More

    ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನ ಕಸ್ಟಮ್ಸ್ ವಶಕ್ಕೆ!

    ಹೈದರಾಬಾದ್​: ಕೇರಳದ ಚಿನ್ನ ಕಳ್ಳಸಾಗಣೆ ಕೇಸ್​ನ ತನಿಖೆ ಪ್ರಗತಿಯಲ್ಲಿರುವಾಗಲೇ ಹೈದರಾಬಾದ್​ ವಿಮಾನ ನಿಲ್ದಾಣದಲ್ಲೂ ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನ ಕಸ್ಟಮ್ಸ್ ವಶಕ್ಕೆ ಸೇರಿದೆ. ಕಳ್ಳಸಾಗಣೆ ಮೂಲಕ ಭಾರತಕ್ಕೆ ಸಾಗಿಸುವ ಪ್ರಯತ್ನದಲ್ಲಿದ್ದಾಗ ಇದು ಪತ್ತೆಯಾಗಿದೆ. ಈ ಬೆಳವಣಿಗೆ ಹತ್ತಕ್ಕೂ ಹೆಚ್ಚು ಚಿನ್ನದ ವ್ಯಾಪಾರಿಗಳ ಮೇಲೆ ನಿಗಾ ಇರಿಸುವಂತೆ ಮಾಡಿದೆ.

    ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನ ಡೊಮೆಸ್ಟಿಕ್ ಏರ್​ ಕಾರ್ಗೋ ಕಾಂಪ್ಲೆಕ್ಸ್​ನಲ್ಲಿ ಈ ಚಿನ್ನ ಪತ್ತೆಯಾಗಿತ್ತು. ವಶಪಡಿಸಿಕೊಳ್ಳಲಾದ ಚಿನ್ನದಲ್ಲಿ 18 ಕಿಲೋದಷ್ಟು ಚಿನ್ನ ಆಭರಣ ರೂಪದಲ್ಲಿದೆ. 2 ಕಿಲೋ ಚಿನ್ನ ವಿದೇಶಿ ಮುದ್ರೆ ಇರುವ ಬಿಸ್ಕೆಟ್ ರೂಪದಲ್ಲಿದೆ. ಒಂದು ಕಿಲೋದಷ್ಟು ಡೈಮಂಡ್ ಸ್ಟಡ್ ಅಳವಡಿಸಿದ ಜುವೆಲ್ಲರಿ ರೂಪದಲ್ಲಿದೆ. ವಜ್ರಗಳು ಮತ್ತು ರೋಲೆಕ್ಸ್ ರಿಸ್ಟ್ ವಾಚ್​ ಕೂಡ ಇದರೊಂದಿಗೆ ಇವೆ.

    ಇದನ್ನೂ ಓದಿ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ, ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳ ಒತ್ತಾಯ

    ಚಿನ್ನಾಭರಣ, ಚಿನ್ನದ ಬಾರ್​ಗಳು ವಿದೇಶಿ ಮೂಲದವಾಗಿದ್ದು, ಎಲ್ಲವೂ 999 ಪರಿಶುದ್ಧತೆ ಹೊಂದಿವೆ. ಲೂಸ್ ಡೈಮಂಡ್​, ವಿವಿಧ ಅಮೂಲ್ಯ ಹರಳುಗಳು, ವಾಚ್​, ಪ್ಲಾಟಿನಂ ಟಾಪ್ಸ್, ಆಂಟಿಕ್ ನಾಣ್ಯಗಳು ಕೂಡ ವಶಪಡಿಸಿರುವ ವಸ್ತುಗಳಲ್ಲಿವೆ. ಇವುಗಳ ಒಟ್ಟು ಮೌಲ್ಯ 6,62,46,387 ರೂಪಾಯಿ ಎಂದು ಅಂದಾಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಆರ್​ಆರ್​ ನಗರ ಬೈ ಎಲೆಕ್ಷನ್​: ಕಾಂಗ್ರೆಸ್​ ಅಭ್ಯರ್ಥಿ ಯಾರು ಗೊತ್ತಾ? ಇಲ್ಲಿದೆ ಡಿಕೆಶಿ ಫೈನಲ್​ ಲಿಸ್ಟ್

    ಕಸ್ಟಮ್ಸ್ ಅಧಿಕಾರಿಗಳ ಜತೆಗೆ ಜಿಎಸ್​ಟಿ ಅಧಿಕಾರಿಗಳೂ ತನಿಖೆಯಲ್ಲಿ ಕೈ ಜೋಡಿಸಿದ್ದಾರೆ. ಯಾವುದೇ ಇನ್​ವಾಯ್ಸ್ ಇಲ್ಲದೆ ಚಿನ್ನವನ್ನು ಅಂತರ್​ರಾಜ್ಯ ಸಾಗಣೆ ಮಾಡುತ್ತಿರುವುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅವರು ಮುಂದಾಗಿದ್ದಾರೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೂಡ ತನಿಖೆಗೆ ಕೈ ಜೋಡಿಸಿದ್ದಾರೆ. (ಏಜೆನ್ಸೀಸ್)

    ಸೇನಾ ಪ್ರದೇಶದ ಫೋಟೋ ಪಾಕಿಸ್ತಾನದ ವಾಟ್ಸ್​ಆ್ಯಪ್ ಗ್ರೂಪ್​ಗೆ ರವಾನಿಸಿದಾತ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts