More

    ಸುದೀಪ್​ ಆಯ್ತು; ‘ಆಕ್ಟ್​ 1978’ ನೋಡೋಕೆ ಮತ್ತಷ್ಟು ಸ್ಟಾರ್ಸ್​ ರಡಿ

    ಬೆಂಗಳೂರು: ಮಂಸೋರೆ ನಿರ್ದೇಶನದ ‘ಆಕ್ಟ್​ 1978’ ಚಿತ್ರವು ಇಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿವೆ. ಕರೊನಾ ಭಯದಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆಯಿದ್ದರೂ, ಚಿತ್ರ ನೋಡಿದವರೆಗಲ್ಲಾ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ.

    ಇದನ್ನೂ ಓದಿ: ಗ್ಲಾಮರ್ ಮರದ ಹಕ್ಕಿ ನಾನಲ್ಲ – ಇಂದು ‘ಆಕ್ಟ್ 1978’ ಚಿತ್ರ ಬಿಡುಗಡೆ

    ವಿಶೇಷವೆಂದರೆ, ಚಿತ್ರದ ಕುರಿತಾಗಿ ‘ಕಿಚ್ಚ’ ಸುದೀಪ್​ ಗುರುವಾರವಷ್ಟೇ ಮೆಚ್ಚಿ ಮಾತನಾಡಿದ್ದರು. ಇದೀಗ ಕನ್ನಡ ಚಿತ್ರರಂಗದ ಇನ್ನಷ್ಟು ಸ್ಟಾರ್​ ನಟರು ಚಿತ್ರ ನೋಡುವುದಕ್ಕೆ ಸಜ್ಜಾಗುತ್ತಿದ್ದಾರೆ.

    ಕೆಲವು ದಿನಗಳ ಹಿಂದೆಯೇ ವಿಶೇಷ ಪ್ರದರ್ಶನವೊಂದರಲ್ಲಿ ಸುದೀಪ್​ ಚಿತ್ರವನ್ನು ನೋಡಿ ಬಹಳ ಮೆಚ್ಚಿಕೊಂಡಿದ್ದರಂತೆ. ಆದರೆ, ಅವರು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಅಂತಿಮವಾಗಿ ಚಿತ್ರ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳಿವೆ ಎನ್ನುವಾಗ ಅವರು ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು.

    ಸುದೀಪ್​ ನಂತರ ಇಂದು ‘ದುನಿಯಾ’ ವಿಜಯ್​ ಚಿತ್ರ ನೋಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಇಂದು ಸಂಜೆ 6.30ಕ್ಕೆ ವಿಜಯ್​ ಅವರು ಚಿಕ್ಕಕಲ್ಲಸಂದ್ರದ ಬಾಲಾಜಿ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಲಿದ್ದಾರೆ. ವಿಜಯ್​ ನಂತರ ಇನ್ನೊಂದೆರೆಡು ದಿನಗಳಲ್ಲಿ ಶ್ರೀಮುರಳಿ, ಸತೀಶ್​ ನೀನಾಸಂ ಮುಂತಾದವರು ಸಹ ಚಿತ್ರವನ್ನು ನೋಡುವ ಸಾಧ್ಯತೆ ಇದೆ.

    ಇದನ್ನೂ ಓದಿ: ಶಿವಪ್ಪನಾದ ಶಿವಣ್ಣ – ತಮಿಳು ನಿರ್ದೇಶಕನ ಕನ್ನಡ ಸಿನಿಮಾ

    ಇನ್ನು ಚಿತ್ರವು ಬರೀ ಕರ್ನಾಟಕವಷ್ಟೇ ಅಲ್ಲ, ತಮಿಳುನಾಡಿನಲ್ಲೂ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ವೀರೇಂದ್ರ ಮಲ್ಲಣ್ಣ ಹೇಳುವಂತೆ, ಚಿತ್ರವು ಇಂದು ಚೆನ್ನೈನ ಎಸ್​.ಪಿ.ಐ ಸಿನಿಮಾಸ್​ನ ಒಂದು ಪರದೆಯಲ್ಲಿ ಬಿಡುಗಡೆಯಾಗಿದೆ.

    ಉಪೇಂದ್ರರ ಪ್ರಜಾಕೀಯದ ಬಗ್ಗೆ ವರ್ಮ ಅಭಿಪ್ರಾಯವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts