More

    IPL 2024: ‘ಅವರಿಗೆ ಶೌಚಾಲಯಕ್ಕೂ ಹೋಗಲಾಗುತ್ತಿರಲಿಲ್ಲ’: ರಿಷಬ್ ಪಂತ್ ಸ್ಥಿತಿ ನೆನಪಿಸಿಕೊಂಡು ಭಾವುಕರಾದ ಶಿಖರ್ ಧವನ್

    ಪಂಜಾಬ್: ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಪುನರಾಗಮನಕ್ಕೆ ಸಿದ್ಧರಾಗಿದ್ದಾರೆ. ರಸ್ತೆ ಅಪಘಾತದ ನಂತರ ಗಾಯಗೊಂಡಿದ್ದ ಅವರು ಐಪಿಎಲ್ 2024 ರಲ್ಲಿ ಆಡಲಿದ್ದಾರೆ. ಬಿಸಿಸಿಐ ಅವರಿಗೆ ಆಡಲು ಅನುಮತಿ ನೀಡಿದೆ. ಐಪಿಎಲ್ 17ನೇ ಸೀಸನ್ ಮಾರ್ಚ್ 22ರಿಂದ ಆರಂಭವಾಗಲಿದೆ. ಎಲ್ಲರಿಗೂ ಗೊತ್ತಿರುವಂತೆ ಡಿಸೆಂಬರ್ 31, 2022 ರಂದು ಪಂತ್​​​ಗೆ ಭೀಕರ ಅಪಘಾತವಾಗಿತ್ತು. ಅವರ ಜೀವವು ಸ್ವಲ್ಪದರಲ್ಲೇ ಉಳಿಯಿತು. ಕಾಲುಗಳು ಮುರಿದುಹೋಗಿದ್ದವು, ತಲೆಗೆ ಗಾಯವಾಗಿತ್ತು. ಆದರೆ ಇದೀಗ ಅವರು ಮತ್ತೆ ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ.

    ಪಂತ್ ಮೈದಾನಕ್ಕೆ ಮರಳಿದ್ದಕ್ಕೆ ಇದೀಗ ಶಿಖರ್ ಧವನ್ ತುಂಬಾ ಖುಷಿಯಾಗಿದ್ದಾರೆ. ಕಷ್ಟದ ಹಂತದಿಂದ ಹೊರಬಂದ ನಂತರ ಪಂತ್ ಮೈದಾನದಲ್ಲಿ ಅಬ್ಬರಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಪಂಜಾಬ್ ಕಿಂಗ್ಸ್ ನಾಯಕ ಧವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಂತ್ ಅವರು ಕೆಲವು ತಿಂಗಳುಗಳಿಂದ ಏನೂ ಮಾಡಲಾಗದಷ್ಟು ನೋವಿನಲ್ಲಿದ್ದಾರೆ ಎಂದು ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಧವನ್ ಹೇಳಿದ್ದಾರೆ. ಶೌಚಾಲಯಕ್ಕೆ ಹೋಗಲು ಸಹ ಅವರಿಗೆ ಸಹಾಯ ಬೇಕಿತ್ತು. ಆ ಕೆಟ್ಟ ದಿನಗಳಿಂದ ಇಲ್ಲಿಯವರೆಗೆ ಅವರು ಸಾಕಷ್ಟು ತಾಳ್ಮೆ, ಸಕಾರಾತ್ಮಕತೆ ಮತ್ತು ಸಹನೆಯನ್ನು ತೋರಿಸಿದ್ದಾರೆ ರಿಷಭ್ ಮೊದಲಿನಂತೆ ಕಾಣಿಸಿಕೊಂಡಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಧವನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಆ ಕಷ್ಟದ ಸಮಯದಿಂದ ಇಲ್ಲಿಯವರೆಗೆ ಪಂತ್ ಸಾಕಷ್ಟು ಸಹನೆಯನ್ನು ತೋರಿಸಿದ್ದಾರೆ. ಇದು ಬಹಳ ದೊಡ್ಡ ವಿಷಯ. ಇದು ಖಂಡಿತವಾಗಿಯೂ ಅವರಿಗೆ ಸಾಕಷ್ಟು ಶಕ್ತಿಯನ್ನು ನೀಡಿದೆ. ಅವರು ತನಗಾಗಿ ಮತ್ತು ದೇಶಕ್ಕಾಗಿ ಅದ್ಭುತವಾಗಿ ಆಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಒಂದು ವರ್ಷದ ನಂತರ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಪುನರಾಗಮನ ಮಾಡುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಧವನ್ ತಿಳಿಸಿದರು.

    ಮುಂಬರುವ ಐಪಿಎಲ್ ಸೀಸನ್​​​​ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಶಿಖರ್, ಪಂತ್ ಜೊತೆಗೆ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದರು. ಆದರೆ ಶಿಖರ್ ಧವನ್ ಅವರನ್ನು 2021 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಿಡುಗಡೆ ಮಾಡಿತು. ನಂತರ ಅವರು ಪಂಜಾಬ್ ಕಿಂಗ್ಸ್‌ನೊಂದಿಗೆ ಆಡಲು ಪ್ರಾರಂಭಿಸಿದರು. ಈ ಬಾರಿ ಪಂಜಾಬ್ ಪಂದ್ಯಗಳನ್ನು ಮುಲ್ಲನ್‌ಪುರದ ಮಹಾರಾಜ ಯದ್ವಿಂದರ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದೆ. 

    ಪಂತ್ ಆಗಮನದ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ಗೆ ಶಾಕ್​; ಟೂರ್ನಿಯಿಂದ ಹಿಂದೆ ಸರಿದ ಪ್ರಮುಖ ಆಟಗಾರ

    ಹರಿದ ಸೀರೆ ಉಡುತ್ತಿದ್ದ ಅಮ್ಮ, ತುತ್ತು ಅನ್ನಕ್ಕೂ ಕಷ್ಟವಿತ್ತು..ಆದರಿಂದು ಕೂತು ತಿನ್ನುವಷ್ಟು ಆಸ್ತಿಯಿದೆ..ಈ ನಟ ಯಾರೆಂದು ಗುರುತಿಸುವಿರಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts