More

    ಪಠ್ಯದೊಂದಿಗೆ ಕಲೆಯ ಕಲಿಕೆಯೂ ಅಗತ್ಯ: ತೇಜಸ್ವಿ ಶಂಕರ್ ಅನಿಸಿಕೆ

    ಉಡುಪಿ: ಹೆಣ್ಣು ಮಕ್ಕಳು ಪಠ್ಯದೊಂದಿಗೆ ಜೀವನಕ್ಕೆ ಅಗತ್ಯವಾದ ಇನ್ನಿತರ ಕಲೆಯನ್ನೂ ಕಲಿತುಕೊಳ್ಳಬೇಕು ಎಂದು ಪೂರ್ಣಪ್ರಜ್ಞ ಹಳೆಯ ವಿದಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ವಿ ಶಂಕರ್ ಸಲಹೆ ನೀಡಿದರು.

    ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ(ಸ್ವಾಯತ್ತ) ಮಹಿಳಾ ವೇದಿಕೆ, ಹಳೆಯ ವಿದ್ಯಾರ್ಥಿ ಸಂಘ ಹಾಗೂ ಉಡುಪಿಯ ಸಾಫಲ್ಯ ಟ್ರಸ್ಟ್, ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಆಶ್ರಯದಲ್ಲಿ ವಾರಗಳ ಕಾಲ ನಡೆಯಲಿರುವ ಸೀರೆಯ ಎಂಬ್ರಾಯ್ಡರಿ ಮತ್ತು ಕುಚ್ಚು ಹಾಕುವ ಕಾರ್ಯಾಗಾರವನ್ನು ಇತ್ತೀಚೆಗೆ ಉದ್ಘಾಟಿಸಿ ವಾತನಾಡಿದರು.

    ಸವಾರೋಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಫಲ್ಯ ಟ್ರಸ್ಟ್‌ನ ತಾರಾದೇವಿ ವಾತನಾಡಿ, ಹೆಣ್ಣು ಮಕ್ಕಳು ಕಲೆ-ಸಂಗೀತ, ಕ್ರೀಡೆ ಹೀಗೆ ಎಲ್ಲ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

    ಭಾರತೀಯ ವಿಕಾಸ್ ಟ್ರಸ್ಟ್‌ನ ಲಕ್ಷ್ಮೀಬಾಯಿ ಮಾತನಾಡಿ, ಸ್ವಾವಲಂಬಿ ಬದುಕಿಗೆ ಅಸರೆ ಆಗಬಲ್ಲ ಇಂತಹ ಕಾರ್ಯಾಗಾರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

    ಪೂರ್ಣಪ್ರಜ್ಞ ಕಾಲೇಜಿನ ಆಡಳಿತಾಧಿಕಾರಿ ಡಾ.ಎ.ಪಿ.ಭಟ್ ಉಪಸ್ಥಿತರಿದ್ದರು. ಮಹಿಳಾ ವೇದಿಕೆಯ ಅರ್ಚನಾ ಎಸ್. ಕಾರಂತ್, ಡಾ. ಭೈರವಿ ಪಾಂಡ್ಯ ಕಾರ್ಯಾಗಾರ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಸುಪರ್ಣಾ, ಕೆ.ಪಿ. ನೇಹಾ ಮತ್ತು ಕ್ಷವಾ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts