More

    ಬಿಎಂಆರ್‌ಸಿಎಲ್​ ಅವ್ಯವಹಾರ-ದುರಾಡಳಿತ ತನಿಖೆಗೆ ಆಗ್ರಹ; ಸಂಸ್ಥೆಯ ಮಾಜಿ ಅಧಿಕಾರಿಯಿಂದಲೇ ಮುಖ್ಯಮಂತ್ರಿಗೆ ಪತ್ರ

    ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ಹಾಗೂ ದುರಾಡಳಿತ ನಡೆದಿದ್ದು, ಕೋಟ್ಯಂತರ ರೂ. ಮೊತ್ತದ ಹಣ ನಷ್ಟವಾಗಿರುವುದನ್ನು ತನಿಖೆಗೆ ಒಳಪಡಿಸುವಂತೆ ಸಂಸ್ಥೆಯ ನಿವೃತ್ತ ಅಧಿಕಾರಿಯೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

    ಪ್ರತಿ ವರ್ಷ ಸಂಸ್ಥೆ ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದ್ದರೂ, ವಿಚಕ್ಷಣಾ ದಳವೇ ಇಲ್ಲ. ಬಿಎಂಆರ್‌ಸಿಎಲ್ ನಂತರ ದೇಶದ ವಿವಿಧೆಡೆ ಅಸ್ತಿತ್ವಕ್ಕೆ ಬಂದಿರುವ ಮೆಟ್ರೋ ನಗರಗಳಲ್ಲಿ ಪ್ರತ್ಯೇಕ ವಿಚಕ್ಷಣಾ ದಳ ಇದ್ದರೂ, ‘ನಮ್ಮ ಮೆಟ್ರೋ’ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ. ಇದರಿಂದ ದುಂದುವೆಚ್ಚ ಹೆಚ್ಚಿದ್ದು, ಅಧಿಕಾರಿಗಳು ಮನಸೋಇಚ್ಛೆ ನೇಮಕಾತಿ ಕೈಗೊಂಡಿದ್ದಾರೆ. ಅನರ್ಹರಿಗೆ ಆಯಾಕಟ್ಟಿನ ಹುದ್ದೆ ನೀಡಿ ಅವ್ಯವಹಾರವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದನ್ನು ಸಂಸ್ಥೆಯ ಹಿರಿಯ ಅಧಿಕಾರಿಗಳೇ ನೇತೃತ್ವ ವಹಿಸಿರುವುದರಿಂದ ನಮ್ಮ ಮೆಟ್ರೋ ನಷ್ಟದಲ್ಲಿ ಸಿಲುಕಿದೆ ಎಂದು ಬಿಎಂಆರ್‌ಸಿಎಲ್ ನಿವೃತ್ತ ಡಿಜಿಎಂ (ಮಾನವ ಸಂಪನ್ಮೂಲ ವಿಭಾಗ) ಮಂಜುನಾಥಸ್ವಾಮಿ ಜೆ ಅವರು ಸಿಎಂರನ್ನು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಮನೆಯೊಳಗಿನ ಗಣೇಶನ ಫೋಟೋ ಫ್ರೇಮ್​ ಒಳಗಿತ್ತು ನಾಗರಹಾವು!

    ನಮ್ಮ ಮೆಟ್ರೋದಲ್ಲಿ ನಿವೃತ್ತರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಸಂಸ್ಥೆಯ ನಿಯಮಕ್ಕೆ ವಿರುದ್ಧವಾಗಿ ನಿವೃತ್ತರಾದವರಿಗೆ ದೊಡ್ಡ ಮೊತ್ತ ನೀಡಿ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ. ಕೆಲ ತಿಂಗಳ ಹಿಂದೆ ಸುರಕ್ಷತಾ ಪ್ರಮಾಣಪತ್ರ ನೀಡಿದ್ದ ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತ ಎಸ್.ಕೆ.ಮಿಟ್ಟಲ್ ಅವರು ನಿವೃತ್ತಿ ಬಳಿಕ ಅಧಿಸೂಚನೆ ಹೊರಡಿಸದೆ ಬಿಎಂಆರ್‌ಸಿಎಲ್‌ಗೆ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದೇ ರೀತಿ 60-70 ವರ್ಷ ದಾಟಿದ ನಿವೃತ್ತರಿಗೆ ಮಾಸಿಕ 2-3 ಲಕ್ಷ ರೂ. ವೇತನ ನೀಡಲಾಗುತ್ತಿದೆ. ನೇಮಕಾತಿ ವೇಳೆ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಕಾಡುಗೋಡಿ, ಚಲ್ಲಘಟ್ಟ, ಸಿಲ್ಕ್ ಬೋರ್ಡ್, ಹೆಬ್ಬುಗೋಡಿ ಸ್ಟೇಷನ್/ಮಾರ್ಗಕ್ಕೆ ಸಂಬಂಧಿಸಿದ ಟೆಂಡರ್ 550 ಕೋಟಿ ರೂ.ನಿಂದ 750 ಕೋಟಿ ರೂ.ಗೆ ಏರಿಸಿ ಅನುಮೋದಿಸಲಾಗಿದೆ. ಇದು ಶೇ.200ರಷ್ಟು ಅಧಿಕ ಮೊತ್ತ ಇದ್ದು, ನಿಯಮ ಉಲ್ಲಂಸಲಾಗಿದೆ. ಇಂತಹ ಹತ್ತು ಹಲವು ಅಕ್ರಮ ಹಾಗೂ ದುರಾಡಳಿತ ಪ್ರಕರಣಗಳಿಂದ ಸಂಸ್ಥೆಯನ್ನು ಪಾರು ಮಾಡಲು ತನಿಖೆ ನಡೆಸಬೇಕು ಎಂದು ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

    16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts