More

    ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

    ಬೆಂಗಳೂರು: ಕೇರಳದ 30 ಕಿಲೋ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್​ನನ್ನು ಬೆಂಗಳೂರಿನಲ್ಲಿ ಇಂದು ಬಂಧಿಸಲಾಗಿದ್ದು, ನ್ಯಾಷನಲ್ ಇನ್​ವೆಸ್ಟಿಗೇಷನ್​ ಏಜೆನ್ಸಿ ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.

    ತಿರುವನಂತಪುರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಡಿಪ್ಲೋಮ್ಯಾಟಿಕ್ ಲಗೇಜ್​ ಮೂಲಕ 30 ಕಿಲೋ ಚಿನ್ನವನ್ನು ಕಳ್ಳಸಾಗಣೆ ಮೂಲಕ ಸಾಗಿಸುವ ಪ್ರಯತ್ನ ವಿಫಲವಾಗಿ ಕೇರಳದಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ. ಈಕೆ ಯುಎಇ ಕಾನ್ಸುಲೇಟ್​ನ ಮಾಜಿ ಉದ್ಯೋಗಿ. ಈ ಪ್ರಕರಣದಲ್ಲಿ ಎನ್​ಐಎ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

    ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಶನಿವಾರ ಸಂಜೆ ಸ್ವಪ್ನಾ ಮತ್ತು ಸಂದೀಪ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಎನ್​ಐಎ ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇನ್ನೋರ್ವ ಆರೋಪಿ ಫೈಜಲ್​ ಫರೀದ್​ ಎರ್ನಾಕುಲಂ ಕಳ್ಳಸಾಗಣೆಯ ಇನ್ನೊಬ್ಬ ಆರೋಪಿ. ಈತ ತಲೆಮರೆಸಿಕೊಂಡಿದ್ದು ದುಬೈಗೆ ಹೋಗಿರುವ ಶಂಕೆ ಇದೆ. ಸರಿತ್ ಎಂಬ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

    ಸ್ವಪ್ನಾ ಸುರೇಶ್ ವಿರುದ್ಧ ಉಗ್ರ ಚಟುವಟಿಕೆಗೆ ನಿಧಿ ಸಂಗ್ರಹದ ಆರೋಪ: ಎನ್​ಐಎ ಹೊಸ ಎಫ್​ಐಆರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts