More

    ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದವರ ಬಂಧನ

    ಚಾಮರಾಜನಗರ : ಕಾವೇರಿ ವನ್ಯಜೀವಿ ಧಾಮವನ್ನು ಅಕ್ರಮವಾಗಿ ಪ್ರವೇಶಿಸಿ ಕಾವೇರಿ ನದಿಯಲ್ಲಿ ಮೀನು ಹಿಡಿಯುತ್ತಿದ್ದ ಎಂಟು ಜನರು ಚಿಕ್ಕಲ್ಲೂರು ಅರಣ್ಯಾಧಿಕಾರಿಗಳಿಗೆ ಸಿಕ್ಕುಬಿದ್ದಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ.

    ಚಾಮರಾಜನಗರ ಜಿಲ್ಲೆಯ ಹನೂರು ಉಪವಿಭಾಗದ ವ್ಯಾಪ್ತಿಗೆ ಬರುವ ಚಿಕ್ಕಲ್ಲೂರು ಶಾಖೆಯ ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಚ್ 29ರ ರಾತ್ರಿ ಗಸ್ತಿನಲ್ಲಿರುವಾಗ ಕೆಲವರು ಅಕ್ರಮವಾಗಿ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ. ರಾತ್ರಿ 10.30 ವೇಳೆಗೆ ಮೂವರು ಮಹಿಳೆಯರೂ ಸೇರಿದಂತೆ ಎಂಟು ಮಂದಿ ಕಾವೇರಿ ವನ್ಯಜೀವಿ ಧಾಮದ ನದಿ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಕೆಲಸ ಹೋಯಿತು ಎಂದು ಸಾವಿಗೆ ಶರಣಾದ ಯುವಕ

    ಕೊಳ್ಳೇಗಾಲದ ಶಿಲಿವೇಪುರ-ಜಾಗೇರಿಯ ನಿವಾಸಿಗಳಾದ ಚಿನ್ನಪ್ಪ(42), ಅಮಲ್(32), ಪೀಟರ್ (35), ಸ್ಟ್ಯಾನ್ಲಿ(35), ಅರುಳ್ ರಾಜ್(35), ಪೆರಿನಾಯಗಮ್ಮ(34), ಜ್ಯೋತಿ ಪ್ರಿಯ(28), ಸುನೀತಾ(24) ಬಂಧಿತ ಆರೋಪಿಗಳು. ಆರೋಪಿಗಳಿಂದ 5 ತೆಪ್ಪ, ಬಲೆಗಳು, ಚೂರಿ, ಕೈಚೀಲ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಸಾಮಾನ್ಯವಾಗಿ ಮಹಿಳೆಯರು ಮೀನು ಮಾರಾಟದಲ್ಲಿ ತೊಡಗುತ್ತಾರೆ. ಆದರೆ ಇಲ್ಲಿ ರಾತ್ರಿ ವೇಳೆ ಕಾಡಿನಲ್ಲಿ ಅಕ್ರಮ ಮೀನುಗಾರಿಕೆಯಲ್ಲಿ ಮಹಿಳೆಯರು ಭಾಗಿಯಾಗಿ ಸಿಕ್ಕುಬಿದ್ದಿದ್ದಾರೆ‌‌ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಆದಾಯ ತೆರಿಗೆ ಇಲಾಖೆಯಿಂದ ಸಿಹಿಸುದ್ದಿ : 2,24,829 ಕೋಟಿ ರೂ. ರೀಫಂಡ್

    ಮತ್ತೆರಡು ನಾಮಪತ್ರ… ರಂಗೇರಿದ ಕಸಾಪ ಚುನಾವಣೆ ಕಣ !

    ‘ದೇಶಮುಖ್ ವಿರುದ್ಧ ದೂರು ಏಕೆ ದಾಖಲಿಸಲಿಲ್ಲ ?’ – ಹೈಕೋರ್ಟ್ ಪ್ರಶ್ನೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts