More

    ನಗುವ ಅನಿಲ ಎಷ್ಟು ಅಪಾಯಕಾರಿ…?, ಮಗಳ ಸಾವು, ನಿಷೇಧಕ್ಕೆ ಒತ್ತಾಯಿಸಿದ ತಾಯಿ

    ಬ್ರಿಟನ್: ಮಹಿಳೆಯೊಬ್ಬರು ಲಾಫಿಂಗ್ ಗ್ಯಾಸ್, ನಗುವ ಅನಿಲ  ಅಂದರೆ ನೈಟ್ರಸ್ ಆಕ್ಸೈಡ್ ಅನ್ನು ಎ ಕೆಟಗರಿ ಔಷಧ ವರ್ಗಕ್ಕೆ ಸೇರಿಸುವಂತೆ ಬೇಡಿಕೆಯನ್ನು ಎತ್ತಿದ್ದಾರೆ. ಏಕೆಂದರೆ ಈ ಮಹಿಳೆಯ 24 ವರ್ಷದ ಮಗಳು ಎಲೆನ್ ನಗುವ ಅನಿಲಕ್ಕೆ ವ್ಯಸನಿಯಾಗಿದ್ದು, ಆ ನಂತರ ಸಾವನ್ನಪ್ಪಿದಳು.

    ಇಂಗ್ಲೆಂಡ್‌ನ ಬಕಿಂಗ್‌ಹ್ಯಾಮ್‌ಶೈರ್‌ನ ಗೆರಾರ್ಡ್ಸ್ ಕ್ರಾಸ್ ನಿವಾಸಿ, 54 ವರ್ಷದ ಶರೋನ್ ಕುಕ್ ಅವರು ನೈಟ್ರಸ್ ಆಕ್ಸೈಡ್‌ನಿಂದಾಗಿ ತಮ್ಮ ಮಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ನೈಟ್ರಸ್ ಆಕ್ಸೈಡ್‌ ಗೆ ಮಗಳು ವ್ಯಸನಿಯಾಗಿದ್ದಳೆಂದು ನನಗೆ ತಿಳಿದಿರಲಿಲ್ಲ ಎಂದು ತಿಳಿಸಿದ್ದಾರೆ.

    ಶರೋನ್ ಕುಕ್  ಮಗಳು ಅಲೆನ್ ಅವರ ಆರೋಗ್ಯ ಕಳೆದ ಫೆಬ್ರವರಿಯಲ್ಲಿ ಹದಗೆಟ್ಟಿದೆ. ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾಖಲಾದ ಮರುದಿನ ಅವರು ಸಾವನ್ನಪ್ಪಿದರು.

    ಡೆಲಿವರಿ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ತಾಯಿ ಶರೋನ್ ಇದೀಗ ಲಾಫಿಂಗ್ ಗ್ಯಾಸ್ ಬಗ್ಗೆ ನಿಯಮಗಳನ್ನು ಬಿಗಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದು ಮಾರಣಾಂತಿಕವಾಗಿದ್ದು, ಎ ವರ್ಗದ ಔಷಧಿ ಎಂದು ಕರೆಯಬೇಕು. ಇದು ಕಾನೂನುಬದ್ಧವಾಗಿಲ್ಲ. ಯಾರಾದರೂ ನೈಟ್ರಸ್ ಆಕ್ಸೈಡ್ ಮಾರಾಟ ಮಾಡುತ್ತಿದ್ದರೆ ಅವರನ್ನು ತಕ್ಷಣವೇ ಜೈಲಿಗೆ ಹಾಕಬೇಕು. ಇದು ಯಾವುದೇ ವ್ಯಕ್ತಿಯ ಪ್ರಾಣಕ್ಕಿಂತ ಅಮೂಲ್ಯವಲ್ಲ ಎಂದು ಶರೋನ್ ಹೇಳಿದರು. ಸದ್ಯ ಅಲೆನ್ ಸಾವಿನ ಬಗ್ಗೆ ವಿವರವಾದ ತನಿಖೆಗಾಗಿ ಆದೇಶವನ್ನು ನೀಡಲಾಗಿದೆ.

    ಏನಿದು ನಗುವ ಅನಿಲ?

    ವೈದ್ಯಕೀಯ ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ನೈಟ್ರಸ್ ಆಕ್ಸೈಡ್ ತೆಗೆದುಕೊಳ್ಳುವುದರಿಂದ ವಿಟಮಿನ್ ಬಿ 12 ಕೊರತೆಗೆ ಮತ್ತು ರಕ್ತಹೀನತೆಯ ಸಮಸ್ಯೆಗೆ ಕಾರಣವಾಗಬಹುದು. ಬಿ 12 ನ ಅತಿಯಾದ ಕೊರತೆಯು ಗಂಭೀರವಾದ ನರ ಹಾನಿಗೆ ಕಾರಣವಾಗಬಹುದು. ಇದರಿಂದ ನಡೆಯಲು ಕೂಡ ಕಷ್ಟವಾಗುತ್ತದೆ.

    ಫೋಟೋದಲ್ಲಿ ಕಿರುಚುತ್ತಿರುವ ಈ ನಾಟಿ ಪೋರಿ ಯಾರು…ಕ್ರಿಕೆಟಿಗನನ್ನು ವರಿಸಿದ್ದಾರೆ,  ನೀವು ಗೆಸ್ ಮಾಡ್ತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts