More

    ಈ ಖದೀಮರ ಮನೆಯಲ್ಲೇ ತಯಾರಾಗುತ್ತಿತ್ತು ಆಧಾರ್, ಪ್ಯಾನ್, ವೋಟರ್ ಐಡಿ! ಸಾವಿರಾರು ನಕಲಿ ದಾಖಲೆ ವಶ

    ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಾನೋಗ್ರಾಮ್ ಬಳಸಿ ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿಗಳನ್ನೂ, ಕದ್ದ ವಾಹನಗಳಿಗೆ ನಕಲಿ ಆರ್​ಸಿ ಕಾರ್ಡ್​ಗಳನ್ನೂ ತಯಾರಿಸಿ ಹಂಚುತ್ತಿದ್ದ ವಂಚಕರ ಜಾಲವೊಂದನ್ನು ಬೆಂಗಳೂರು ಸಿಸಿಬಿ ಪತ್ತೆ ಮಾಡಿದೆ.

    ಸರ್ಕಾರಿ ಸಂಸ್ಥೆಗಳು ಮಾತ್ರ ನೀಡಬಹುದಾದ ದಾಖಲಾತಿಗಳನ್ನು ಮನೆಯಲ್ಲೇ ಕಂಪ್ಯೂಟರ್, ಪ್ರಿಂಟರ್ ಇಟ್ಟುಕೊಂಡು ಮುದ್ರಿಸಿ ಬೇರೆ ಬೇರೆ ಜನರಿಗೆ ಸರಬರಾಜು ಮಾಡಿ ದುಡ್ಡು ಮಾಡುತ್ತಿದ್ದ ಗುಬ್ಲಾಳ ಗ್ರಾಮದ ನಿವಾಸಿ ಕಮಲೇಶಕುಮಾರ್ ಭವಾಲಿಯಾ(33) ಮತ್ತು ಅವನ 9 ಸಹಚರರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
    ಹೆಸರು ವಿಳಾಸ ಮುದ್ರಿಸದೆ ಸರ್ಕಾರದ ಚಿಹ್ನೆಗಳನ್ನು ಮುದ್ರಿಸಿದ ಸಾವಿರಾರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಕಾರ್ಡ್ ಗಳನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೊತೆಯಲ್ಲಿ ಈ ನಕಲಿ ದಂಧೆಗೆ ಬಳಸುತ್ತಿದ್ದ 3 ಲ್ಯಾಪ್​ಟಾಪ್, 3 ಪ್ರಿಂಟರ್, ಒಂದು ಸಿ.ಪಿ.ಯು. ಹಾಗೂ 67000 ರೂಪಾಯಿ ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ: ವಿದ್ಯಾರ್ಥಿಗಳು ಮಠದ ಪರಂಪರೆಯ ಭಾಗ ; ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಎನ್.ಭೃಂಗೀಶ್ ಬಣ್ಣನೆ

    ಕನಕಪುರ ರಸ್ತೆಯ ಗುಬ್ಲಾಳ ಗ್ರಾಮದ 80 ಅಡಿ ರಸ್ತೆಯ ನಿವಾಸಿ ಕಮಲೇಶಕುಮಾರ್ ಮನೆಯಲ್ಲೇ ಈ ನಕಲಿ ದಾಖಲೆಗಳ ಮುದ್ರಣ ಮಾಡುತ್ತಿದ್ದು, ದಾಸ್ತಾನು ಮಾಡಿರುವುದಾಗಿ ಸಿಕ್ಕ ಖಚಿತ ಮಾಹಿತಿ ಮೇಲೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ವಿಶೇಷ ವಿಚಾರಣಾ ದಳದ ಪೋಲೀಸರು ಧಾಳಿ ನಡೆಸಿದರು. ಈತನನ್ನು ವಶಕ್ಕೆ ತೊಗೊಂಡು ವಿಚಾರಣೆ ನಡೆಸಿದಾಗ ಆತನೊಂದಿಗೆ ಹಲವರು ಸೇರಿ ರಾಜ್ಯಾದ್ಯಂತ ವಿಸ್ತಾರವಾದ ಜಾಲವನ್ನು ಹೊಂದಿರುವುದಾಗಿ ತಿಳಿದುಬಂತು.

    ಈ ಜಾಲದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬೆಂಗಳೂರಿನ ಪುಟ್ಟೇನಹಳ್ಳಿ ನಿವಾಸಿ ಎಸ್. ಲೋಕೇಶ್ (37 ವರ್ಷ), ಶಾಂತಿನಗರದ ನಿವಾಸಿಗಳಾದ ಸುದರ್ಶನ್(50) ಮತ್ತು ನಿರ್ಮಲ್​ಕುಮಾರ್(56),ಕೆಂಗೇರಿಯ ಹರ್ಷ ಲೇಔಟ್ ನಿವಾಸಿ ದರ್ಶನ್ (25), ಹಾಸನ ಜಿಲ್ಲೆ ಗವೇನಹಳ್ಳಿಯ ಶ್ರೀಧರ (31), ಬೆಂಗಳೂರಿನ ಕೆಂಚನಪುರ ಕ್ರಾಸ್ ನಿವಾಸಿ ಚಂದ್ರಪ್ಪ, ವಿಜಯನಗರದ ನಿವಾಸಿ ಅಭಿಲಾಶ್, ಬಸವೇಶ್ವರನಗರದ ತೇಜಸ್ ಮತ್ತು ಸರಸ್ವತಿನಗರದ ನಿವಾಸಿ ಶ್ರೀಧರ ದೇಶಪಾಂಡೆ ಅವರನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.

    ಕನಕಪುರ ರಸ್ತೆಯ ಗುಬ್ಲಾಳ ಗ್ರಾಮದ ಕಮಲೇಶ್, ಶಾಂತಿನಗರದಲ್ಲಿ ಬ್ರಿಗೇಡ್ ಪ್ರಿಂಟ್ಸ್ ನಡೆಸುತ್ತಿರುವ ಸುದರ್ಶನ್ ಮತ್ತು ನಿರ್ಮಲ್ ಹಾಗೂ ಪುಟ್ಟೇನಹಳ್ಳಿಯ ಲೋಕೇಶ್ ಮನೆಗಳಿಂದ ನಕಲಿ ಕಾರ್ಡುಗಳನ್ನು, ಮುದ್ರಣಕ್ಕೆ ಬಳಸುತ್ತಿದ್ದ ಯಂತ್ರಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ಜಾನಪದ ಅಕಾಡೆಮಿಯ ರಾಜ್ಯ ಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ

    ಬಂಧಿತರಲ್ಲಿ ಕೆಲವರು ಸರ್ಕಾರಿ ಇಲಾಖೆಗಳು ಮುದ್ರಣದ ಗುತ್ತಿಗೆ ಕೊಟ್ಟಿರುವ ರೋಸ್​ಮರ್ಟಾ ಟೆಕ್ನಾಲಜೀಸ್ ಕಂಪೆನಿಯ ನೌಕರರು. ಅಲ್ಲಿಂದ ಡಾಟಾ ಕದ್ದುಕೊಂಡು ಬಂದು ಪರ್ಯಾಯವಾಗಿ ಇವರೇ ಕಾರ್ಡುಗಳನ್ನು ಮುದ್ರಿಸಿ ಹಣ ಸಂಪಾದಿಸುತ್ತಿದ್ದರು. ಈ ವಂಚಕರು ಕಳೆದ ಎರಡು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದು, ಅವರು ಈವರೆಗೆ ಮುದ್ರಿಸಿ ವಿತರಿಸಿದ ಕಾರ್ಡುಗಳ ಬಗ್ಗೆ ಪೋಲೀಸರ ತನಿಖೆ ಮುಂದುವರಿದಿದೆ.

    ಪಾಸ್​ಪೋರ್ಟ್ ಪಡೆಯಲು, ಬ್ಯಾಂಕಿನಲ್ಲಿ ಸಾಲ ಪಡೆಯಲು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮುಂತಾದ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ. ಕಳ್ಳತನದ ವಾಹನಗಳಿಗಾಗಿ ಆರ್.ಸಿ.ಕಾರ್ಡ್ ಮುದ್ರಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ತಲಘಟ್ಟಪುರ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದು, ಬೆಂಗಳೂರು ನಗರ ಜಂಟಿ ಪೋಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಉಪಪೋಲೀಸ್ ಆಯುಕ್ತರಾದ ಕೆ.ಪಿ.ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೋಲೀಸ್ ಆಯುಕ್ತ ಎನ್.ಹನುಮಂತರಾಯ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

    ಏನೇನು ಸಿಕ್ಕಿದೆ?
    *ಹೆಸರು ವಿಳಾಸ ನಮೂದಿಸದೆ ಇರುವ ಸರ್ಕಾರದ ಚಿಹ್ನೆಗಳನ್ನು ಮುದ್ರಿಸಿರುವ 9000 ಆಧಾರ್ ಕಾರ್ಡ್​ಗಳು, 9000 ಪ್ಯಾನ್ ಕಾರ್ಡ್​ಗಳು, 12200 ಆರ್.ಸಿ.ಕಾರ್ಡ್​ಗಳು, 28,000 ಚುನಾವಣಾ ಗುರುತಿನ ಚೀಟಿಗಳು.
    *ಹೆಸರು ವಿಳಾಸ ಮುದ್ರಿಸಿರುವ 6240 ನಕಲಿ ಚುನಾವಣಾ ಗುರುತಿನ ಚೀಟಿಗಳು, 250 ಆರ್.ಸಿ. ಕಾರ್ಡ್​ಗಳು
    *ದಂಧೆಗೆ ಬಳಸುತ್ತಿದ್ದ ಲ್ಯಾಪ್ಟಾಪ್, ಪ್ರಿಂಟರ್

    54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

    ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts