More

    ‘ಭೀಮ’ನಿಗೆ ನಾಯಕಿ ಫಿಕ್ಸ್​; ರಂಗಭೂಮಿಯಿಂದ ಚಿತ್ರರಂಗದತ್ತ ಅಶ್ವಿನಿ

    ಬೆಂಗಳೂರು: ‘ದುನಿಯಾ’ ವಿಜಯ್​ ಅಭಿನಯದ ‘ಭೀಮ’ ಚಿತ್ರದಲ ಹಲವು ಪಾತ್ರಗಳನ್ನು ಇದುವರೆಗೂ ಪರಿಚಯಿಸಲಾಗಿದೆ. ಚಿತ್ರೀಕರಣ ಅರ್ಧ ಮುಗಿಯುವುದಕ್ಕೆ ಬಂದಿದೆ. ಆದರೆ, ಇದುವರೆಗೂ ನಾಯಕಿ ಯಾರೆಂದು ವಿಜಯ್​ ಆಗಲೀ, ಚಿತ್ರತಂಡದವರಾಗಲೀ ಬಹಿರಂಗಪಡಿಸುವುದಕ್ಕೆ ಹೋಗಿರಲಿಲ್ಲ. ಈಗ ಪ್ರೇಮಿಗಳ ದಿನದಂದು ಕೊನೆಗೂ ಚಿತ್ರದ ನಾಯಕಿ ಯಾರು ಎಂಬ ಗುಟ್ಟನ್ನು ರಟ್ಟು ಮಾಡಲಾಗಿದೆ.

    ಇದನ್ನೂ ಓದಿ: ಶಿಡ್ಲಘಟ್ಟಕ್ಕೆ ಬರ್ತಾರೆ ಉಪೇಂದ್ರ; 26ಕ್ಕೆ ‘ಕಬ್ಜ’ ಚಿತ್ರದ ಹಾಡುಗಳ ಬಿಡುಗಡೆ

    ಅಂದಹಾಗೆ, ‘ಭೀಮ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದು ಬೆಂಗಳೂರಿನ ಅಶ್ವಿನಿ. ಇದುವರೆಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೇ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಅಶ್ವಿನಿ ಇದಕ್ಕೂ ಮುನ್ನ, ಅಚ್ಯುತ್​ ಕುಮಾರ್​, ಗೋಪಾಲಕೃಷ್ಣ ದೇಶಪಾಂಡೆ, ರಾಘು ಶಿವಮೊಗ್ಗ, ಸತೀಶ್​ ನೀನಾಸಂ ಅವರಿದ್ದ ‘ತತ್ಕಾಲ್​’ ತಂಡದಲ್ಲಿ ನಾಟಕಗಳನ್ನು ಮಾಡುತ್ತಿದ್ದರಂತೆ. ಹೀಗಿರುವಾಗಲೇ, ವಿಜಯ್​ ತಮ್ಮ ಚಿತ್ರಕ್ಕಾಗಿ ಸೂಕ್ತ ನಾಯಕಿಯ ಹುಡುಕಾಟದಲ್ಲಿದ್ದರು. ಆ ಸಂದರ್ಭದಲ್ಲಿ ಅಶ್ವಿನಿ ಅವರ ಪರಿಚಯವಾಗಿ, ಅವರು ನಾಯಕಿಯ ಪಾತ್ರಕ್ಕೆ ಸೂಕ್ತ ಎಂದನಿಸಿ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಬಿಬಿಎಂ ಓದಿರುವ ಅಶ್ವಿನಿ, ಈಗ ‘ಭೀಮ’ನ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಇದನ್ನೂ ಓದಿ: ‘ಜವಾನ್​’ ಜತೆಗೆ ಅಲ್ಲು ಅರ್ಜುನ್​? ಬಾಲಿವುಡ್​ಗೆ ಹೀಗೊಂದು ಸುದ್ದಿ …

    ‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್​ ಮತ್ತು ಜಗದೀಶ್​ ಗೌಡ ಜತೆಯಾಗಿ ನಿರ್ಮಿಸುತ್ತಿದ್ದು, ಚರಣ್​ರಾಜ್​ ಸಂಗೀತ ಸಂಯೋಜಿಸುತ್ತಿದ್ದಾರೆ.

    ಪ್ರೇಮಿಗಳನ್ನು ನೋಡಿದ್ರೆ ರಾಖಿ ಸಾವಂತ್​ಗೆ ಅಳು ಬರುತ್ತದಂತೆ … ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts