನ್​ಗಟ್ಟಲೆ ಪಾಪ್​ಕಾರ್ನ್ ಮಾರಾಟ ಆಗುತ್ತದೆ ಎಂಬುದನ್ನು ಕೇಳಿದ್ದೇನೆ. ಸಿನಿಮಾ ಮಾಲ್​ಗಳಲ್ಲಿ ಸಾಂಪ್ರದಾಯಿಕ ತಿನಿಸುಗಳೂ ಸಿಕ್ಕರೆ ಅದೆಷ್ಟು ಚೆನ್ನಾಗಿರುತ್ತಲ್ವಾ? ನಿಪ್ಪಟ್ಟು, ಬೆಣ್ಣೆ ಮುರುಕು.. ಈ ಥರ.. ನೀವು ಇನ್ಯಾವ ತಿಂಡಿ ಈ ಪಟ್ಟಿಗೆ ಸೇರಿಸುತ್ತೀರಿ? ಎಂದು ಅವರು ಮಾಡಿಕೊಂಡಿರುವ ಟ್ವೀಟ್ ಹಲವರ ಗಮನ ಸೆಳೆದಿದೆ. ಮಾತ್ರವಲ್ಲ, ಅವರ ಈ ಅಭಿಪ್ರಾಯಕ್ಕೆ ಲೈಕ್​-ರಿಟ್ವೀಟ್​ ಮಾಡುವ ಮೂಲಕ ಹಲವರು ದನಿಗೂಡಿಸಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಅತ್ಯಧಿಕ ಪ್ರತಿಕ್ರಿಯೆ ಬಂದಿದ್ದನ್ನು ಟ್ವಿಟರ್ ಇನ್​ಸೈಟ್ಸ್ ಹಂಚಿಕೊಳ್ಳುವ ಮೂಲಕ ಅವರು ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಥಿಯೇಟರ್​ಗಳಲ್ಲಿ ಸಾಂಪ್ರದಾಯಿಕ ತಿನಿಸುಗಳೂ ಸಿಗಬೇಕು ಎಂಬ ಬಗ್ಗೆ ಹಲವರು ಒಲವು ತೋರಿದ್ದಾರೆ.

    ಎಲ್ಲರೂ ಕರೊನಾ ಲಸಿಕೆ ಮೂರನೇ ಡೋಸ್ ಪಡೆಯಬೇಕು; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಶೀಘ್ರ ಬಿಡುಗಡೆ: ಸಚಿವ ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts