More

    ಚುನಾವಣಾ ಅಕ್ರಮಕ್ಕೆ ‘ಸಿ-ವಿಜಿಲ್​’ ಕ್ರಮ

    ಪಾರದರ್ಶಕ ಚುನಾವಣೆಗೆ ಸಹಕಾರದೂರು ಕೊಟ್ಟರೆ ಆ್ಯಪ್​ನಿಂದ ಪರಿಹಾರ

    ಪ್ರಶಾಂತ ಭಾಗ್ವತ, ಉಡುಪಿ
    ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ಬಿಸಿಲ ಝಳದೊಂದಿಗೆ ನಿಧಾನವಾಗಿ ಏರತೊಡಗಿದ್ದು, ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ತಿಳಿದೋ, ತಿಳಿಯದೆಯೋ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮ ನಡೆದರೆ ‘ಸಿ-ವಿಜಿಲ್​’ ಕ್ರಮಕೈಗೊಳ್ಳಲಿದೆ.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ನಿರ್ಣಾಯಕರಾಗಿದ್ದರಿಂದ ಎಲ್ಲಿಯೇ ಚುನಾವಣಾ ಅಕ್ರಮ ಕಂಡು ಬಂದರೆ ದೂರು ನೀಡಲು ಚುನಾವಣಾ ಆಯೋಗ ಅನೇಕ ಅವಕಾಶ ನೀಡಿದೆ. ಅದರಲ್ಲಿ ‘ಸಿ-ವಿಜಿಲ್​’ ಎಂಬ ಸಂಪೂರ್ಣ ಉಚಿತವಾದ ಆ್ಯಪ್​ ಈ ಬಾರಿ ಗಮನ ಸೆಳೆದಿದೆ.

    24 ಗಂಟೆಯೂ ಕಾರ್ಯ

    ಯಾವುದೇ ಅಭ್ಯರ್ಥಿ ಅಥವಾ ಪಕ್ಷದವರು ಅಥವಾ ಅವರ ಪರವಾಗಿ ಮತದಾರರನ್ನು ಸೆಳೆಯಲು ಯತ್ನಿಸಬಹುದು. ವ್ಯಕ್ತಿಯೊಬ್ಬರು ರ್ನಿದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಹಣ ವಿತರಣೆ ಮಾಡಿದರೆ, ಉಡುಗೊರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೆ ಬ್ಯಾನರ್​ ಅಥವಾ ಪೋಸ್ಟರ್​ ಅಳವಡಿಸುವುದು, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದನಕಾರಿ ಭಾಷಣ, ಮತಗಟ್ಟೆಯ 200 ಮೀಟರ್​ ಪ್ರದೇಶದಲ್ಲಿ ನಿಷೇಧದ ಅವಧಿಯಲ್ಲಿ ಪ್ರಚಾರ, ಮತದಾನದ ದಿನದಂದು ಮತದಾರರನ್ನು ಸಾಗಿಸುವುದು ಹೀಗೆ ಯಾವುದೇ ರೀತಿಯ ಅಕ್ರಮ ಕಂಡು ಬಂದಲ್ಲಿ ಸಿ-ವಿಜಿಲ್​ಗೆ ದೂರು ಕೊಡಬಹುದು. ಚುನಾವಣೆ ಮುಗಿಯುವವರೆಗೂ ಮೂರು ಪಾಳಿಗಳಲ್ಲಿ 24 ಗಂಟೆಯೂ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

    ಮೊಬೈಲ್​ನಲ್ಲೇ ದೂರು

    ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ನೀಡಲು ಸ್ಮಾರ್ಟ್​ೋನ್​ನಲ್ಲಿ ಗೂಗಲ್​ ಪ್ಲೇ ಸ್ಟೋರ್​ ಅಥವಾ ಆಪಲ್​ ಆ್ಯಪ್​ ಸ್ಟೋರ್​ನಿಂದ ಸಿ-ವಿಜಿಲ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಆ್ಯಪ್​ ಓಪನ್​ ಮಾಡಿದಾಗ ನಿಮ್ಮ ಹೆಸರು ಹಾಗೂ ಮೊಬೈಲ್​ ಸಂಖ್ಯೆ ಹಾಕಿ ರಿಜಿಸ್ಟರ್​ ಮಾಡಿಕೊಳ್ಳಬೇಕು. ಚುನಾವಣಾ ಸಂಬಂಧಿತ ಯಾವುದೇ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ಆಗಿರುವ ಅಥವಾ ಆಗುತ್ತಿರುವ ಫೋಟೋ ಅಥವಾ ವೀಡಿಯೋಗಳನ್ನು ಸಿ&ವಿಜಿಲ್​ನಲ್ಲಿರುವ ಅಪ್ಲಿಕೇಷನ್​ ಮೂಲಕ ಅಪ್​ಲೋಡ್​ ಮಾಡಬೇಕು.

    ಅಪ್ಲಿಕೇಷನ್​ ಕಾರ್ಯನಿರ್ವಹಣೆ ಹೇಗೆ?

    ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಣ, ಮದ್ಯ, ಉಡುಗೊರೆ ಇನ್ನಿತರ ಆಮಿಷ ಒಡ್ಡುತ್ತಿರುವ ಸಂದರ್ಭದ ಫೋಟೋ ಮತ್ತು 2 ನಿಮಿಷದ ವಿಡಿಯೋ ಸೆರೆಹಿಡಿದು ಈ ಆ್ಯಪ್​ನಲ್ಲಿ ಅಪ್​ಲೋಡ್​ ಮಾಡಬೇಕು. ಅಕ್ರಮ ನಡೆಯುತ್ತಿರುವ ಅಥವಾ ನಡೆದ ಸ್ಥಳದ ವಿಳಾಸ ನಮೂದಿಸಬೇಕು. ಜಿಲ್ಲಾ ಮಟ್ಟದ ಸಿ-ವಿಜಿಲ್​ ನೋಡಲ್​ ಅಧಿಕಾರಿಗಳು ದೂರಿಗೆ ಸಂಬಂಧಿಸಿದಂತೆ ಆ ಕ್ಷೇತ್ರ ವ್ಯಾಪ್ತಿಯ ಎಫ್​ಎಸ್​ಟಿ ತಂಡದವರಿಗೆ ಕ್ರಮ ಕೈಗೊಳ್ಳಲು ಕಳುಹಿಸಿಕೊಡುತ್ತಾರೆ. ಅವರು ಆ ದೂರುಗಳಿಗೆ 100 ನಿಮಿಷದ ಒಳಗಾಗಿ ಕ್ರಮ ಕೈಗೊಳ್ಳುತ್ತಾರೆ. ದೂರುದಾರರ ಹೆಸರು, ವಿಳಾಸ ಗೌಪ್ಯವಾಗಿ ಇಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದ್ದಾರೆ.

    ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಂಟ್ರೋಲ್​ ರೂಂ ಮತ್ತು ಸಿ-ವಿಜಿಲ್​ ತಂಡ ಕಾರ್ಯನಿರ್ವಹಿಸುತ್ತಿದೆ. ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಏ.18ರ ಮಧ್ಯಾಹ್ನದವರೆಗೆ ಒಟ್ಟು 650 ದೂರು ಸಿ-ವಿಜಿಲ್​ನಲ್ಲಿ ದಾಖಲಾಗಿದ್ದು, ಎಲ್ಲ ಪ್ರಕರಣ ವಿಲೇವಾರಿ ಮಾಡಲಾಗಿದೆ. 1950 ವೋಟರ್​ ಹೆಲ್ಪ್​ಲೈನ್​ಗೆ 172 ದೂರು, ಎನ್​ಜಿಎಸ್​ಪಿ-140 ದೂರು ಬಂದಿದ್ದು ಕ್ರಮ ಕೈಗೊಳ್ಳಲಾಗಿದೆ.

    ಕುಮಾರ್​ ಬಿ.ಆರ್​.
    ಜಿಲ್ಲಾ ಸಿ -ವಿಜಿಲ್​ ನೋಡಲ್​ ಅಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts