More

    ಎಕ್ಸ್​ ಬಾಯ್​ಫ್ರೆಂಡ್​ಗಾಗಿ ವಿಷ ಹಾಕಿದ ಚಿಕನ್​ ಪಾರ್ಸಲ್​ ಮಾಡಿದ ಯುವತಿ! ಡೆಲಿವರಿ ಬಾಯ್​ ಮಗನ ಸಾವು

    ಜಕಾರ್ತಾ: ಮಾಜಿ ಪ್ರಿಯತಮನ ಮೇಲಿನ ದ್ವೇಷಕ್ಕಾಗಿ ಆತನನ್ನು ಕೊಲ್ಲಲು ಉಪಾಯ ಮಾಡಿದ ಯುವತಿಯೊಬ್ಬಳು ಚಿಕನ್​ ಖಾದ್ಯದಲ್ಲಿ ವಿಷ ಸೇವಿಸಿ ಅದನ್ನು ಪಾರ್ಸಲ್​ ಮಾಡಿದ್ದು, ದುರಾದೃಷ್ಟವಶಾತ್​ ಅದನ್ನು ಡೆಲಿವರಿ ಮಾಡಬೇಕಿದ್ದ ವ್ಯಕ್ತಿಯ ಮಗ ಸಾವನ್ನಪ್ಪಿರುವ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.

    ನೀನಿ ನೂರ್ಜಮಾನ್(25) ಹೆಸರಿನ ಯುವತಿ ಈ ಹಿಂದೆ ಟಾಮಿ ಹೆಸರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಪ್ರೀತಿ ಮುರಿದುಬಿದ್ದಿದೆ. ಅದಾದ ಮೇಲೆ ಆತ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಿ ಸಂಸಾರವನ್ನೂ ಆರಂಭಿಸಿದ್ದಾನೆ. ತನಗೆ ಕೈ ಕೊಟ್ಟು ಬೇರೆಯವಳೊಂದಿಗೆ ಮದುವೆಯಾದ ಟಾಮಿಗೆ ಬುದ್ಧಿ ಕಲಿಸಬೇಕೆಂದುಕೊಂಡಿದ್ದ ನೀನಿ ನೂರ್ಜಮಾನ್ ಉಪಾಯವೊಂದನ್ನು ಮಾಡಿದ್ದಾಳೆ. ಚಿಕನ್​ಗೆ ವಿಷ ಸೇರಿಸಿ, ಖಾದ್ಯವೊಂದನ್ನು ತಯಾರಿಸಿ ಅದನ್ನು ಪಾರ್ಸಲ್​ ಪ್ಯಾಕ್​ ಮಾಡಿದ್ದಾಳೆ. ಬೆಂಡಿಯಾಮಾನ್​ ಹೆಸರಿನ ಡೆಲಿವರಿ ಬಾಯ್​ನ ಕೈಗೆ ಅದನ್ನು ಕೊಟ್ಟು ಟಾಮಿಯ ಅಡ್ರೆಸ್​ಗೆ ಕೊಟ್ಟು ಬರುವಂತೆ ತಿಳಿಸಿದ್ದಾಳೆ.

    ಬೆಂಡಿಯಾಮಾನ್ ಟಾಮಿ ಮನೆ ಎದುರಿಗೆ ಹೋದಾಗ ಟಾಮಿಯ ಹೆಂಡತಿ ಬಾಗಿಲು ತೆರೆದಿದ್ದಾಳೆ. ನಾವೇನನ್ನೂ ಆರ್ಡರ್​ ಮಾಡಿಲ್ಲ, ಆದರೂ ಹೇಗೆ ಪಾರ್ಸಲ್​ ಬಂದಿದೆ ಎಂದು ಗೊಂದಲಕ್ಕೀಡಾದ ದಂಪತಿ ಆ ಪಾರ್ಸಲ್​ನ್ನು ನೀನೇ ತೆಗೆದುಕೊಂಡು ಹೋಗಿ ಅದರೊಳಗಿರುವುದನ್ನು ನೀನೇ ತಿನ್ನು ಎಂದು ಬೆಂಡಿಯಾಮಾನ್​ಗೆ ತಿಳಿಸಿದ್ದಾರೆ.

    ಅದರಂತೆ ಮನೆಗೆ ಬಂದ ಬೆಂಡಿಯಾಮಾನ್ ಪಾರ್ಸಲ್​ನಲ್ಲಿದ್ದ ಚಿಕನ್​ ಅನ್ನು ತನ್ನ ಹೆಂಡತಿ ಮತ್ತು ಮಗನಿಗೆ ಕೊಟ್ಟಿದ್ದಾನೆ. ಅದನ್ನು ತಿಂದ ಅವರಿಬ್ಬರು ವಾಂತಿ ಮಾಡಲು ಆರಂಭಿಸಿದ್ದಾರೆ. ತಕ್ಷಣ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಬೆಂಡಿಯಾಮಾನ್​ನ ಹೆಂಡತಿ ಮಾತ್ರ ಉಳಿದು, ಮಗ ಸಾವನ್ನಪ್ಪಿದ್ದಾನೆ. ಯಾರದ್ದೋ ದ್ವೇಷಕ್ಕೆ ಯಾರೋ ಬಲಿಯಾದಂತಾಗಿದೆ. (ಏಜೆನ್ಸೀಸ್​)

    ಭಾರತದಲ್ಲಿ ದಾಖಲೆ ಬರೆದ ಕರೊನಾ ಸಾವು! ಒಂದೇ ದಿನ 4 ಸಾವಿರಕ್ಕೂ ಅಧಿಕ ಮಂದಿ ಮೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts