More

    1.11 ಕಿಲೋ ಚಿನ್ನದ ಪೇಸ್ಟ್​ ವಶಪಡಿಸಿದ್ರು ಕಸ್ಟಮ್ಸ್ ಅಧಿಕಾರಿಗಳು

    ಚೆನ್ನೈ: ದುಬೈನಿಂದ ಚೆನ್ನೈಗೆ ಆಗಮಿಸಿದ ವ್ಯಕ್ತಿಯೊಬ್ಬನಿಂದ 1.11 ಕಿಲೋ ಚಿನ್ನದ ಪೇಸ್ಟ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 58.6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಬಂಧಿತನನ್ನು ತಮಿಳುನಾಡಿನ ಪಸಿಪಟ್ಟಿನಮ್ ನಿವಾಸಿ ಶಾಹುಲ್ ಹಮೀದ್ (40) ಎಂದು ಗುರುತಿಸಲಾಗಿದೆ. ಆತನ ಹ್ಯಾಂಡ್ ಬ್ಯಾಗ್​ನಲ್ಲಿದ್ದ ನಾಲ್ಕು ಪೊಟ್ಟಣಗಳಲ್ಲಿ 850 ಗ್ರಾಂ ಪೇಸ್ಟ್ ಇತ್ತು. ಅದನ್ನು ಹೊರತೆಗೆದು ಪರಿಶೀಲಿಸಿದಾಗ 24 ಕ್ಯಾರೆಟ್ ಪರಿಶುದ್ಧತೆಯ 740 ಗ್ರಾಂ ಚಿನ್ನ ಸಿಕ್ಕಿದೆ. ಇದರ ಮೌಲ್ಯ 38.9 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಇದನ್ನೂ ಓದಿ: ಲವ್ ಜಿಹಾದ್​ಗೆ ಸಜೆ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಒಲವು

    ಸೋಮವಾರ ದುಬೈನಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇನ್ನೋರ್ವ ವ್ಯಕ್ತಿಯ ಬಳಿಯೂ ಚಿನ್ನ ಇತ್ತು. ಆತನನ್ನು ರಾಮನಾಥಪುರಂನ ಮೊಹಮ್ಮದ್ ಸಜಂಖಾನ್​ ಕಲಂದರ್ ಅಯೂಬ್​ಖಾನ್ (23) ಎಂದು ಗುರುತಿಸಲಾಗಿದೆ. ಆತನ ಬಳಿಕ ಐದು ಬಂಡಲ್​ಗಳಲ್ಲಿ 437 ಗ್ರಾಂ ಪೇಸ್ಟ್​ ಇತ್ತು. ಅದನ್ನು ಪ್ರತ್ಯೇಕಿಸಿದಾಗ 375 ಗ್ರಾಂ ಚಿನ್ನ ಸಿಕ್ಕಿದೆ. ಇದರ ಮೌಲ್ಯ 19.70 ಲಕ್ಷ ರೂಪಾಯಿ ಎಂದು ಅಂದಾಜಿಸಿದ್ದಾರೆ. (ಏಜೆನ್ಸೀಸ್)

    ಖಾಸಗಿ ಗೂಢಚಾರಿಕೆ ಕ್ಷೇತ್ರಕ್ಕೆ ನಿಯಮದ ಚೌಕಟ್ಟು: ಕೇಂದ್ರಕ್ಕೆ ನಿರ್ದೇಶಿಸಲು ಸುಪ್ರೀಂ ನಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts