More

    ಎರಡು ರೈಲುಗಳ ಮಧ್ಯೆ ಅಪಘಾತ: 8 ಮಂದಿ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

    ಆಂಧ್ರಪ್ರದೇಶ: ಇಂದು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಎರಡು ರೈಲುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಎರಡು ರೈಲುಗಳ ನಡುವಿನ ಸಂಘರ್ಷದಿಂದ ಈ ಅವಘಡ ಉಂಟಾಗಿದೆ.

    ವಿಶಾಖಪಟ್ಟಣ-ಪಾಲಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣ-ರಾಯಗಡ ರೈಲುಗಳ ಹಿಂಭಾಗ ಘರ್ಷಣೆಗೆ ಒಳಗಾದ್ದರಿಂದ ಈ ಅವಘಡ ಸಂಭವಿಸಿದೆ. ಈ ಅವಘಡದ ತೀವ್ರತೆಗೆ ರೈಲು ಹಳಿ ತಪ್ಪಿದ್ದು, ಬೋಗಿ ಕಳಚಿಕೊಂಡ ಪ್ರಕರಣವೂ ನಡೆದಿದೆ.

    ವಿಶಾಖಪಟ್ಟಣಂ-ಪಾಲಸ ರೈಲು ಓವರ್​ಹೆಡ್ ಕೇಬಲ್ ಸಂಪರ್ಕ ಕಡಿತಗೊಂಡಿದ್ದರಿಂದ ನಿಂತಿತ್ತು. ನಂತರ ಬಂದ ಇನ್ನೊಂದು ರೈಲು ಅದಕ್ಕೆ ಡಿಕ್ಕಿ ಹೊಡೆದಿದ್ದು, ಮೂರು ಬೋಗಿಗಳು ಹಳಿ ತಪ್ಪಿವೆ. ಸಿಬ್ಬಂದಿಯ ಲೋಪವೂ ಅವಘಡಕ್ಕೆ ಕಾರಣ ಎಂದು ರೈಲ್ವೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಸಂತ್ರಸ್ತರಾದವರ ನೆರವಿಗಾಗಿ ಈಸ್ಟ್ ಕೋಸ್ಟ್​ ರೈಲ್ವೆ ಸಹಾಯವಾಣಿ ಆರಂಭಿಸಿದ್ದು, ತುರ್ತು ಕಾರ್ಯಾಚರಣೆ ಭರದಿಂದ ನಡೆದಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ, ಸಂತಾಪ ಸೂಚಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕೈಗೊಂಡಿದ್ದಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಸಂತಾಪ ಸೂಚಿಸಿದ್ದು, ಸೂಕ್ತ ಕ್ರಮಕೈಗೊಂಡಿದ್ದಾಗಿ ತಿಳಿಸಿದ್ದಾರೆ.

    ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts