More

    ಮುಹೂರ್ತ, ಚಿತ್ರೀಕರಣಕ್ಕೆ ಮೊದಲೇ ದಾಖಲೆ ಬರೆದ ದುನಿಯಾ ವಿಜಯ್ ನಿರ್ದೇಶನದ 2ನೇ ಚಿತ್ರ ಭೀಮ!

    ಬೆಂಗಳೂರು: ತಾವು ಮೊದಲು ನಿರ್ದೇಶನ ಮಾಡಿದ ಮೊದಲ ಸಿನಿಮಾ ಮೂಲಕ ನಟ ದುನಿಯಾ ವಿಜಯ್ ಅವರು ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದರು. ಹೌದು, ‘ಸಲಗಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಇದೀಗ, ದುನಿಯಾ ವಿಜಯ್ ಅವರು ಮತ್ತೊಂದು ಸಿನಿಮಾವನ್ನು ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ತಿಳಿದು ಬಂತು. ಇನ್ನು, ಮಹಾಶಿವರಾತ್ರಿ ಹಬ್ಬದಂದು ಆ ಸಿನಿಮಾದ ಟೈಟಲ್ ಭೀಮಎಂದು ವಿಜಯ್ ಅನೌನ್ಸ್ ಮಾಡಿದರು. ಆದರೆ, ಈ ಸಿನಿಮಾ ಅಂದರೆ ಭೀಮಚಿತ್ರಕ್ಕಿನ್ನೂ ಮುಹೂರ್ತ ಕೂಡಾ ಆಗಿಲ್ಲ. ಶೂಟಿಂಗ್ ಕೂಡಾ ಆರಂಭಗೊಂಡಿಲ್ಲ. ಆದರೆ, ಈ ಸಿನಿಮಾ ಈಗಲೇ ದೊಡ್ಡದೊಂದು ದಾಖಲೆ ಬರೆದಿದೆ ಎಂದರೆ ನೀವು ನಂಬಲೇ ಬೇಕು.
    ಅಷ್ಟಕ್ಕೂ, ಈ ಸಿನಿಮಾ ಬರೆದ ಅಂತಹ ದೊಡ್ಡ ದಾಖಲೆ ಏನು ಅಂತೀರಾ? ಆ ಪ್ರಶ್ನೆಗೆ ಉತ್ತರವೇ, ಸಿನಿಮಾದ ಆಡಿಯೋ ರೈಟ್ಸ್ ಸೇಲ್. ‘ಭೀಮ‘ ಸಿನಿಮಾದ ಶೂಟಿಂಗ್ ಆರಂಭ, ಮುಹೂರ್ತ ಮಾಡುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಬೆಲೆಗೆ ಸೇಲ್ ಆಗಿದೆ. ಹೌದು, ಚಿತ್ರದ ಆಡಿಯೋ ರೈಟ್ಸ್ ಅನ್ನು ಆನಂದ್ ಆಡಿಯೋದವರು 1.50 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಎಂಬ ಮಾಹಿತಿ ಇದೆ. ಇನ್ನು, ಈ ಹಿಂದೆ ದುನಿಯಾ ವಿಜಯ್ ಅವರ ಸಲಗಸಿನಿಮಾಗೆ ಸಂಗೀತ ನೀಡಿದ್ದ ಚರಣ್ ರಾಜ್ ಅವರೇ ಈಗ ಭೀಮ‘ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ‘ಸಲಗಚಿತ್ರ ಯಶಸ್ಸು ಕಾಣಲು ಸಿನಿಮಾದ ಹಾಡುಗಳು ಕೂಡಾ ದೊಡ್ಡ ಕಾರಣವಾಗಿದ್ದವು, ಅದೇ ಕರಣಕ್ಕೆ ಇದೀಗ ಭೀಮಚಿತ್ರದ ಹಾಡುಗಳಿಗೆ ಭಾರಿ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.
    ಹೀಗಾಗಿ, ಆನಂದ್ ಆಡಿಯೋ ಸಂಸ್ಥೆ ಸಿನಿಮಾದ ಆಡಿಯೋ ರೈಟ್ಸ್ ಖರೀದಿಸಿದ್ದು, ಅವರು ಅಡ್ವಾನ್ಸ್ ಚೆಕ್ ಹಾಗೂ ಅಗ್ರಿಮೆಂಟ್ ಅನ್ನು ಭೀಮಚಿತ್ರದ ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಅವರಿಗೆ ನೀಡಿದ್ದಾರೆ. ಸದ್ಯ, ನಟ ದುನಿಯಾ ವಿಜಯ್ ಅವರು ತೆಲುಗಿನ ನಟ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಕಾರಣ, ‘ಭೀಮಚಿತ್ರದ ಮುಹೂರ್ತಕ್ಕೆ ಇನ್ನೂ ಸಿದ್ಧತೆಗಳು ನಡೆಯುತ್ತಿವೆ. ಇದರಿಂದ, ಏಪ್ರಿಲ್ 18 ರಂದು ಸಿನಿಮಾದ ಮುಹೂರ್ತ ಅದ್ದೂರಿಯಾಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ನಟ ದುನಿಯಾ ವಿಜಯ್ ಅವರ ಇಷ್ಟ ದೇವತೆ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸಲಗಚಿತ್ರದ ಮುಹೂರ್ತ ನಡೆದಿದ್ದು, ‘ಭೀಮದ ಮುಹೂರ್ತ ಕೂಡಾ ಅಲ್ಲಿಯೇ ನಡೆಯಲಿದೆ ಎನ್ನಲಾಗಿದೆ

    ಮುಹೂರ್ತ, ಚಿತ್ರೀಕರಣಕ್ಕೆ ಮೊದಲೇ ದಾಖಲೆ ಬರೆದ ದುನಿಯಾ ವಿಜಯ್ ನಿರ್ದೇಶನದ 2ನೇ ಚಿತ್ರ ಭೀಮ!

    ‘ಭಾರತದ ಕೋಗಿಲೆ’ಯ ಬಗ್ಗೆ ಕನ್ನಡ ನಿರ್ದೇಶಕನ ಬಯೋಪಿಕ್! ಯಾರಾಗಲಿದ್ದಾರೆ ಸರೋಜಿನಿ ನಾಯ್ಡು?

    ಚಿಲ್ಡ್ ಬಿಯರ್ ದಾನ ಮಾಡಿ ಎಂದ ಅಭಿಮಾನಿ; ಬಿಯರ್ ಜತೆ ಮಿಕ್ಸ್​ಚರ್ ಸಾಕಾ ಎಂದ ರಿಯಲ್ ಹೀರೋ!

    ಬಿ.ಎಸ್.ವೈ ಜತೆ ತೆರೆಹಂಚಿಕೊಳ್ಳಲಿದ್ದಾರೆ ಸಚಿವ ಸುಧಾಕರ್! ‘ತನುಜಾ’ ಚಿತ್ರದಲ್ಲಿ ಯಾವ ಪಾತ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts