More

    ಜಪಾನ್​ನಲ್ಲಿ ಭಾರಿ ಭೂಕಂಪ; ಸುನಾಮಿ ಮುನ್ಸೂಚನೆ, ಲಕ್ಷಾಂತರ ಮನೆಗಳು ಕತ್ತಲಲ್ಲಿ…

    ಟೋಕಿಯೋ: ಜಪಾನ್​ನಲ್ಲಿ ಇಂದು ರಾತ್ರಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3 ದಾಖಲಾಗಿದೆ. ಮಾತ್ರವಲ್ಲ, ಜಪಾನ್ ಹವಾಮಾನ ಇಲಾಖೆ ಸುನಾಮಿ ಮುನ್ಸೂಚನೆಯನ್ನೂ ನೀಡಿದೆ.

    ಫುಕುಷಿಮಾ ಪ್ರದೇಶದಲ್ಲಿ 60 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಕಂಡುಬಂದಿದ್ದು, ಅಲ್ಲಿನ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಸುನಾಮಿ ಉಂಟಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

    ಈ ಭೂಕಂಪದಿಂದ ಅಲ್ಲಿ ಸದ್ಯಕ್ಕೆ ಯಾವುದೇ ಸಾವು-ನೋವು ವರದಿಯಾಗಿಲ್ಲ. ಆದರೆ ಲಕ್ಷಾಂತರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ಟೋಕಿಯೋದಲ್ಲಿನ 7 ಲಕ್ಷ ಸೇರಿ ಒಟ್ಟು 20 ಲಕ್ಷ ಮನೆಗಳಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಅಲ್ಲಿನ ವಿದ್ಯುತ್ ಸರಬರಾಜು ಸಂಸ್ಥೆ ಟೆಪ್ಕೊ ತಿಳಿಸಿದೆ.

    ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!

    ಮಂಗಳೂರು ಏರ್​ಪೋರ್ಟಲ್ಲಿ ಬಾಂಬ್ ಇಟ್ಟ ಪ್ರಕರಣ; ಆರೋಪಿ ಆದಿತ್ಯಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts