More

    ಮುಕುಂದ್ ಎಂಜಿಎಂ ರಿಯಾಲ್ಟಿ ಅಶೋಕಾ ಬಿಸಿನೆಸ್ ಸೆಂಟರ್‌ಗೆ ಭೂಮಿಪೂಜೆ

    ಮಂಗಳೂರು: ಮಂಗಳೂರಿಗೆ ಮೊದಲ ಬಾರಿಗೆ ವರ್ಕ್ ಸ್ಪೇಸ್ ಎನ್ನುವ ಕಾನ್ಸೆಪ್ಟ್ ಮೊದಲ ಬಾರಿಗೆ ತಂದು ವರ್ಟೆಕ್ಸ್ ಮತ್ತು ಅಜಂತಾ ಬಿಸ್ ನೆಸ್ ಸೆಂಟರ್ ನಿರ್ಮಾಣ ಮಾಡಿ ಯಶಸ್ವಿಯಾಗಿ ವಿಶೇಷ ಪ್ರಶಸ್ತಿಗೆ ಭಾಜನವಾಗಿದ್ದ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ತನ್ನ ಪ್ರಾಜೆಕ್ಟ್‌ನ್ನು ವಿಸ್ತರಿಸಿಕೊಂಡಿದೆ. ಮಂಗಳೂರಿನ ಬಿಜೈ ಕಾಪಿಕಾಡ್ ರಸ್ತೆಯಲ್ಲಿ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಅಶೋಕಾ ಬಿಸಿನೆಸ್ ಸೆಂಟರ್‌ನ ಭೂಮಿಪೂಜೆ ಹಾಗೂ ಬ್ರೋಶರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು.

    ನಾಯಕ್ ಪೈ ಆ್ಯಂಡ್ ಎಸೋಸಿಯೇಟ್ಸ್ ನ ಚೀಫ್ ಅರ್ಕಿಟೆಕ್ಟ್ ಹಾಗೂ ಇಂಜಿನಿಯರ್ ಸುರೇಶ್ ಪೈ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಮುಂಚೂನಿಯತ್ತ ಸಾಗುತ್ತಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಎಲ್ಲ ಯೋಜನೆಗಳು ಬಹಳಷ್ಟು ಉತ್ತಮವಾಗಿದ್ದು, ಈ ಹೊಸ ಯೋಜನೆಯಲ್ಲಿ ಇಲ್ಲಿನ ಐಟಿ ಉದ್ಯಮಕ್ಕೆ ಬಹಳಷ್ಟು ನೆರವಾಗಲಿದೆ. ಎಲ್ಲ ಅವರ ಯೋಜನೆಗಳು ಯಶಸ್ಸು ಪಡೆಯಲಿ ಎಂದರು.

    ಬ್ರೋಶರ್ ಬಿಡುಗಡೆ ಗೊಳಿಸಿದ ಮಂಗಳೂರು ಪಾಲಿಕೆ ಸದಸ್ಯ ಲ್ಯಾನ್ಸಿಲೋಟ್ ಪಿಂಟೋ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಮಂಗಳೂರಿನ ಚಿತ್ರಣ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಇಲ್ಲಿ ಹೊಸ ಕಂಪನಿ, ಉದ್ದಿಮೆಗಳು ಹುಟ್ಟಿಕೊಳ್ಳುತ್ತಿದೆ. ಅಶೋಕಾ ಬಿಸಿನೆಸ್ ಸೆಂಟರ್‌ನ ಮೂಲಕ ಸಾಕಷ್ಟು ಐಟಿ ಉದ್ಯಮಗಳು ಬರುವ ಜತೆಯಲ್ಲಿ ಇಲ್ಲಿನ ಯುವಜನತೆಗೆ ಸಾಕಷ್ಟು ಉದ್ಯೋಗ ಸೃಷ್ಟಿಮಾಡುವ ಕೆಲಸವಾಗುತ್ತಿದೆ ಎಂದರು.

    ಮುಕುಂದ್ ಎಂಜಿಎಂ ರಿಯಾಲ್ಟಿಯ ಮುಖ್ಯಸ್ಥರಾದ ಗುರುದತ್ತ ಶೆಣೈ ಸಹಿತ ಹಲವರು ಉಪಸ್ಥಿತರಿದ್ದರು. ಮುಕುಂದ್ ಎಂಜಿಎಂ ರಿಯಾಲ್ಟಿಯ ಮುಖ್ಯಸ್ಥರಾದ ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎಂಜಿಎಂ ರಿಯಾಲ್ಟಿಯ ಮುಖ್ಯಸ್ಥ ಮಂಗಲ್‌ದೀಪ್ ವಂದಿಸಿದರು.

    ——————

    ಅಶೋಕಾ ಬಿಸಿನೆಸ್ ಸೆಂಟರ್‌ನ ವಿಶೇಷತೆ

    ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಅಶೋಕ ಬಿಸಿನೆಸ್ ಸೆಂಟರ್ ಅವರ ಇತರ ಯೋಜನೆಗಳಿಗಿಂತ ಭಿನ್ನವಾಗಿದೆ. ಗಾರ್ಡನ್ ವರ್ಕ್‌ಸ್ಪೇಸ್ ಎಂದರೆ ಇದರ ಪ್ರತಿಯೊಂದು ಭಾಗದಲ್ಲೂ ಗಾರ್ಡನ್‌ಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇಲ್ಲಿ ಸಂಸ್ಥೆಗಳ ಕಾರ್ಯಾಚರಣೆಗೆ ಬೇಕಾದಂತಹ ಕಾನ್ಸರೆನ್ಸ್ ರೂಮ್ಸ್, ಮೀಟಿಂಗ್ ರೂಂ, ಬ್ಯಾಕ್ವೆಟ್ ಹಾಲ್, ಆಡಿಟೋರಿಯಂ, ಮನೋರಂಜನಾವಲಯ, ಗೇಮಿಂಗ್ ಝೋನ್, ಸೆಕ್ಯೂರ್ಡ್ ಆಕ್ಸೆಸ್ ಕಂಟ್ರೋಲ್, ಹೆಲ್ಪ್ ಡೆಸ್ಕ್ ವಿದ್ ವಿಸಿಟರ್ ಲಾಬಿ, ವಿಶಾಲವಾದ 3 ಲೆವೆಲ್‌ನ ಕಾರ್ ಪಾಕಿರ್ಂಗ್, ವೈ ಫೈವ್ ಇಂಟರ್ನೆಟ್, ಕೆಫೆ ಮುಂತಾದ ಸೌಲಭ್ಯಗಳನ್ನೊಳಗೊಳ್ಳಲಿದೆ. ವಿಶೇಷವಾಗಿ ಇಲ್ಲಿ ಬಳಕೆಯಾಗುವ ನೀರಿನ ಮರುಬಳಕೆ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.

    ——————

    ನಾಲ್ಕು ಮುಖ್ಯವಾದ ಉದ್ದೇಶವನ್ನು ಇಟ್ಟುಕೊಂಡು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಈ ಯೋಜನೆಯ ಶೇ.60ರಷ್ಟು ಖರೀದಿದಾರರು ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಉಳಿದಂತೆ ಈಗಾಗಲೇ ನಮ್ಮ ಎರಡು ಯೋಜನೆಗಳಾದ ವರ್ಟೆಕ್ಸ್ ವರ್ಕ್‌ಸ್ಪೇಸ್, ಅಂಜತಾ ಬಿಸಿನೆಸ್ ಸೆಂಟರ್‌ಗಳು ಬಹಳಷ್ಟು ಯಶಸ್ಸನ್ನು ಪಡೆದುಕೊಂಡ ಬಳಿಕ ಈಗ ಇದೇ ಮಾದರಿಯಲ್ಲಿ ಗಾರ್ಡನ್ ವರ್ಕ್ ಸ್ಪೇಸ್ ಕಲ್ಪನೆಯಲ್ಲಿ ಅಶೋಕ ಬಿಸಿನೆಸ್ ಸೆಂಟರ್ ನಿರ್ಮಾಣವಾಗುತ್ತದೆ.

    ಗುರುದತ್ತ ಶೆಣೈ,

    ಮುಕುಂದ್ ಎಂಜಿಎಂ ರಿಯಾಲ್ಟಿಯ ಮುಖ್ಯಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts