More

    ವಿಕಾಸ್​ ದುಬೆ ವಿರುದ್ಧ ದಾಖಲಾಗಿದ್ದವು 61 ಎಫ್​ಐಆರ್​

    ಕಾನ್ಪುರ: ಎನ್​ಕೌಂಟರ್​ನಲ್ಲಿ ಸತ್ತ ಕುಖ್ಯಾತ ಪಾತಕಿ ವಿಕಾಸ್​ ದುಬೆ ವಿರುದ್ಧ ಮೂರು ದಶಕಗಳಲ್ಲಿ ಒಟ್ಟು 61 ಕ್ರಿಮಿನಲ್​ ಪ್ರಕರಣಗಳು ದಾಖಲಾಗಿದ್ದವು. ಒಟ್ಟು 15 ಜನರನ್ನು ಕೊಂದ 8 ಪ್ರಕರಣಗಳು ಕೂಡ ಅದರಲ್ಲಿ ಸೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ತನ್ನನ್ನು ಬಂಧಿಸಲು ಬಂದಿದ್ದ ಚೌಬೆಪುರ್​ ಪೊಲೀಸ್​ ಠಾಣೆಯ 8 ಸಿಬ್ಬಂದಿಯನ್ನು ಕೊಂದ ಪ್ರಕರಣ ಇತ್ತೀಚನದ್ದಾಗಿದೆ. 1992ರಿಂದ 2017ರ ನಡುವೆ ಉಳಿದ ಏಳು ಕೊಲೆ ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು ಎನ್ನಲಾಗಿದೆ.

    1990ರಿಂದ ಇದುವರೆಗೂ ದುಬೆ ವಿರುದ್ಧ 9 ಕೊಲೆಯತ್ನ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ ಎರಡು ಪ್ರಕರಣಗಳು ಎನ್​ಡಿಪಿಎಸ್​ ಕಾಯ್ದೆಯಡಿ ದಾಖಲಾಗಿದ್ದವು. ಉಳಿದ 7 ಪ್ರಕರಣಗಳು ಗೊಂಡಾ ಕಾಯ್ದೆಯಡಿ, ಆರು ಗೂಂಡಾಗಿರಿ ಕಾಯ್ದೆಯಡಿ, ಮೂರು ಶಸ್ತ್ರಾಸ್ತ್ರ ಕಾಯ್ದೆಯಡಿ ಅಲ್ಲದೆ ಹಲವು ಸಣ್ಣಪುಟ್ಟ ಪ್ರಕರಣಗಳು ಕೂಡ ದಾಖಲಾಗಿದ್ದವು ಎನ್ನಲಾಗಿದೆ.

    ಇದನ್ನೂ ಓದಿ: ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

    ಆದರೆ ಇಷ್ಟೊಂದು ಪ್ರಕರಣಗಳ ಪೈಕಿ ದುಬೆ oಮ್ಮೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೂ ಎಷ್ಟು ಬಾರಿ ಬಂಧನಕ್ಕೆ ಒಳಗಾಗಿದ್ದ, ಎಷ್ಟು ಪ್ರಕರಣಗಳಲ್ಲಿ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿದ್ದವು ಎಂಬುದು ಸ್ಪಷ್ಟವಾಗಿಲ್ಲ.

    ದುಬೆಯನ್ನು ಸಾಕಷ್ಟು ಬಾರಿ ಬಂಧಿಸಲಾಗಿತ್ತು. 2001ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲೂ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ ಪ್ರತಿಬಾರಿಯೂ ಆತ ಕೋರ್ಟ್​ನಿಂದ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದ ಎಂದು ಇನ್​ಸ್ಪೆಕ್ಟರ್​ ಜನರಲ್​ (ಕಾನ್ಪುರ) ಮೋಹಿತ್​ ಅಗರ್​ವಾಲ್​ ತಿಳಿಸಿದ್ದಾರೆ.

    1990ರಲ್ಲಿ ಆತ ಪಾತಕ ಲೋಕಕ್ಕೆ ಕಾಲಿರಿಸಿದ ನಂತರದಿಂದ 2005ರವರೆಗೆ ಕಾನ್ಪುರ ಮೆಟ್ರೋಪಾಲೀಸ್​ ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳಲ್ಲಿ ಒಟ್ಟು 48 ಎಫ್​ಐಆರ್​ ದಾಖಲಾಗಿದ್ದವು. 2006ರಿಂದ 2020ರ ನಡುವೆ ಒಟ್ಟು 12 ಎಫ್​ಐಆರ್​ಗಳು ದಾಖಲಾಗಿವೆ. ಚೌಬೆಪುರ್​ ಪೊಲೀಸ್​ ಠಾಣೆಯ ಸಿಬ್ಬಂದಿಯ ಹತ್ಯೆ ಪ್ರಕರಣದಲ್ಲಿ ಆತನ ವಿರುದ್ಧ ಮೂರು ಎಫ್​ಐಆರ್​ಗಳು ದಾಖಲಾಗಿರುವುದು ಇತ್ತೀಚಿನದ್ದಾಗಿವೆ.

    ಇದನ್ನೂ ಓದಿ: ಹಾರ್ದಿಕ್ ಪಟೇಲ್​ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ

    ವಿಕಾಸ್​ ದುಬೆಯ ಪಾತಕ ಇತಿಹಾಸವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಆತನ ವಿರುದ್ಧ ಇದುವರೆಗೆ ದಾಖಲಾಗಿರುವ 61 ಎಫ್​ಐಆರ್​ಗಳ ಪೈಕಿ ಶೇ.80 ಎಫ್​ಐಆರ್​ಗಳು ಆತನ ಪಾತಕ ಇತಿಹಾಸದ ಮೊದಲ ಭಾಗದಲ್ಲಿ ದಾಖಲಾದ್ದಂತವು ಎಂದು ಪೊಲಿಸರು ತಿಳಿಸಿದ್ದಾರೆ.

    ಆತನ ಪಾತಕ ಇತಿಹಾಸದ ಎರಡನೇ ಅವಧಿಯಲ್ಲಿ ಒಟ್ಟು 7 ವರ್ಷ ಅಂದರೆ 2008ರಿಂದ 2014ರವರೆಗೆ ಆತ ಯಾವುದೇ ಅಪರಾಧ ಕೃತ್ಯಗಳನ್ನು ಎಸಗಿರಲಿಲ್ಲ. ಹೀಗಾಗಿ 2015ರಲ್ಲಿ ಆತನ ಸನ್ನಡೆತೆ ಬಗ್ಗೆ ಕ್ರಿಮಿನಲ್​ ಕಾಯ್ದೆಯ 110ನೇ ವಿಧಿಯನ್ವಯ ಬಾಂಡ್​ ಸಲ್ಲಿಸುವಂತೆ ಎಕ್ಸಿಕ್ಯೂಟೀವ್​ ಮ್ಯಾಜಿಸ್ಟ್ರೇಟ್​ ಆತನಿಗೆ ಸೂಚಿಸಿದ್ದರು ಎನ್ನಲಾಗಿದೆ.

    1992ರಲ್ಲಿ ಮೊದಲ ಕೊಲೆ: ವಿಕಾಸ್​ ದುಬೆ 1992ರಲ್ಲಿ ಮೊಟ್ಟಮೊದಲ ಕೊಲೆ ಮಾಡಿದದ. ಈ ಬಗ್ಗೆ ಆತನ ವಿರುದ್ಧ ದೂರು ದಾಖಲಾಗಿತ್ತು. iದಾದ ನಂತರದಲ್ಲಿ ಭಾರತೀಯ ದಂಡ ಸಂಹಿತೆ 302ರ ಪ್ರಕಾರ ಆತನ ವಿರುದ್ಧ ಒಟ್ಟು 8 ಎಫ್​ಐಆರ್​ಗಳು ದಾಖಲಾಗಿವೆ. 2017ರಲ್ಲಿ ಕೊನೆಯ ಎರಡು ಕೊಲೆ ಪ್ರಕರಣಗಳು ದಾಖಲಾಗಿದ್ದವು.

    ತುಘಲಕ್​ ಅರವಿಂದ್​ ಕೇಜ್ರಿವಾಲ್​ಗೆ ಈಗ ಎಲ್ಲ ಕ್ರೆಡಿಟ್​ ಬೇಕಾಗಿದೆ: ಸಂಸದ ಗೌತಮ್​ ಗಂಭೀರ್​ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts