More

    ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ- ಇದು ಕೇರಳದ “ಬಂಗಾರಿ” ಗ್ಯಾಂಗ್​ನ ಕಥೆ

    ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಪ್ನಾ ಸುರೇಶ್ ಮತ್ತು ಗ್ಯಾಂಗ್ ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ. ಆದರೆ ಈ ಕಳ್ಳಸಾಗಣೆ ಮೂರು ಪ್ರತ್ಯೇಕ ಪ್ರಕರಣಗಳ ಮೂಲಕ ನಡೆದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

    ಜೂನ್ ತಿಂಗಳಲ್ಲಿ ನಡೆದ ಕಳ್ಳಸಾಗಣೆಯ ಪೈಕಿ ಒಂದು ಪ್ರಕರಣದಲ್ಲಿ 33 ಕಿಲೋ ಚಿನ್ನವನ್ನು ಮಲಪ್ಪುರಂ ನಿವಾಸಿ ಸೇತಲವಿ ಹೆಸರಿನಲ್ಲಿ ತರಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಸೇತಲವಿ ಮತ್ತು ಮಧ್ಯವರ್ತಿ ಅನ್ವರ್ ಅವರನ್ನು ಬುಧವಾರ ಬಂಧಿಸಿದ್ದಾರೆ. ಕಳ್ಳಸಾಗಣೆ ಮೂಲಕ ತಂದ ಚಿನ್ನ ಈಗಾಗಲೇ ಬೇರೆ ಬೇರೆ ಜುವೆಲ್ಲರಿಗಳಿಗೆ ತಲುಪಿದೆ. ಈ ಪೈಕಿ ಎಸ್​ಎಸ್​ ಜುವೆಲ್ಲರಿ ಮುಖ್ಯಸ್ಥನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

    ಇದನ್ನೂ ಓದಿ: ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಏರ್​ ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೆಟ್ಟಿಗೆ ಹೊರಗೆ ತೆಗೆದುಕೊಂಡು ಹೋಗಲು ಬಿಡದೇ ಇದ್ದ ಸಂದರ್ಭದಲ್ಲಿ ಸ್ವಪ್ನಾ ಸುರೇಶ್ ಮತ್ತು ಸರಿತ್​ 13 ಸಲ ಭೇಟಿ ಮಾಡಿದ್ದರು. ಈ ಘಟನೆ ಜುಲೈ 3 ರಂದು ಏಳು ಬಾರಿ ಮತ್ತು 4 ರಂದು ಆರು ಬಾರಿ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೆಟ್ಟಿಗೆ ವಶಪಡಿಸಿಕೊಂಡ ದಿನ ಒಂದು ಸಲ ಭೇಟಿಯಾಗಿದ್ದರು.

    ಇದನ್ನೂ ಓದಿ: ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!

    ಜುಲೈ 5ರಂದು ಬೆಳಗ್ಗೆ ಚಿನ್ನದ ಪೆಟ್ಟಿಗೆ ಬಿಡಿಸಿಕೊಂಡು ಬರುವುದಕ್ಕೆ ಸರಿತ್​ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಇದೇ ವೇಳೆ, ಆತ ಅಲ್ಲಿ ಬಂಧಿಸಲ್ಪಟ್ಟಿದ್ದ. ಸ್ವಪ್ನಾ ಸುರೇಶ್ ಆಗ ಸೆಕ್ರಟೇರಿಯೆಟ್ ಸಮೀಪ ಇರುವ ವಿವಾದಿತ ಫ್ಲ್ಯಾಟ್​ಗೆ ತೆರಳಿದ್ದಾಳೆ. ಅಲ್ಲಿ ಆಕೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ರ ತನಕ ಹಲವರಿಗೆ ಫೋನ್ ಮಾಡಿದ್ದಳು. ಸರಿತ್ ಬಂಧನದ ಸುದ್ದಿ ಬಂದ ಕೂಡಲೇ ಆಕೆ ಅಲ್ಲಿಂದ ಅಂಬಲಮುಕ್ಕು ಎಂಬಲ್ಲಿರುವ ಫ್ಲ್ಯಾಟ್​​ಗೆ ಹೋಗಿದ್ದಾಳೆ ಎಂಬ ಅಂಶವನ್ನು ಆಕೆಯ ಫೋನ್ ಲೊಕೇಷನ್ ದೃಢೀಕರಿಸಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts