More

    ಚಿನ್ನ ಕಳ್ಳಸಾಗಣೆ ಕೇಸ್​: ಅಮಾನತುಗೊಂಡಿರುವ ಐಎಎಸ್​ ಅಧಿಕಾರಿ ಶಿವಶಂಕರ್ ಇಡಿ ಕಸ್ಟಡಿಗೆ

    ಕೊಚ್ಚಿ: ಚಿನ್ನ ಕಳ್ಳಸಾಗಣೆ ಕೇಸ್​ನಲ್ಲಿ ಆರೋಪಿಯಾಗಿ ಅಮಾನತಾಗಿರುವ ಐಎಎಸ್ ಅಧಿಕಾರಿ ಎಂ.ಶಿವಶಂಕರ್​ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇಡಿ)ದ ಕಸ್ಟಡಿಗೆ ಒಪ್ಪಿಸಲು ಕೋರ್ಟ್ ಗುರುವಾರ ಬೆಳಗ್ಗೆ ಆದೇಶ ನೀಡಿದೆ. ಎರ್ನಾಕುಲಂ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್​ಗೆ ಶಿವಶಂಕರ್​ ಅವರನ್ನು ಹಾಜರುಪಡಿಸಿದ್ದ ವೇಳೆ ಈ ಆದೇಶ ನೀಡಲಾಗಿದೆ.

    ಚಿನ್ನಕಳ್ಳ ಸಾಗಣೆ ಕೇಸ್​ನಲ್ಲಿ ಶಿವಶಂಕರ್ ಐದನೇ ಆರೋಪಿಯಾಗಿದ್ದು, 14 ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ಜಾರಿ ನಿರ್ದೇಶನಲಾಯ ಕೋರ್ಟ್​ಗೆ ಮನವಿ ಮಾಡಿತ್ತು. ಜಾರಿ ನಿರ್ದೇಶನಾಲಯ ಇದಕ್ಕೂ ಮುನ್ನ ತನ್ನ ಅರೆಸ್ಟ್​ ಆರ್ಡರ್​ನಲ್ಲಿ ಶಿವಶಂಕರ್ ಅವರು ಪ್ರಿವೆನ್ಶನ್ ಆಫ್​ ಮನಿ ಲಾಂಡರಿಂಗ್ ಆ್ಯಕ್ಟ್​ ಉಲ್ಲಂಘಿಸಿ ಅಪರಾಧ ಎಸಗಿದ್ದಾಗಿ ಆರೋಪಿಸಿತ್ತು.

    ಇದನ್ನೂ ಓದಿ: ರೇಪ್ ಮತ್ತು ಇತರೆ ಕ್ರೈಂ ಹೆಚ್ಚಾಗಲಿವೆ – ಪಿಡಿಪಿ ನಾಯಕ ಸುರಿಂದರ್ ಚೌಧರಿ ಎಚ್ಚರಿಕೆ

    ಬುಧವಾರ ಕೊಚ್ಚಿಯಲ್ಲಿರುವ ತನ್ನ ಕಚೇರಿಗೆ ಶಿವಶಂಕರ್ ಅವರನ್ನು ಕರೆಯಿಸಿಕೊಂಡು ಆರು ಗಂಟೆ ಕಾಲ ವಿಚಾರಣೆ ನಡೆಸಿತ್ತು. ರಾತ್ರಿ ಅವರನ್ನು ಬಂಧಿಸಿದ್ದಾಗಿ ಪ್ರಕಟಿಸಿದ್ದ ಜಾರಿನಿರ್ದೇಶನಾಲಯ ಇಂದು ಬೆಳಗ್ಗೆ ಕೋರ್ಟ್​​ಗೆ ಹಾಜರುಪಡಿಸಿತ್ತು. (ಏಜೆನ್ಸೀಸ್​)

    100ಕ್ಕೂ ಹೆಚ್ಚು ಸಲ ಕ್ರೈಂ ಪ್ಯಾಟ್ರೋಲ್ ವೀಕ್ಷಿಸಿ, ಅಪ್ಪನ ಹತ್ಯೆ ಮಾಡಿದ 12ನೇ ತರಗತಿ ವಿದ್ಯಾರ್ಥಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts