More

    ದುಶ್ಚಟಗಳಿಂದ ದೂರವಿರಬೇಕು

    ಚಿತ್ರದುರ್ಗ:ದುಶ್ಚಟಗಳಿಂದ ದೂರವಿದ್ದು,ಬದುಕಿನಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಂಡರೆ ಸಾತ್ವಿಕರು,ಸಜ್ಜನರಾಗಬಹುದೆಂದು ಶ್ರೀ ಕ್ಷೇ ತ್ರ ಧರ್ಮ ಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ ಹೇಳಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋ ಜನೆ ಬಿ.ಸಿ. ಟ್ರಸ್ಟ್ ಚಿತ್ರದುರ್ಗ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ವಾಸವಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಜನಜಾಗೃತಿ ವೇದಿಕೆಯ ಮೂಲಕ ವ್ಯಸನಗಳಿಂದ ಮುಕ್ತವಾಗಿರುವಂತೆ ಸಮಾಜಕ್ಕೆ ಸಂದೇಶ ನೀಡುತ್ತಿದ್ದಾರೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ವಾಸವಿ ವಿ ದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ,ತಂಬಾಕು ನಿಯಂತ್ರಣ ಮಂಡಳಿ ಸದಸ್ಯ ಶ್ರೀಧರ್,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಂ,ಉಪಾಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಿನೇಶ್ ಪೂಜಾರಿ,ಬಿ.ಅಶೋಕ್,ಕೆ.ಬಿ.ಸುಧಾ,ಸಂದೀಪ್ ಹಾಗೂ ವೇದಿಕೆ ಸದಸ್ಯರಾದ ರೂಪಾಜನಾರ್ದನ್,ಮಹಮದ್ ನೂರುಲ್ಲಾ,ಕಿರಣ್‌ಶಂಕರ್,ಸಂಸ್ಥೆ ಸಹ ಕಾರ‌್ಯದರ್ಶಿ ಗಿರೀಶ್ ಇದ್ದರು. ಸ್ವ-ಸಹಾಯ ಸಂಘ ಗಳ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ರಕ್ಷ್ಷಾ ಕಾರ್ಡ್‌ಗಳನ್ನು ವಿತರಿಸಲಾಯಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts