More

    ಕ್ರಿಕೆಟ್​ ಆಡುವ ಎಲ್ಲರಿಗೂ ಸಿಕ್ಸ್​ ಪ್ಯಾಕ್​ ಇರಬೇಕಾಗಿಲ್ಲ, ಪಾಕ್​ ಕ್ರಿಕೆಟಿಗನಿಗೆ ಪ್ಲೆಸಿಸ್​ ಬೆಂಬಲ

    ಕೇಪ್​ಟೌನ್​: ಕ್ರಿಕೆಟ್​ ಆಡುವ ಎಲ್ಲರಿಗೂ ಸಿಕ್ಸ್​ ಪ್ಯಾಕ್​ ಇರಬೇಕಾಗಿಲ್ಲ. ಸಿಕ್ಸ್​ ಪ್ಯಾಕ್​ ಇಲ್ಲದಿರುವವರೂ ಕ್ರಿಕೆಟ್​ನಲ್ಲಿ ಯಶಸ್ಸು ಕಾಣಬಹುದು ಎಂದು ದಣ ಆಫ್ರಿಕಾ ಕ್ರಿಕೆಟ್​ ತಂಡದ ಮಾಜಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ತಂಡದಲ್ಲಿ 100 ಕೆಜಿಗೂ ಅಧಿಕ ತೂಕದ ವಿಕೆಟ್​ ಕೀಪರ್​-ಬ್ಯಾಟ್ಸ್​ಮನ್​ ಅಜಾಮ್​ ಖಾನ್​ಗೆ ಸ್ಥಾನ ನೀಡಿರುವುದನ್ನು ಚೆನ್ನೈ ಸೂಪರ್​ಕಿಂಗ್ಸ್​ ಆಟಗಾರರೂ ಆಗಿರುವ ಪ್ಲೆಸಿಸ್​ ಸಮರ್ಥಿಸಿಕೊಂಡಿದ್ದಾರೆ.

    ದಪ್ಪನೆಯ ದೇಹದ ಅಜಾಮ್​ ಖಾನ್​ಗೆ ಮುಂಬರುವ ಇಂಗ್ಲೆಂಡ್​ ಮತ್ತು ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಪಾಕಿಸ್ತಾನ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿರುವ ಬಗ್ಗೆ ಕ್ರಿಕೆಟ್​ ಪ್ರೇಮಿಗಳು ಕಿಡಿಕಾರಿದ್ದು, ಅವರ ಫಿಟ್ನೆಸ್​ ಅನ್ನು ಪ್ರಶ್ನಿಸುತ್ತಿದ್ದಾರೆ. ಪಾಕ್​ ತಂಡದ ಮಾಜಿ ನಾಯಕ ಮೊಯಿನ್​ ಅಲಿ ಅವರ ಪುತ್ರರಾಗಿರುವುದು ಕೂಡ ಅಜಾಮ್​ ಆಯ್ಕೆಯ ಮೇಲೆ ಪ್ರಭಾವ ಬೀರಿದೆ ಎಂಬ ದೂರುಗಳೂ ಬಂದಿವೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​ ಫಾರ್ವರ್ಡ್​ ಮೆಸೇಜ್​ನಿಂದ ವಿವಾದ, ಕ್ಷಮೆಯಾಚಿಸಿದ ಕ್ರಿಕೆಟಿಗ ಹರ್ಭಜನ್​ ಸಿಂಗ್​

    ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್​ ತಂಡದ ಪರವಾಗಿ ಆಡುತ್ತ ಅಜಾಮ್​ ಖಾನ್​ ಜತೆಗೆ ಡ್ರೆಸ್ಸಿಂಗ್​ ರೂಂ ಹಂಚಿಕೊಂಡಿರುವ ಫಾಫ್​ ಡು ಪ್ಲೆಸಿಸ್​, ಫಿಟ್ನೆಸ್​ ವಿಷಯಕ್ಕೆ ಬಂದಾಗ ಎಲ್ಲರೂ ಪ್ರಯತ್ನ ಪಡುವುದು ಅಗತ್ಯ. ಪ್ರತಿದಿನವೂ ಫಿಟ್ನೆಸ್​ ಮಟ್ಟ ಸುಧಾರಿಸುತ್ತಿರಬೇಕು. ಆದರೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವಯಸ್ಸು ಹೆಚ್ಚಾದಂತೆ ಫಿಟ್ನೆಸ್​ ಸುಧಾರಣೆಯತ್ತ ಗಮನ ಹೆಚ್ಚಾಗುತ್ತದೆ. ಆದರೆ ಅಜಾಮ್​ ಖಾನ್​ ಅವರಂಥ ಆಟಗಾರ ಕ್ರಿಕೆಟ್​ನಲ್ಲಿ ಯಶಸ್ಸು ಕಾಣಲು ನನ್ನಂತೆಯೇ ಇರಬೇಕಾಗಿಲ್ಲ. ಶಕ್ತಿಶಾಲಿ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಅವರಲ್ಲಿದೆ. ಸಿಕ್ಸ್​ ಪ್ಯಾಕ್​ ಹೊಂದಿರುವ ಕ್ರಿಕೆಟಿಗರು ಮಾತ್ರ ಯಶಸ್ಸು ಕಾಣುತ್ತಾರೆ ಎಂಬುದನ್ನು ನಾನು ನಂಬುವುದಿಲ್ಲ. ಕೌಶಲವಿದ್ದರೆ ಯಾರೂ ಉತ್ತಮ ನಿರ್ವಹಣೆ ತೋರಬಹುದು ಎಂದು ವಿವರಿಸಿದ್ದಾರೆ.

    ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಸ್ಫೋಟಕ ಸಿಕ್ಸರ್​ಗಳ ಕಾರಣ ಗಮನಸೆಳೆದಿರುವ ಅಜಾಮ್​ ಖಾನ್​, ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ದೌರ್ಬಲ್ಯವನ್ನು ನೀಗಿಸುವ ಸಲುವಾಗಿ ಸ್ಥಾನ ಪಡೆದಿದ್ದಾರೆ ಎಂಬ ಸಮರ್ಥನೆಗಳನ್ನೂ ಆಯ್ಕೆಗಾರರು ನೀಡಿದ್ದಾರೆ.

    100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!

    ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?

    ಕೊಲೆ ಆರೋಪಿ ಸುಶೀಲ್​ ಕುಮಾರ್​ ಒಲಿಂಪಿಕ್ಸ್​ ಪದಕ, ಪದ್ಮಶ್ರೀ, ಖೇಲ್​ರತ್ನ ಪ್ರಶಸ್ತಿ ವಾಪಸ್​ ಕೊಡ್ಬೇಕಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts