More

    ಇಂದಿಗೆ ಪ್ರಸ್ತುತವಾದ ಅಂಬೇಡ್ಕರರ ಕೆಲ ವಿಚಾರಗಳು; ಕೆ.ಎಸ್​.ನಾರಾಯಣಾಚಾರ್ಯರ ಅಂಕಣ

    ಇಂದಿಗೆ ಪ್ರಸ್ತುತವಾದ ಅಂಬೇಡ್ಕರರ ಕೆಲ ವಿಚಾರಗಳು; ಕೆ.ಎಸ್​.ನಾರಾಯಣಾಚಾರ್ಯರ ಅಂಕಣಬ್ರಾಹ್ಮಣದ್ವೇಷ, ಹಿಂದೂದ್ವೇಷ, ಉತ್ತರಭಾರತ ದ್ವೇಷ, ಸಂಸ್ಕೃತ ದ್ವೇಷ, ಇವು ತಮಿಳುನಾಡಿಗೆ ಸೀಮಿತವಲ್ಲ. ಕರ್ನಾಟಕಕ್ಕೂ ಅಲ್ಪದೃಷ್ಟಿಯ, ಅಸಂಸ್ಕೃತ ರಾಜಕಾರಣಿಗಳ ತಲೆಗಳಿಗೆ ಹರಡಿ, ಇಲ್ಲೂ ಈಗ ನಾನಾ ರೂಪದ ಹಾವಳಿಗಳಲ್ಲಿ ಮೊಳೆತು ಹರಡುತ್ತಿದೆ.

    ಜನತೆಯ ದಾರಿ ತಪ್ಪಿಸದೆ ಕೆಲವು ಪುಢಾರಿಗಳ, ಪುಂಡರ ರಾಜಕೀಯ ಬೇಳೆ ಬೇಯುವುದಿಲ್ಲ. ಬೇಯಿಸಲು ಜನತಾ ಕೋಪವನ್ನು ಕೆಲವು ಸಮುದಾಯ- ರಾಜಕೀಯ ಪಕ್ಷ, ಜಾತಿ, ಪಂಗಡ, ಭಾಷೆ, ಜನಾಂಗೀಯ ಅವಿಚಾರಿತ ಭಾವನೆಗಳ ಮೇಲೆ ‘ಛೂ’ ಬಿಡುವುದು ಲಾಗಾಯ್ತಿನಿಂದಲೂ ನಡೆದೇ ಬರುತ್ತಿದೆ. ‘ಹಿಂದೂ ದ್ವೇಷ’ ಹಾಗೇ ಪಾಕಿಸ್ತಾನದ ಮತಾಂಧರಿಗೆ ಒಂದು ಲಕ್ಷ್ಯ. ‘ಅದು ಸಾಯಿಸುತ್ತದೆ, ಬದುಕಿಸದು’ ಎಂಬುದು ಇಂದಿಗೂ ಪಾಕಿಸ್ತಾನದ ನಾಯಕರಿಗೆ ತಿಳಿಯುತ್ತಿಲ್ಲ. ಪಾಕ್ ಸಾಯುತ್ತಿದೆ, ಸತ್ತಿದೆ.

    ಆರ್ಯ-ದ್ರಾವಿಡ ವಾದವನ್ನು ಬ್ರಿಟಿಷರು ಬಿತ್ತಿದ್ದು, ತಮಿಳರಿಗೆ ಪಿಠ್ಠ ಹಿಡಿಸಿದೆ. ಒಬ್ಬ ಕ್ರೖೆಸ್ತ ಪಾದ್ರಿ ತಮಿಳುನಾಡಿನಲ್ಲಿ ಕ್ರೖೆಸ್ತರ, ಡಿಎಂಕೆ ಮುಂತಾದವರ ಸಂಘಟನೆಯೊಂದರಲ್ಲಿ ಇತ್ತೀಚೆಗೆ ಮಾತನಾಡುತ್ತ, ‘ಈ ದ್ರವಿಡವಾದವು ಆರ್ಯದ್ವೇಷ ರೂಪದಲ್ಲಿ ಹೊರಹೊಮ್ಮಿದ್ದೇ ಮತಾಂತರ ಚಳವಳಿಯ ತೀಕ್ಷ್ಣತೆಗೆ-‘ಇವ್ಯಾಂಜಲಿಸಂ’ ಎಂಬ ವ್ಯಾಪಕ ‘ದಿಗ್ವಿಜಯ’ಕ್ಕೆ ಕಾರಣವಾಯಿತು’ ಎಂದು ಹೇಳಿದ. ಅದು ಬ್ರಾಹ್ಮಣದ್ವೇಷದ ಉರಿಯನ್ನು ತುಪ್ಪ ಸುರಿಸಿ ಬೆಳೆಸಿತು. ಸುಮಾರು ಒಂದು ಶತಮಾನ ಕಾಲದಿಂದ ತಮಿಳುನಾಡು ಈ ಕಿಚ್ಚಿನಲ್ಲಿ ನರಳಿತು. ದೇವಾಲಯಗಳು ಲೂಟಿಯಾಗಿ, ಸಂಪತ್ತು ಅಪವ್ಯಯವಾಗಿ, ಕ್ರೖೆಸ್ತರ, ಇಸ್ಲಾಮಿಯರ ಹಾವಳಿಯಲ್ಲಿ ತಮಿಳುನಾಡು ಒಂದು ಕಾಲದ ಖ್ಯಾತಿಯನ್ನು ಕಳೆದುಕೊಂಡಿತು.

    ಅತ್ಯಂತ ಬುದ್ಧಿಶೀಲರ ಸಂಪತ್ತಿದ್ದ ರಾಜ್ಯದಲ್ಲಿ ಐಎಎಸ್, ಐಪಿಎಸ್ ಶ್ರೇಣಿಗಳ ಪಾಸ್ ಸಂಖ್ಯೆ ಕಡಿಮೆಯೂ ಆಗಿ, ‘ಇಂಗ್ಲಿಷು’ ದ್ವೇಷದತ್ತ ತಿರುಗಿ, ಈ ಚಳವಳಿ ಕರುಣಾನಿಧಿಯ ಕುಟುಂಬಸಂಪತ್ತು, ಹಿತಾಸಕ್ತಿ, ತಮಿಳರ ಶೋಷಣೆಗೆ ಮಾತ್ರ ಸಹಾಯಕವಾಯಿತು. ತಮಿಳರು ರಿಕ್ಷಾ-ಸೈಕಲ್ ರಿಕ್ಷಾ ಎಳೆದು ಸತ್ತರು; ಕುಡಿದು, ಸಂಪಾದಿಸಿದ್ದನ್ನು ಸಿನಿಮಾ ನಟರ ಪೋಷಣೆಗೇ ಇತ್ತು, ಸಿನಿಮಾ ನೋಡಿ, ‘ಸಿನಿ ರಾಜಕೀಯ’ ಬೆಳೆಸಿದರು ಅಷ್ಟೇ. ಬಡವರ ಸ್ಥಿತಿ ಬದಲಾಗಲಿಲ್ಲ! ಜಯಲಲಿತಾರ ಅಧಿಕಾರಗ್ರಹಣ DMKಗೆ ಎರಡಕ್ಷರ AI ಸೇರಿಸಿತ್ತು ಹೊರತು, ಅವರೂ ದೋಚಿದರು, ಜೈಲಲ್ಲಿ ಕೊಳೆತು, ಆಸ್ಪತ್ರೆಯಲ್ಲಿ ಅನಾಥಶವವಾಗಿ ಸತ್ತರು! ತಮಿಳರ ಹುಚ್ಚು ಶಶಿಕಲಾರ ಸಂಪತ್ತನ್ನು ಬೆಳೆಸಿತು ಹೊರತು, ಕ್ರೖೆಸ್ತರ ಹಾವಳಿಗೇ ಪ್ರೋತ್ಸಾಹವಿತ್ತು, ಇನ್ನೂ ನಾಶವಾಗದ ಹಿಂದೂ ಸಂಸ್ಥೆಗಳ ಮೇಲೆ ನಾನಾ ತರಹದ ದಾಳಿಗಳಿಗೆ ನೀರು, ಗೊಬ್ಬರ ಸುರಿಸಿತು. ರಜನೀ, ಕಮಲಹಾಸನ್, ವಿಜಯಕಾಂತರು ನಿಸ್ಸಹಾಯಕರಾಗಿ, ಇಲ್ಲಿ ಗುಂಪು ಫಾಯಿದೆ ಮಾಡಿಕೊಂಡದ್ದು ಸತ್ಯ.

    ಇಂದಿಗೆ ಪ್ರಸ್ತುತವಾದ ಅಂಬೇಡ್ಕರರ ಕೆಲ ವಿಚಾರಗಳು; ಕೆ.ಎಸ್​.ನಾರಾಯಣಾಚಾರ್ಯರ ಅಂಕಣ

    ಈ ಬ್ರಾಹ್ಮಣದ್ವೇಷ, ಹಿಂದೂದ್ವೇಷ, ಉತ್ತರಭಾರತ ದ್ವೇಷ, ಸಂಸ್ಕೃತ ದ್ವೇಷ, ಇವು ಕರ್ನಾಟಕಕ್ಕೂ ಅಲ್ಪದೃಷ್ಟಿಯ, ಅಸಂಸ್ಕೃತ ರಾಜಕಾರಣಿಗಳ ತಲೆಗಳಿಗೆ ಹರಡಿ, ಇಲ್ಲೂ ಈಗ ನಾನಾ ರೂಪದ ಹಾವಳಿಗಳಲ್ಲಿ ಮೊಳೆತು ಹರಡುತ್ತಿದೆ. ಪಠ್ಯದಲ್ಲೂ ‘ಬ್ರಾಹ್ಮಣರು ಶೋಷಕರು, ಹಿಂಸಕರು, ಜಾತಿ ಪದ್ಧತಿಯಲ್ಲಿ, ಶ್ರೇಣಿಕೃತ ಸಮಾಜದ ಹೇರಿಕೆಯಲ್ಲಿ ಸ್ವಹಿತ ಸಾಧಿಸಿದ ಸ್ವಾರ್ಥಿಗಳು’ ಎಂಬ ರೀತಿಯ ಮಾತುಗಳನ್ನು ಸೇರಿಸಿ, ಸರ್ಕಾರವೋ, ಸಮಿತಿಯೋ, ಬರಹಗಾರರೋ, ಸಾಹಿತಿಗಳೆಂಬ ಪಟ್ಟ ಹೊತ್ತವರೋ ಈ ಸಂಚಿಗೆ ಕಾರಣರು, ಬಲಿಯೋ ಆಗಿರುವುದು ಪ್ರಸಕ್ತ ವಿದ್ಯಮಾನ. ಕೇರಳದಲ್ಲಿ ಕೇಳುವುದೇ ಬೇಡ. ಉತ್ತರಪ್ರದೇಶದಲ್ಲಿ ‘ಮನುವಾದಿಗಳು’ ಎಂಬ ಬೈಗುಳ ಮಾಯಾವತಿ ಬಾಯಲ್ಲಿ ಬಿಎಸ್​ಪಿ ಮಂತ್ರವಾಗಿಯೂ ಸೋತು ಸುಣ್ಣವಾದದ್ದೂ ಎದುರೇ ಇದೆ! ಏನು ‘ಈ ಮನುವಾದ?’ ‘ಮನು ಏನು ಅಪಚಾರ ಮಾಡಿದ?’ ಎಂಬುದಕ್ಕೆ ಸ್ವಯಂ ಅಂಬೇಡ್ಕರರವೇ ಮಾತುಗಳನ್ನು ಓದಿ, ನೀವೀಗ ಜ್ಞಾನವಂತರಾಗಬೇಕು! ದಾರಿ ತಪ್ಪಿದ ದಲಿತರು, ದಾರಿ ತಪ್ಪಿದ ಶೈವ ಲಿಂಗಾಯತ ಮಠಾಧೀಶ ಮುಖಂಡರೂ, ‘ವೀರಶೈವ-ಲಿಂಗಾಯತ’ ಭೇದಕ್ಕೆ ಚಳವಳಿ ಮಾಡಿ ಹತಾಶರಾದವರೂ ಇತ್ತ ಕಣ್ಣು ಹಾಯಿಸಲಿ.

    ‘Caste In India’ ಎಂಬ ಪ್ರಬಂಧದಲ್ಲಿ (ಬರಹಗಳು, ಭಾಷಣಗಳು, ಸಂಪುಟ-1, 16ನೇ ಪುಟದಲ್ಲಿ) ಅಂಬೇಡ್ಕರ್ ಬರೆಯುತ್ತಾರೆ- ‘ಒಂದು ವಿಷಯವನ್ನು ನಾನು ನಿಮ್ಮಲ್ಲಿ ಒತ್ತಿ ಹೇಳುವುದು ಏನೆಂದರೆ ಮನುವು ಜಾತಿಯ ಬಗ್ಗೆ ನಿರ್ಣಯ, ಸೃಷ್ಟಿ ಮಾಡಿದವನಲ್ಲ. ಅವನು ಹಾಗೆ ತೀರ್ಪು ಕೊಡಲು ಸಾಧ್ಯವೂ ಇರಲಿಲ್ಲ. ಮನುವಿಗಿಂತ ಸಾವಿರಾರು ವರ್ಷಗಳ ಹಿಂದಿನಿಂದಲೂ ಜಾತಿ ಇತ್ತು. ಅವನು ಅದನ್ನು ಬರೀ ಎತ್ತಿ ಹಿಡಿದ ಅಷ್ಟೆ. ಅದಕ್ಕೊಂದು ತಾತ್ವಿಕ ನೆಲೆಗಟ್ಟನ್ನು ಮನುವು ಇತ್ತ. ಖಂಡಿತವಾಗಿ, ಈಗಿನ ಪ್ರಚಲಿತ ಜಾತಿಪದ್ಧತಿಗೆ, ರೂಢಿಗೆ, ಅವನು ಜಾರಿ ಮಾಡಿದವನೂ ಅಲ್ಲ, ಹಾಗೆ ಮಾಡಲು ಬರುತ್ತಲೂ ಇರಲಿಲ್ಲ. ಜಾತಿಯ ಹರಡುವಿಕೆ, ಬೆಳವಣಿಗೆಗಳು ಎಷ್ಟು ಬೃಹತ್ತಾದ ಮೂಲದ್ದೆಂದರೆ ಒಬ್ಬ ವ್ಯಕ್ತಿಯು ಒಂದು ಸಮುದಾಯದ ಶಕ್ತಿಗೆ, ಹಾಗೆ ಸೃಷ್ಟಿ ಮಾಡಲು ಆಗದುದಾಗಿತ್ತು. ಈ ಮಾತು, ಬ್ರಾಹ್ಮಣರು ಜಾತಿ ಸೃಷ್ಟಿಸಿದರೆಂಬ ಸುಳ್ಳಿಗೂ ಅನ್ವಯವಾದುದ್ದು. ಮನುವಿನ ಬಗೆಗೆ ನಾನು ಹೀಗೆ ಹೇಳಿಯಾದ ಮೇಲೆ ಇಲ್ಲಿ ಇನ್ನು ಹೆಚ್ಚು ಹೇಳುವುದೇನಿಲ್ಲ. ಅದು ಅಸಂಬದ್ಧ ಮತ್ತು ದ್ವೇಷಮೂಲದ್ದು ಎಂದು ಸೇರಿಸಬೇಕಷ್ಟೆ. ಬ್ರಾಹ್ಮಣರು ಬೇರೆ ಎಷ್ಟೋ ವಿಷಯಗಳಲ್ಲಿ ಅಪರಾಧಿಗಳಿರಬಹುದು- ಇದ್ದಾರೆಂತಲೇ ಹೇಳೋಣ- ಆದರೆ ಈ ಅಬ್ರಾಹ್ಮಣರ ಮೇಲೆ, ಜಾತಿಪದ್ಧತಿಯ ಹೇರುವಿಕೆಯು ಅವರ ಶಕ್ತಿಗೆ, ಬುದ್ಧಿವಂತಿಕೆಗೆ ಮೀರಿದ್ದಾಗಿತ್ತು’.

    ಅಂಬೇಡ್ಕರರ ಇನ್ನೊಂದು ತೀರ್ಪು ಹೀಗೆ- ‘ಜಾತಿಯ ಕುರಿತ ನನ್ನ ಅಭ್ಯಾಸದಲ್ಲಿ ನಾಲ್ಕು ಅಂಶಗಳನ್ನು ಹೀಗೆ ಮನಗಂಡಿರುತ್ತೇನೆ, ಹಿಂದೂ ಜನ ಸಮುದಾಯದ ಸಂಕೀರ್ಣ ಸ್ವರೂಪದಲ್ಲಿ- ನಾನಾ ಭೇದಗಳ ಅಡಕದಲ್ಲಿ- ಒಂದು ಆಳದ ಬೇರಿನ ಏಕತೆ ಇದೆ. ಈ ಸಾಂಸ್ಕೃತಿಕ ಮಹಾಘಟಕದಲ್ಲಿ ಜಾತಿ ಎಂಬುದು ಒಂದು ವೃತ್ತಿ ವರ್ಗೀಕರಣ ಮಾತ್ರ. ಆರಂಭದಲ್ಲಿ ಒಂದೇ ಜಾತಿಯಿದ್ದು, ಕ್ರಮೇಣ ಅನುಕರಣೆ, ಬಹಿಷ್ಕರಣೆಗಳಿಂದ ಅದು ಬಹು ಆಯಿತು. ಜನಾಂಗೀಯವಾಗಿ ಇಲ್ಲಿರುವವರೆಲ್ಲ ಒಂದೇ ಮೂಲದವರು. ಪಂಜಾಬಿನ ಬ್ರಾಹ್ಮಣನೂ, ಅದೇ ಪಂಜಾಬಿನ ಚಮ್ಮಾರನೂ, ಒಂದೇ ರಕ್ತ ಮೂಲದವರು’ (ಪುಟ 49).

    ಹಾಗಾದರೆ ‘ಶೂದ್ರರು’ ಎಂಬುವರು ಯಾರು ಎಂಬ ಪ್ರಶ್ನೆಗೆ ಅಂಬೇಡ್ಕರರ ಉತ್ತರ- ‘ಇವರು ಸೂರ್ಯ ವಂಶ ಮೂಲದವರು. ಆರಂಭದಲ್ಲಿದ್ದುವು ಮೂರೇ ವರ್ಣಗಳು- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಎಂಬುವು. ಕೆಲವು ಕ್ಷತ್ರಿಯರು ಬ್ರಾಹ್ಮಣ ಹಿಂಸನದಲ್ಲಿ ತೊಡಗಿದ್ದರಿಂದ ಇವರಿಗೆ ಬ್ರಾಹ್ಮಣರು ಉಪನಯನ ಸಂಸ್ಕಾರ, ವೇದದೀಕ್ಷೆಯನ್ನು ನಿರಾಕರಿಸಿ ಸಂಸ್ಕಾರಭ್ರಷ್ಟರು ಶೂದ್ರರಾದರು’ (ಪುಟ 11-12, ಬರೆಹಗಳು, ಭಾಷಣಗಳು ಸಂಪುಟ 7). ಐಜವನನೆಂಬ ಸೂರ್ಯವಂಶದ ದೊರೆಯ ಕಾಲದಲ್ಲಿ ವಸಿಷ್ಠ, ವಿಶ್ವಾಮಿತ್ರ ಸಂಘರ್ಷ ಕಾಲದಲ್ಲಿ ಶೂದ್ರರು ಹೀಗೆ ಹುಟ್ಟಿದರು ಎಂದೂ ಬರೆಯುತ್ತಾರೆ. ಬ್ರಾಕಿಂಗ್​ಟನ್ ಎಂಬ ಬ್ರಿಟಿಷ್ ಇಂಡಾಲಜಿ ವಿದ್ವಾಂಸನ ಮಾತುಗಳನ್ನೂ ಅಂಬೇಡ್ಕರ್ ಬೆಂಬಲಿಸಿ ಬರೆಯುತ್ತಾರೆ. ‘ಜಾತಿಯೆಂಬುದು, ವಿವಿಧ ಬುಡಕಟ್ಟುಗಳ ಉಪ ಪಂಗಡಗಳ ಜನರನ್ನು ಒಂದು ಸಾಂಸ್ಕೃತಿಕ ಏಕೀಕರಣದ ಯತ್ನದಲ್ಲಿ ಜೀರ್ಣಿಸಿಕೊಳ್ಳುವ ಯತ್ನವಾಗಿತ್ತು’ (The Sacred Thread- a short story of Hinduism ಇದರ ವಿಮರ್ಶೆ Sunday Observerನಲ್ಲಿ 24-01-1993ರಲ್ಲಿ).

    ಅಂಬೇಡ್ಕರರ ಇನ್ನೊಂದು ಸಂಶೋಧಿತ ಸತ್ಯ- ‘ವೇದಗಳಲ್ಲಿ ಅಸ್ಪ್ರಶ್ಯತೆಯ ಸೋಂಕು, ಪ್ರಸ್ತಾಪವೇ ಇಲ್ಲ. ಪರಿಶುದ್ಧ ಹಿಡಿತದ ಜಾತಿ ಪ್ರಸ್ತಾಪವೂ ಇಲ್ಲ. ಬರೀ ವರ್ಗಗಳ ವರ್ಣನೆ ಇದೆ’.

    ಇನ್ನೂ ಹೆಚ್ಚಿನ ವಿವರಗಳಿಗೆ ನೋಡಿ- ‘Dr Ambedkar- A True Aryan’ & Koenraad Elst (Voice of India New Delhi) ಈ ಗ್ರಂಥದ 12 ಅಧ್ಯಾಯಗಳು ಹೀಗಿವೆ. 1) ಪ್ರಾಮಾಣಿಕ ರಾಷ್ಟ್ರಪ್ರೇಮಿ 2) ಇಸ್ಲಾಂ ಕುರಿತು ಅಂಬೇಡ್ಕರ್ 3) ಜಾತಿ ಮತ್ತು ಜನಾಂಗದ ಕುರಿತು 4) ಶೂದ್ರರೆಂದರೆ ಯಾರು? 5) ಅಸ್ಪಶ್ಯತೆಯ ಉಗಮ 6) ಹಿಂದೂ ಧರ್ಮ-ಜಾತಿಗಳ ಸಮೀಕರಣ? 7) ಹಿಂದೂ ಧರ್ಮ ಕುರಿತು 8) ಬೌದ್ಧ ಮತಕ್ಕೆ ಮತಾಂತರ ಕುರಿತು 9) ಬೌದ್ಧರಲ್ಲಿ ಕಮ್ಯುನಲಿಸಂ 10) ಹಿಂದೂ-ಬೌದ್ಧ ಹೋಲಿಕೆಗಳು 11) ಬೌದ್ಧರ ಸಾಮಾಜಿಕ ಕಾರ್ಯಕ್ರಮಗಳು 12) ಉಪಸಂಹಾರ. ಏನನ್ನೂ ಓದದ, ಚಿಂತಿಸದ ಕಾಂಗ್ರೆಸ್ಸು, ನೆಹ್ರೂ ಪರಿವಾರ, ಇಂದಿನ ಎಡಪಂಥೀಯ ಬರಹಗಾರರು, ಅಪಪ್ರಚಾರ ಮಾಯಾಜಾಲದಿಂದ ಹೊರಬರುವುದು ತುರ್ತು ಅವಶ್ಯಕ! ತಮಿಳುನಾಡು ಈಗ ಉರಿದು ಬೂದಿಯಾದ ಕಾಳ್ಗಿಚ್ಚಿನಂತಾಗಿದೆ. ಬಂಗಾಳ ಇನ್ನೂ ಉರಿಯುತ್ತಿದೆ. ಕೇರಳದಲ್ಲಿ ಹಿಂದೂಕ್ರಾಂತಿ ಆರಂಭವಾಗಿದೆ.

    ಕೊನೆಯ ಮಾತು: ನೆಹ್ರೂ ಬದಲಿಗೆ ಅಂಬೇಡ್ಕರ್ ಭಾರತದ ಪ್ರಥಮ ಪ್ರಧಾನಿ ಆಗಿದ್ದರೆ ಇಂದಿನ ಎಷ್ಟೋ ಸಮಸ್ಯೆಗಳು ತೀರುತ್ತಿದ್ದವು! (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

    ಬಾಬಾ ಕಾ ಡಾಬಾ ಈಗ ಸಣ್ಣ ಅಂಗಡಿಯಲ್ಲ, ದೊಡ್ಡ ರೆಸ್ಟೋರೆಂಟ್​! ಇವೆಲ್ಲ ಸೋಶಿಯಲ್​ ಮೀಡಿಯಾ ಎಫೆಕ್ಟ್​!

    ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?

    VIDEO: ಶೂಟಿಂಗ್​ ವೇಳೆ ನಟನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts