More

    ಸಿಸಿಬಿ ನೋಟಿಸ್ ಬಂದಾಗ ಜಾಲಿ ಟ್ರಿಪ್‌ನಲ್ಲಿದ್ದ ದಿಗಂತ್-ಐಂದ್ರಿತಾ…

    ಬೆಂಗಳೂರು: ನಟ ದಿಗಂತ್, ನಟಿ ಐಂದ್ರಿತಾ ದಂಪತಿಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ನೋಟಿಸ್‌ ತಲುಪಿದಾಗ ಅವರು ಎಲ್ಲಿದ್ದರು? ಅವರ ಕುಟುಂಬದ ಮೂಲಗಳು ಹೇಳುವ ಪ್ರಕಾರ, ಅವರು ಕೇರಳದಲ್ಲಿ ಜಾಲಿ ಟ್ರಿಪ್‌ನಲ್ಲಿದ್ದರು!

    ಡ್ರಗ್ ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಖ್ ಫಾಜಿಲ್ ಜತೆ ಐಂದ್ರಿತಾ ಇರುವ ಫೋಟೋಗಳು ಈಗಾಗಲೇ ವೈರಲ್ ಆಗಿದ್ದವು. ಅದರ ವಿವರಗಳು ಮಾಧ್ಯಮಗಳಲ್ಲಿ ಹರಿದಾಡತೊಡಗಿದಾಗ ಸ್ವತಃ ಐಂದ್ರಿತಾ ಫೋನ್ ಮೂಲಕ ಸಮಜಾಯಿಷಿ ನೀಡಿದ್ದರು. ಆದರೆ ಪೊಲೀಸ್ ನೋಟಿಸ್ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಹಾಗಾಗಿಯೇ ಹಾಯಾಗಿ ಜಾಲಿ ಟ್ರಿಪ್‌ಗೆ ಹೋಗಿದ್ದರು. ಇದನ್ನೂ ಓದಿರಿ ಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ, ಈ ಬಗ್ಗೆ ನಟಿ ಹೇಳಿದ್ದೇನು?

    ವಾಟ್ಸ್‌ಆ್ಯಪ್‌ನಲ್ಲಿ ಮಂಗಳವಾರ ಪೊಲೀಸ್ ನೋಟಿಸ್ ಬಂದು ಬೀಳುತ್ತಿದ್ದಂತೆಯೇ ಐಂದ್ರಿತಾ-ದಿಗಂತ್‌ಗೆ ಗಾಬರಿ. ಆ ಸಮಯದಲ್ಲಿ ಅವರು ಇದ್ದಿದ್ದು ಕೇರಳದ ಪ್ರವಾಸಿ ಸಿಸಿಬಿ ನೋಟಿಸ್ ಬಂದಾಗ ಜಾಲಿ ಟ್ರಿಪ್‌ನಲ್ಲಿದ್ದ ದಿಗಂತ್-ಐಂದ್ರಿತಾ...ತಾಣವೊಂದರಲ್ಲಿ. ಜಾಲಿ ಮೂಡ್‌ನಿಂದ ತಕ್ಷಣ ವಾಸ್ತವಕ್ಕೆ ಮರಳಿದ ಇಬ್ಬರೂ ‘ನಾಳೆ ಬೆಳಗ್ಗೆ 11ಕ್ಕೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ತಪ್ಪದೇ ಹಾಜರಾಗುತ್ತೇವೆ. ವಿಚಾರಣೆಗೆ ಸಂಪೂರ್ಣ ಸಹಕರಿಸುತ್ತೇವೆ’ ಎಂದು ಟ್ವಿಟರ್‌ನಲ್ಲಿ ಪ್ರತ್ಯೇಕವಾಗಿ ಮೆಸೇಜ್ ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದಿಗಂತ್ ತಾಯಿ ಮಲ್ಲಿಕಾ ಅವರು, ‘‘ಕೇರಳ ಪ್ರವಾಸಕ್ಕೆಂದು ಮೂರು ದಿನಗಳ ಹಿಂದೆ ಮಗ, ಸೊಸೆ ಹೋಗಿದ್ದಾರೆ. ಮನೆಗಂತೂ ಯಾವುದೇ ನೋಟಿಸ್ ಬಂದಿಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ.

    ಹಿಂದೆ ನಟಿ ರಾಗಿಣಿಗೂ ಇದೇ ರೀತಿ ವಾಟ್ಸ್‌ಆ್ಯಪ್‌ನಲ್ಲಿ ಸಿಸಿಬಿ ನೋಟಿಸ್ ಹೋಗಿತ್ತು. ಅದನ್ನು ನಿರ್ಲಕ್ಷಿಸಿದ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ವಕೀಲರನ್ನು ಕಳಿಸಿದ್ದರು. ನಾಳೆಯೇ ತಮ್ಮ ಕಕ್ಷಿದಾರರು ಹಾಜರಾಗುತ್ತಾರೆ ಎಂದು ವಕೀಲರು ಪೊಲೀಸರಿಗೆ ತಿಳಿಸಿದ್ದರು. ಆದರೆ ರಾಗಿಣಿ ಫೇಸ್‌ಬುಕ್‌ನಲ್ಲಿ ‘ಮುಂದಿನ ಸೋಮವಾರ ವಿಚಾರಣೆಗೆ ಹೋಗುತ್ತೇನೆ’ ಎಂದು ಉಡಾಫೆಯ ಮೆಸೇಜ್ ಹಾಕಿದ್ದರು. ಅದರ ಮರುದಿನವೇ ಬೆಳ್ಳಂಬೆಳಗ್ಗೆ ಪೊಲೀಸರು ರಾಗಿಣಿ ಮನೆಗೆ ರೇಡ್ ಮಾಡಿದರಲ್ಲದೆ, ವಿಚಾರಣೆಗೆ ಅವರನ್ನು ತಮ್ಮೊಂದಿಗೇ ಸಿಸಿಬಿ ಕಚೇರಿಗೂ ಕರೆತಂದರು. ದಿಗಂತ್ ಮತ್ತು ಐಂದ್ರಿತಾ ಆ ರೀತಿ ಉಡಾಫೆ ಮಾಡದೇ ತಕ್ಷಣವೇ ಪೊಲೀಸರ ನೋಟಿಸ್‌ಗೆ ಸ್ಪಂದಿಸಿದ್ದಾರೆ.

    ಶ್ರೀಲಂಕಾದಲ್ಲಿ ಕ್ಯಾಸಿನೋ ಪಾರ್ಟಿಗಳ ಆಯೋಜಕ, ಶಾಸಕ ಜಮೀರ್ ಅಹಮ್ಮದ್ ಖಾನ್ ಆಪ್ತ ಶೇಖ್ ಫಾಜಿಲ್, ಜತೆ ನಟ ದಿಗಂತ್ ದಂಪತಿಗೆ ಒಡನಾಟ ಇತ್ತು. ನಟಿ ರಾಗಿಣಿ ದ್ವಿವೇದಿಯೊಂದಿಗೂ ನಟಿ ಐಂದ್ರಿತಾ ಆತ್ಮೀಯರಾಗಿದ್ದರು. ಪಬ್, ಹೋಟೆಲ್, ಕ್ಲಬ್, ರೆಸಾರ್ಟ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ನಡೆದಿದ್ದ ಪಾರ್ಟಿಗಳಿಗೆ ಸ್ಟಾರ್ ದಂಪತಿ ಹೋಗಿದ್ದರು ಎಂಬ ಆರೋಪವಿದೆ. ವಿಚಾರಣೆ ವೇಳೆ ರಾಗಿಣಿ ಮತ್ತು ಸಂಜನಾ ಸಹ ಸ್ಟಾರ್ ದಂಪತಿ ಹೆಸರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿರಿ PHOTOS/ ಡ್ರಗ್ಸ್​ ದಂಧೆಯ ಕಿಂಗ್​ಪಿನ್​ ಜತೆ ಐಂದ್ರಿತಾ ಪೋಸ್

    ಇದಲ್ಲದೆ, ಡ್ರಗ್ಸ್ ಕೇಸಿನಲ್ಲಿ ಆರೋಪಿಗಳಾಗಿರುವ ಶಿವಪ್ರಕಾಶ್, ಫಾಜಿಲ್, ವೀರೇನ್ ಖನ್ನಾ ಹಾಗೂ ರಾಹುಲ್ ತೋನ್ಸೆ ಜತೆ ಸ್ನೇಹವಿತ್ತು. ಬಣ್ಣದ ಲೋಕದ ಕಾರಣಕ್ಕೆ ಸಿಸಿಬಿ ನೋಟಿಸ್ ಬಂದಾಗ ಜಾಲಿ ಟ್ರಿಪ್‌ನಲ್ಲಿದ್ದ ದಿಗಂತ್-ಐಂದ್ರಿತಾ...ಐಂದ್ರಿತಾ ಮತ್ತು ದಿಗಂತ್‌ಗೆ ರಾಗಿಣಿ ಮತ್ತು ಸಂಜನಾ ಜತೆ ಸ್ನೇಹವಿತ್ತು. ಮೋಜು ಮಸ್ತಿಯಲ್ಲಿ ದಂಪತಿ ಜೊತೆ ರಾಗಿಣಿ ಹೆಚ್ಚು ಕಾಣಿಸಿಕೊಂಡಿದ್ದಳು. ಶ್ರೀಲಂಕಾದಲ್ಲಿ ಫಾಜಿಲ್ ಆಯೋಜಿಸಿದ್ದ ಕ್ಯಾಸಿನೋ ಪಾರ್ಟಿಗೆ ಐಂದ್ರಿತಾ ಆಹ್ವಾನಿತಳಾಗಿದ್ದರು. ಆ ಪಾರ್ಟಿ ಪ್ರಚಾರದಲ್ಲಿ ತೊಡಗಿದ್ದ ಐಂದ್ರಿತಾ, ಜನರಿಗೆ ಈದ್ ಆಚರಣೆಗೆ ಕ್ಯಾಸಿನೋ ಹೋಗುತ್ತಿರುವುದು ಖುಷಿಯಾಗಿದೆ. ನೀವು ಬನ್ನಿ ಎಂದು ಐಂದ್ರಿತಾ ಪ್ರಚಾರ ಮಾಡಿದ್ದು ಈಗ ಸಂಕಷ್ಟ ತಂದೊಡ್ಡಿದೆ ಎಂಬ ಮಾತುಗಳು ಕೇಳಿ ಬಂದಿವೆ.

    ಈ ಮಧ್ಯೆ, ಮಾದಕ ವಸ್ತು ಮಾರಾಟ ಪ್ರಕರಣದ ಎ1 ಶಿವಪ್ರಕಾಶ್ ಚಪ್ಪಿ ಮತ್ತು ಶ್ರೀಲಂಕಾದ ಕ್ಯಾಸಿನೋ ಆಯೋಜಕ ಶೇಖ್ ಫಾಜಿಲ್ ಜತೆ ಐಂದ್ರಿತಾ ತೆಗೆಸಿಕೊಂಡಿರುವ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಐಂದ್ರಿತಾ, ಕ್ಯಾಸಿನೋದಲ್ಲಿ ‘ಈದ್ ಆಚರಣೆಗೆ ಕ್ಯಾಸಿನೋ ಹೋಗುತ್ತಿರುವುದು ಖುಷಿಯಾಗಿದೆ ಎಂದು ಹೇಳಿಕೆ ನೀಡಿದ್ದರು. ಮೋಜು ಮಸ್ತಿ ವಿಡಿಯೋಗಳು ಚರ್ಚೆ ಹುಟ್ಟು ಹಾಕಿದ್ದು, ಇದೀಗ ದಂಪತಿಗೆ ಡ್ರಗ್ಸ್ ಜಾಲದ ಉರುಳು ಸುತ್ತಿಕೊಳ್ಳಲು ಕಾರಣವಾಗಿವೆ.

    ಸಿಸಿಬಿ ನೋಟಿಸ್ ಬಂದಾಗ ಜಾಲಿ ಟ್ರಿಪ್‌ನಲ್ಲಿದ್ದ ದಿಗಂತ್-ಐಂದ್ರಿತಾ...ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ದಿಗಂತ್, 2006ರ ಮಿಸ್ ಕ್ಯಾಲಿಪೋರ್ನಿಯಾ ಸಿನಿಮಾ ಮೂಲಕ ಬೆಳ್ಳಿತೆರೆ ಮೇಲೆ ಮೊದಲು ಕಾಣಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಐಂದ್ರಿತಾ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದಾರೆ. 2007ರಲ್ಲಿ ಮೆರವಣಿಗೆ ಸಿನಿಮಾದ ಮೂಲಕ ಐಂದ್ರಿತಾ ಸಿನಿಮಾ ರಂಗ ಪ್ರವೇಶಿಸಿದ್ದರು. ಮನಸಾರೆ, ಪಾರಿಜಾತ ಚಿತ್ರಗಳಲ್ಲಿ ಇಬ್ಬರು ನಟಿಸಿದ್ದರು. ಹಿಂದಿ, ತಮಿಳು, ತೆಲುಗು ಮತ್ತು ಮಲಯಾಂ ಭಾಷೆಗಳಲ್ಲಿ ಐಂದ್ರಿತಾ ನಟಿಸಿದ್ದಾರೆ. ಮನಸಾರೆ ಸಿನಿಮಾ ಬಳಿಕ ಪರಸ್ಪರ ಪ್ರೇಮದಲ್ಲಿ ಮುಳುಗಿದ್ದರು. 2018ರಲ್ಲಿ ಪ್ರೇಮ ವಿವಾಹವಾಗಿದ್ದರು. ಮದುವೆ ಬಳಿಕವೂ ದಿಗಂತ್ ದಂಪತಿ ಬಿಂದಾಸ್ ಜೀವನ ಶೈಲಿಯಿಂದ ಗಮನ ಸೆಳೆದಿದ್ದರು.

    ಚಲನಚಿತ್ರ ರಂಗದಲ್ಲಿ ಮಾದಕ ವಸ್ತು ದಂಧೆ ಮತ್ತು ಪೇಜ್-3 ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಮತ್ತು ಎನ್‌ಸಿಬಿ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿವೆ. ವಿಚಾರಣೆಯಲ್ಲಿ ದಿಗಂತ್ ಮತ್ತು ಐಂದ್ರಿತಾ ನೀಡುವ ಹೇಳಿಕೆ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್​ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್​ಗೆ ಕರೆದೊಯ್ಯುತ್ತಿದ್ದೆ…’

    ‘ಪ್ರಶಾಂತ್​ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts