ನವದೆಹಲಿ: ಚಿನ್ನ ಕಳ್ಳಸಾಗಣೆ ದಿನೇದಿನೆ ಹೆಚ್ಚಾಗುತ್ತಿದ್ದು, ಈ ಸಲ ಭಾರತ- ಮ್ಯಾನ್ಮಾರ್ ಗಡಿ ದಾಟಿದ 400 ಚಿನ್ನದ ಗಟ್ಟಿಗಳು ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಅಧಿಕಾರಿಗಳ ಬಲೆಗೆ ಬಿದ್ದಿವೆ. ಡಿಆರ್ಐ ದೆಹಲಿ ಘಟಕದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಎರಡು ಟ್ರಕ್ಗಳ ಬೆನ್ನುಬಿದ್ದು ತಪಾಸಣೆ ನಡೆಸಿದಾಗ ಈ ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು.
ಟ್ರಕ್ಗಳು ಮ್ಯಾನ್ಮಾರ್ ಗಡಿ ದಾಟಿ ಭಾರತದೊಳಕ್ಕೆ ಬಂದಿದ್ದು, ಪಂಜಾಬ್ ಕಡೆಗೆ ಸಂಚರಿಸುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಟ್ರಕ್ಗಳನ್ನು ತಡೆದು ತಪಾಸಣೆ ನಡೆಸಿದಾಗ ಅದರ ಇಂಧನ ಟ್ಯಾಂಕ್ ಒಳಗೆ 400 ಚಿನ್ನದ ಗಟ್ಟಿಗಳು ಪತ್ತೆಯಾಗಿದ್ದವು. ಇವುಗಳ ಒಟ್ಟು ತೂಕ 66.4 ಕಿಲೋ. ಮೌಲ್ಯ ಅಂದಾಜು 35 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಸೇನಾ ಕಾರ್ಯಕರ್ತ ‘ಕರಾಚಿ’ ಸ್ವೀಟ್ಸ್ ಹೆಸರು ಬದಲಿಸಿ ಅಂದ: ಆ ಬೇಡಿಕೆ ಪಕ್ಷದ್ದಲ್ಲ ಎಂದ ಶಿವಸೇನೆ !
ಈ ಸಂಬಂಧ ಐವರನ್ನು ವಶಕ್ಕೆ ತೆಗೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ. ಲಾರಿ ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನದ ಗಟ್ಟಿಗಳು ವಿದೇಶಿ ಮೂಲದವು ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. (ಏಜೆನ್ಸೀಸ್)
VIDEO|ಜಸ್ಟ್ ಮಿಸ್.. ಇಲ್ಲಾಂದ್ರೆ 8 ಅಡಿ ಉದ್ದದ ಕಾಂಕ್ರೀಟ್ ಸ್ಲ್ಯಾಬ್ ತಲೆಮೇಲೆ ಬೀಳ್ತಾ ಇತ್ತು !