More

    ತೆಲಂಗಾಣದಲ್ಲಿ ಅರಿಶಿಣ ಮಂಡಳಿ ಸ್ಥಾಪನೆ: ಪ್ರಧಾನಿ ಮೋದಿ 13.5ಸಾವಿರ ಕೋಟಿ ರೂ.ವೆಚ್ಚದ ಯೋಜನೆಗಳಿಗೆ ಚಾಲನೆ

    ಹೈದರಾಬಾದ್​: ತೆಲಂಗಾಣದಲ್ಲಿ ರಾಷ್ಟ್ರೀಯ ಅರಿಶಿಣ ಮಂಡಳಿ ಮತ್ತು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

    ಮೆಹಬೂಬ್​ನಗರ​ದಲ್ಲಿ ಭಾನುವಾರ ರೋಡ್ ಶೋ ನಡೆಸಿದ ಬಳಿಕ ಸಾರ್ವಜನಿಕರ ಬೃಹತ್​ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತೆಲಂಗಾಣವು ಭಾರತದ ಅತಿದೊಡ್ಡ ಅರಿಶಿಣ ಬೆಳೆಯುವ ರಾಜ್ಯವಾಗಿದೆ. ಇದು ನೇರ ಮತ್ತು ಪರೋಕ್ಷವಾಗಿ ರೈತರು ಸೇರಿದಂತೆ ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿದೆ. ಹೀಗಾಗಿ ಅರಿಶಿಣಕ್ಕೆ ಉತ್ತಮ ಮಾರುಕಟ್ಟೆ ಮತ್ತು ಬೆಲೆ ಸಿಗುವಂತಾಗಬೇಕು. ಮಂಡಳಿ ರಚನೆಯಿಂದ ಇದು ಸಾಧ್ಯವಾಗಲಿದೆ ಎಂದು ಹೇಳಿದರು.

    ಇದನ್ನೂ ಓದಿ: ಎಐಎಡಿಎಂಕೆ ಅಣಿಯಲು ಬಿಜೆಪಿಯಿಂದ ‘ವೇಲುಮಣಿ’ ಅಸ್ತ್ರ?

    ಇದೇ ಸಂದರ್ಭದಲ್ಲಿ 13,500 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳಿಗೆ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಆ ರಾಜ್ಯಕ್ಕೆ ಮೋದಿ ಅವರು ಕೊಡಿಗೆ ನೀಡಿರುವುದು ವಿಶೇಷವಾಗಿದೆ.

    ನವರಾತ್ರಿ ಪ್ರಾರಂಭವಾಗಲಿರುವ ಈ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ ಸಂಸತ್ ನಲ್ಲಿ ಅದನ್ನು ಅಂಗೀಕರಿಸುವ ಮೂಲಕ ನಾವು ಜನರ ಜೀವನದಲ್ಲಿ ದೊಡ್ಡ ಬದಲಾವಣೆ ತರಲು ಯತ್ನಿಸಿದ್ದೇವೆ. ರಸ್ತೆ, ರೈಲು ಸಂಪರ್ಕದ ಜತೆ ಅತ್ಯಗತ್ಯ ಮೂಲ ಸೌಲಭಗಳನ್ನು ಒದಗಿಸಲು ಬದ್ಧರಾಗಿದ್ದು, ಅದರಂತೆ ಇಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರು.

    ನಾಗ್ಪುರ-ವಿಜಯವಾಡ ಆರ್ಥಿಕ ಕಾರಿಡಾರ್ ಮೂಲಕ ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಅನುಕೂಲವಾಗಲಿದೆ. ಇದರಿಂದಾಗಿ ಈ ಮೂರು ರಾಜ್ಯಗಳಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಈ ಕಾರಿಡಾರ್‌ನಲ್ಲಿ ಆರ್ಥಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಒಂದು ವಿಶೇಷ ಆರ್ಥಿಕ ವಲಯ, ಐದು ಮೆಗಾ ಫುಡ್ ಪಾರ್ಕ್‌ಗಳು, ನಾಲ್ಕು ಮೀನುಗಾರಿಕೆ ಸಮುದ್ರ ಆಹಾರ ಕ್ಲಸ್ಟರ್‌ಗಳು, ಮೂರು ಫಾರ್ಮಾ ಮತ್ತು ವೈದ್ಯಕೀಯ ಕ್ಲಸ್ಟರ್‌ಗಳು ಮತ್ತು ಒಂದು ಜವಳಿ ಕ್ಲಸ್ಟರ್ ಇದರಲ್ಲಿ ನಿರ್ಮಾಣವಾಗಲಿವೆ ಎಂದು ಪ್ರಧಾನಿ ಮೋದಿ ಹೇಳಿದರು.

    ಹೈದರಾಬಾದ್​-ರಾಯಚೂರು ರೈಲು ಸೇವೆಗೆ ಚಾಲನೆ:
    2,460 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 59 ಕಿಮೀ ಉದ್ದದ ಸೂರ್ಯಪೇಟ – ಖಮ್ಮಂ ಚತುಷ್ಪತ ರಸ್ತೆ, 500 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ 37 ಕಿಮೀ ಉದ್ದದ ಜಕ್ಲೇರ್-ಕೃಷ್ಣ ಹೊಸ ರೈಲು ಮಾರ್ಗವನ್ನು ಯನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಇದಲ್ಲದೆ, ಹೈದರಾಬಾದ್ (ಕಾಚಿಗೂಡ) – ರಾಯಚೂರು – ಹೈದರಾಬಾದ್ (ಕಾಚಿಗೂಡ) ರೈಲು ಸೇವೆಯನ್ನು ಕೃಷ್ಣಾ ನಿಲ್ದಾಣದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ಮಾಡಿದರು. ರೈಲು ಸೇವೆಯು ತೆಲಂಗಾಣದ ಹೈದರಾಬಾದ್, ರಂಗಾರೆಡ್ಡಿ, ಮಹಬೂಬ್‌ನಗರ ಮತ್ತು ನಾರಾಯಣಪೇಟ್ ಜಿಲ್ಲೆಗಳನ್ನು ಕರ್ನಾಟಕದ ರಾಯಚೂರು ಜಿಲ್ಲೆಗೆ ಸಂಪರ್ಕಿಸುತ್ತದೆ. ಇದೇ ಸಂದರ್ಭದಲ್ಲಿ ಅವರು ‘ಹಾಸನ-ಚೆರ್ಲಪಲ್ಲಿ ಎಲ್‌ಪಿಜಿ ಪೈಪ್‌ಲೈನ್ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

    `ಗಡಿಬಿಡಿ ಕೃಷ್ಣ’ ಸಿನಿಮಾ ನಟಿ ಚಿತ್ರರಂಗದಿಂದ ದೂರ ಉಳಿಯಲು ಕಾರಣ ಬಿಚ್ಚಿಟ್ಟ ರಾವಳಿ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts