More

    ‘ಬಂಗಾರಿ’ಯ ಅರಬ್​ ಲಿಂಕ್​- ಕಳ್ಳಸಾಗಣೆ ಚಿನ್ನ ಯುಎಇ ಕಾನ್ಸುಲೇಟ್​ಗೆ 12 ಸಲ ತರಲಾಗಿತ್ತಂತೆ!

    ಕೊಚ್ಚಿ: ಕೇರಳದ ಚಿನ್ನ ಕಳ್ಳ ಸಾಗಣೆ ಪ್ರಕರಣದ ರೋಚಕ ಕಥೆಗಳು ಒಂದೊಂದಾಗಿ ಬಹಿರಂಗವಾಗುತ್ತಿವೆ. ಬಂಧಿತ ಸರಿತ್​ ಮತ್ತು ಸ್ವಪ್ನಾ ಸುರೇಶ್ ವಿಚಾರಣೆ ವೇಳೆ ಬಾಯ್ಬಿಟ್ಟ ಅಂಶಗಳು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚಿನ್ನ ಕಳ್ಳಸಾಗಣೆ ಕೇಸ್​ನಲ್ಲಿ ಬಂಧಿತರು ನೀಡಿರುವ ಮಾಹಿತಿ ಪ್ರಕಾರ, ಇದಕ್ಕೂ ಮುನ್ನ ಯುಎಇ ಕಾನ್ಸುಲೇಟ್​ಗೆ 12 ಸಲ ತಿರುವನಂತಪುರ ವಿಮಾನ ನಿಲ್ದಾಣದ ಮೂಲಕವೇ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ!

    ವರದಿಗಳ ಪ್ರಕಾರ, ಯುಎಇಯ ನಕಲಿ ಲಾಂಛನ ಮತ್ತು ಡಿಪ್ಲೋಮ್ಯಾಟಿಕ್ ಬ್ಯಾಗೇಜ್​ಗೆ ನಕಲಿ ಸ್ಟಿಕ್ಕರ್​ಗಳನ್ನು ತಯಾರಿಸಿ ಅಂಟಿಸಲಾಗಿತ್ತು. ಸ್ವಪ್ನಾ ಅಥವಾ ಸರಿತ್ ಯಾರೇ ಆದರೂ ಏರ್​ಪೋರ್ಟ್​ನಿಂದ ಚಿನ್ನ ಸಾಗಿಸುವುದಿದ್ದರೆ ಅದನ್ನು ಮೊದಲು ಸಂದೀಪ್ ನಾಯರ್ ಎಂಬುವವರ ಕಾರ್ಬನ್ ಡಾಕ್ಟರ್ ಎಂಬ ವರ್ಕ್​ಶಾಪ್​ಗೆ ಕೊಂಡೊಯ್ಯುತ್ತಿದ್ದರು. ಏರ್​ಪೋರ್ಟ್​ನಿಂದ ಡಿಪ್ಲೋಮ್ಯಾಟಿಕ್ ಬ್ಯಾಗೇಜ್​ಗಳನ್ನು ಕೊಂಡೊಯ್ಯಲು ಕಾನ್ಸುಲೇಟ್ ಲಾಂಛನ ಇರುವ ವಾಹನವೇ ಬರಬೇಕಾಗಿತ್ತು. ಆ ವಾಹನವನ್ನು ಸಂದೀಪ್ ನಾಯರ್ ಒದಗಿಸಿದ್ದ. ಹಾಗಾಗಿ ಸರಿತ್ ಮತ್ತು ಸ್ವಪ್ನಾ 12 ನಕಲಿ ಲಾಂಛನ ಬಳಸಿಯೇ ಡಿಪ್ಲೋಮ್ಯಾಟಿಕ್ ಬ್ಯಾಗೇಜ್ ತಂದಿದ್ದಾರೆ.

    ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಶಿವಶಂಕರ್ ಕಸ್ಟಮ್ಸ್ ಅಧಿಕಾರಿಗಳಿಗೆ ನೀಡಿದ ಮಾಹಿತಿ ಪ್ರಕಾರ, ಸಂದೀಪ್ ನಾಯರನ್ನು ಶಿವಶಂಕರ್​ಗೆ ಪರಿಚಯಿಸಿದ್ದು ಸ್ವಪ್ನಾ. ಸಂದೀಪ್ ನಾಯರ್ ಉಪಕಾರಕ್ಕೆ ಪ್ರತಿಯಾಗಿ ಕೆಎಸ್​ಆರ್​ಟಿಸಿ ಬಸ್​ ಎಂಜಿನ್​ಗಳ ನಿರ್ವಹಣೆಯ ಗುತ್ತಿಗೆಯನ್ನು ಕೊಡಿಸುವುದಾಗಿ ಮುಖ್ಯಮಂತ್ರಿಯ ಮಾಜಿ ಪ್ರಿನ್ಸಿಪಲ್ ಸೆಕ್ರೆಟರಿ ಎಂ.ಶಿವಶಂಕರ್​ ಆಶ್ವಾಸನೆ ನೀಡಿದ್ದರು. ಇದೀಗ ಈ ವರ್ಕ್​ಶಾಪ್​ಗೆ ಭೇಟಿ ನೀಡುತ್ತಿದ್ದ ರಾಜಕಾರಣಿಗಳು, ಅಧಿಕಾರಿಗಳ ಹೆಸರು ಕೂಡ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ತಳುಕು ಹಾಕಿಕೊಂಡಿದೆ. (ಏಜೆನ್ಸೀಸ್)

    ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ- ಇದು ಕೇರಳದ “ಬಂಗಾರಿ” ಗ್ಯಾಂಗ್​ನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts