More

    ಮೇ 4ರಂದು ಮಿಲಾಗ್ರಿಸ್​ ಕಾಲೇಜಿನಲ್ಲಿ ಉದ್ಯೋಗ ಮೇಳ

    ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್​ ಕಾಲೇಜು ಮತ್ತು ವಿಜಮ್​ ಸಂಸ್ಥೆಗಳ ನೆಟ್​ ವರ್ಕ್​ ಸಹಯೋಗದೊಂದಿಗೆ ಮೇ 4ರಂದು ಬೆಳಗ್ಗೆ 9 ರಿಂದ ಸಾಯಂಕಾಲ 4.30ರತನಕ ಮಿಲಾಗ್ರಿಸ್​ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ. ವಿನ್ಸೆಂಟ್​ ಆಳ್ವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಉದ್ಯೋಗ ಮೇಳದಲ್ಲಿ ಮಿಲಾಗ್ರಿಸ್​ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ನೆರೆಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಭಾಗವಹಿಸಬಹುದು. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು, ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ಪದವೀಧರರು, ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೂ ಅವಕಾಶವಿದೆ. ಜೊತೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಥವಾ ಅನುತ್ತೀರ್ಣ, ಐ ಟಿ ಐ, ಡಿಪ್ಲೊಮ ಅಭ್ಯರ್ಥಿಗಳಿಗೆ ವಿಫುಲ ಅವಕಾಶವನ್ನು ಒದಗಿಸಲಾಗುತ್ತಿದೆ. 625 ಅಭ್ಯರ್ಥಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದು, 1000ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

    500 ಕ್ಕೂ ಹೆಚ್ಚು ಉದ್ಯೋಗಾವಕಾಶ
    ಆಟೋಮೊಬೈಲ್​, ಭಾರೀ ಸಲಕರಣೆಗಳ ತಯಾರಿಕೆ, ಜವಳಿ, ಮೊಬೈಲ್​ ವಿತರಣೆ, ಡೇಟಾ ಅನಾಲಿಟಿಕ್ಸ್​, ಗೃಹೋಪಯೋಗಿ ಉಪಕರಣಗಳು, ಮಾರಾಟ, ವ್ಯಾಪಾರೋದ್ಯಮ, ವ್ಯವಹಾರ ಅಭಿವೃದ್ಧಿ, ಹೋಟೆಲ್​ ನಿರ್ವಹಣೆ, ಪತ್ರಿಕೋದ್ಯಮ, ಮಾಧ್ಯಮ ಮತ್ತು ಬೋಧನೆ ವಿಭಾಗದಲ್ಲಿ 500 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ ಎಂದರು.

    ಉಪಪ್ರಾಂಶುಪಾಲೆ ಪ್ರೊ. ಸೋಫಿಯಾ ಡಯಾಸ್​, ಐಕ್ಯೂಸಿ ಸಂಯೋಜಕ ಜಯರಾಮ ಶೆಟ್ಟಿಗಾರ್​, ಪಿಆರ್​ಒ ರವಿನಂದನ್​ ಭಟ್​ , ಕಾರ್ತಿಕ್​ ನಾಯಕ್​ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts