More

    ವಾರಾಂತ್ಯ ಕರ್ಫ್ಯೂ ಇರದಿದ್ದರೂ ರಾಜ್ಯದಲ್ಲಿ ಇಂದು ಸೋಂಕಿತರ ಪ್ರಮಾಣದಲ್ಲಿ ಗಣನೀಯ ಇಳಿಕೆ!

    ಬೆಂಗಳೂರು: ಹೊಸ ವರ್ಷದ ಮೊದಲ ದಿನದಂದಲೇ ಸತತ ಮೂರು ದಿನ ದೈನಂದಿನ ಒಂದು ಸಾವಿರ ಪ್ರಕರಣ ತಲುಪುವ ಮೂಲಕ ಸಾವಿರದ ಹ್ಯಾಟ್ರಿಕ್ ಬಾರಿಸಿದ್ದ ಕರೊನಾ ಆ ಬಳಿಕ ತೀವ್ರಗತಿಯಲ್ಲಿ ಏರಿದ್ದು, ಒಂದು ದಿನದಲ್ಲೇ 10-20-30 ಸಾವಿರಗಳಿಗೆ ಏರಿ 40 ಸಾವಿರವನ್ನೂ ದಾಟಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ.

    ಕರೊನಾ ಈ ಥರ ಭಾರಿ ಪ್ರಮಾಣದಲ್ಲಿ ಏರುತ್ತಿರುವುದನ್ನು ಕಂಡು ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದ್ದಲ್ಲದೆ ಮೊದಲೆರಡು ವಾರವೇ ವಾರಾಂತ್ಯ ಕರ್ಫ್ಯೂ ಕೂಡ ಹೇರಿತ್ತು. ಅದಾಗ್ಯೂ ಪ್ರಕರಣ ನಿಯಂತ್ರಣಕ್ಕೆ ಸಿಗದೆ ಏರುತ್ತಿದ್ದ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಭಾರಿ ಚರ್ಚೆಗಳು ಕೂಡ ನಡೆದು, ಕೊನೆಗೂ ವಾರಾಂತ್ಯ ಕರ್ಫ್ಯೂ ಮತ್ತೆ ಮುಂದುವರಿಸುವ ಚಿಂತನೆಯಿಂದ ಸರ್ಕಾರ ನಿನ್ನೆಯಷ್ಟೇ ಹಿಂದೆ ಸರಿದಿತ್ತು.

    ಇದನ್ನೂ ಓದಿ: ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

    ಅಚ್ಚರಿ ಎಂದರೆ ಇದೀಗ ವಾರಾಂತ್ಯ ಕರ್ಫ್ಯೂ ಹಿಂಪಡೆದ ಮೊದಲ 24 ಗಂಟೆಗಳಲ್ಲೇ ಅಂದರೆ ಈ ವಾರಾಂತ್ಯದ ಮೊದಲ ದಿನವೇ ಕರೊನಾ ಪ್ರಕರಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

    ರಾಜ್ಯದಲ್ಲಿ ನಿನ್ನೆ ಒಂದು ದಿನದಲ್ಲಿ 48,049 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದರೆ, ಬೆಂಗಳೂರೊಂದರಲ್ಲೇ 29,068 ಜನರಲ್ಲಿ ಕರೊನಾ ದೃಢಪಟ್ಟಿತ್ತು. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3,23,143ಕ್ಕೆ ಏರಿತ್ತು.

    ಇದನ್ನೂ ಓದಿ: ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!

    ಆದರೆ ಇಂದು ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಇರದಿದ್ದರೂ ಇಂದಿನ ದೈನಿಕ ಪ್ರಕರಣ 42,470 ಮಾತ್ರ. ಅದರಲ್ಲೂ ಬೆಂಗಳೂರಿನಲ್ಲಿ ಹೊಸದಾಗಿ ಪತ್ತೆಯಾಗಿರುವ ಕೋವಿಡ್ ಸೋಂಕಿತರ ಸಂಖ್ಯೆ ಬರೀ 17,266. ಈ ಮೂಲಕ ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 3,30,447ಕ್ಕೆ ತಲುಪಿದೆ. ಅದಾಗ್ಯೂ ಜನರು ನಿರ್ಲಕ್ಷ್ಯ ವಹಿಸುವಂತಿಲ್ಲ. ಏಕೆಂದರೆ ನಿನ್ನೆಗೂ ಇಂದಿಗೂ ಪಾಸಿಟಿವಿಟಿ ದರದಲ್ಲಿ ಅಂಥ ವ್ಯತ್ಯಾಸವೇನಿಲ್ಲ. ನಿನ್ನೆ ಶೇ. 19.23 ಇದ್ದ ಪಾಸಿಟಿವಿಟಿ ದರದಲ್ಲಿ ಇಂದು ತುಸು ಏರಿಕೆ ಕಂಡಿದ್ದು ಅದು ಶೇ. 19.33ಕ್ಕೆ ಏರಿದೆ.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts