More

    ಆನೇಕಲ್ ಗಡಿ ಭಾಗಕ್ಕೆ ಬಂದ ಕಾಡಾನೆಗಳು: ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಪರದಾಟ

    ಆನೇಕಲ್: ತಾಲೂಕಿನ ವಣಕನಹಳ್ಳಿ ಮತ್ತು ಸೋಲೂರು ಭಾಗದಲ್ಲಿ ಕಾಡಾನೆಗಳ ಉಪಟಳಕ್ಕೆ ರೈತರು ಕಂಗಾಲಾಗಿದ್ದಾರೆ. ಗಡಿ ಭಾಗದಲ್ಲಿ ಕಾಡಾನೆಗಳು ದಾಂಗುಡಿಯಿಟ್ಟಿದ್ದು, ಐದು ಕಾಡಾನೆಗಳು ನಿನ್ನೆ ರಾತ್ರಿಯಿಂದ ರೈತರ ಜಮೀನಿನಲ್ಲಿ ಓಡಾಡುತ್ತಿವೆ.

    ಇದನ್ನೂ ಓದಿ:  ಮಹಿಳೆಯ ಹೊಟ್ಟೆ ಸ್ಕ್ಯಾನ್​ ಮಾಡಿದಾಗ ವೈದ್ಯರಿಗೆ ಕಾದಿತ್ತು ಶಾಕ್! ಪತ್ತೆಯಾಯ್ತು 11.5 ಕೆ.ಜಿ. ಗಡ್ಡೆ…

    ಆನೆಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ. ಕಾಡಾನೆಗಳು ರೈತರು ಬೆಳೆದ ಬೆಳೆ ಸಂಪೂರ್ಣ ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗೆ ಓಡಿಸುತ್ತಿದ್ದಾರೆ.

    ಇದನ್ನೂ ಓದಿ:ಬಿಬಿಎಂಪಿಯಲ್ಲಿ ಮೇಜರ್ ಸರ್ಜರಿಗೆ ಮುಂದಾದ ಡಿಸಿಎಂ; ಆರ್​​​ಆರ್ ನಗರ ವಲಯಕ್ಕೆ ನೂತನ ಅಧಿಕಾರಿಗಳ ನೇಮಕ

    ಆನೆಗಳನ್ನು ನೋಡಲು ಸಾರ್ವಜನಿಕರು ಜಮಾಯಿಸುತ್ತಿರುವುದರಿಂದ ರೈತರ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಆನೆಗಳು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts