More

    ಮನು ಧರ್ಮ ಮರುಸ್ಥಾಪನೆಗೆ ಹುನ್ನಾರ

    ಶಿವಮೊಗ್ಗ: ಮನುಧರ್ಮವೇ ಮತ್ತೆ ಮರುಸ್ಥಾಪನೆಯಾಗುವ ಹುನ್ನಾರಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಚಿಂತನೆಗಳು ಮುಖ್ಯವಾಗುತ್ತವೆ ಎಂದು ಕುವೆಂಪು ವಿವಿ ಎನ್‌ಎಸ್‌ಎಸ್ ಸಂಚಾಲಕಿ ಹಾಗೂ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು.

    ಸೋಮವಾರ ಸಹ್ಯಾದ್ರಿ ಕಲಾ ಕಾಲೇಜಿನ ಸಹ್ಯಾದ್ರಿ ಕಲಾ ಪರಿಪತ್, ಎನ್‌ಎಸ್‌ಎಸ್ ಘಟಕದಿಂದ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ಅಸಮಾನತೆ, ಕ್ರೌರ್ಯವಿದೆ. ದೇಶವನ್ನು ನುಂಗುವ ಕಬಂಧ ಬಾಹುಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಉಡುಗೆ ತೊಡುಗೆ, ಆಚಾರ ವಿಚಾರಗಳಂತಹ ಸಣ್ಣ ಸಂಗತಿಗಳಿಗೂ ಕಟ್ಟುಪಾಡುಗಳನ್ನು ಹಾಕುವ ಈ ಹೊತ್ತಿನಲ್ಲಿ ಅಂಬೇಡ್ಕರ್ ಮತ್ತೆ ನೆನಪಾಗುತ್ತಾರೆ. ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಂದಾಗಿದ್ದ ಸಂದರ್ಭ ಮನುಸ್ಮತಿಯೇ ನಮ್ಮ ಸಂವಿಧಾನ. ನಮಗೆ ಬೇರೆ ಸಂವಿಧಾನ ಬೇಡ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
    ಎಲ್ಲ ಅಡೆತಡೆ ಮೀರಿ ಅಂಬೇಡ್ಕರ್ ನಮಗೆ ಸ್ವಾಭಿಮಾನದ ಸಂವಿಧಾನ ಕೊಟ್ಟಿದ್ದಾರೆ. ಆದರೂ ಮತ್ತೆ ಮನುಧರ್ಮವೇ ವಿಜೃಂಭಿಸುತ್ತಿದೆ. ಬಹು ಸಂಸ್ಕೃತಿಯ ಭಾರತವನ್ನು ನಾಶ ಮಾಡುವ ಶಕ್ತಿಗಳು ಹೆಚ್ಚುತ್ತಿವೆ. ಅಂಬೇಡ್ಕರ್ ಸ್ವಾಭಿಮಾನದ ಚಿಂತನೆಗಳು ಗೌಣವಾಗುವ ಮತ್ತು ಸಂವಿಧಾನವನ್ನೇ ಬದಲಾಯಿಸುವ ದೃಷ್ಟಿಗಳು ಈಗ ಕಾಣತೊಡಗಿವೆ. ಆದ್ದರಿಂದ ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದರು.
    ಎನ್‌ಎಸ್‌ಎಸ್ ಘಟಕದ ಸಂಚಾಲಕ ಡಾ. ಪ್ರಕಾಶ್ ಮರ‌್ಗನಳ್ಳಿ ಮಾತನಾಡಿ, ರಾಜಕೀಯ ಸ್ವಾತಂತ್ರೃಕ್ಕಿಂತ ಸಾಮಾಜಿಕ ಸ್ವಾತಂತ್ರೃ ನಮಗೆ ಮುಖ್ಯ ಎಂದುಕೊಂಡವರು ಅಂಬೇಡ್ಕರ್ ಎಂದು ತಿಳಿಸಿದರು. ಪ್ರಾಚಾರ್ಯ ಸೈಯದ್ ಸನಾವುಲ್ಲ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts