More

    ಪ್ರತಿ ಮನೆಗೂ ವಿದ್ಯುತ್, ನೀರು ಸೌಲಭ್ಯ

    ತೀರ್ಥಹಳ್ಳಿ: ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನ ಕಳೆದಿದ್ದರೂ ವಿದ್ಯುತ್ ಸೇರಿ ಜನರ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

    9 ಕೋಟಿ ರೂ. ಅನುದಾನದಲ್ಲಿ ಮಂಡಗದ್ದೆಯಲ್ಲಿ ನಿರ್ಮಾಣವಾಗಲಿರುವ 110/10 ಕೆವಿ ಪವರ್ ಸ್ಟೇಷನ್ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ವ್ಯಕ್ತಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ಮನೆ ಮತ್ತು ಶೌಚಗೃಹ ವ್ಯವಸ್ಥೆಯನ್ನು ಕಲ್ಪಿಸಲು ಬದ್ಧವಾಗಿದೆ ಎಂದರು.
    ತಾಲೂಕಿನಲ್ಲಿ ಇದ್ದ ಒಂದೇ ಪವರ್ ಸ್ಟೇಷನ್‌ನಿಂದ ಇಡೀ ತಾಲೂಕಿಗೆ ವಿದ್ಯುತ್ ಒದಗಿಸಲಾಗುತ್ತಿತ್ತು. ಇದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಪಂಪ್ ಸೆಟ್, ಗೃಹಬಳಕೆಗೂ ವಿದ್ಯುತ್ ಕೊರತೆ ಆಗುತ್ತಿತ್ತು. ನಂತರದಲ್ಲಿ ಕಮ್ಮರಡಿ ಮತ್ತು ಕೋಣಂದೂರಿನಲ್ಲಿ ಎರಡು ಸ್ಟೇಷನ್ ಆರಂಭವಾದ ನಂತರ ಒಂದಷ್ಟು ಸಮಸ್ಯೆ ಬಗೆಹರಿದಿತ್ತು ಎಂದು ಹೇಳಿದರು.
    ಮಂಡಗದ್ದೆ ಹೋಬಳಿಯ ಸಮಸ್ಯೆಯನ್ನು ಗಮನಿಸಿ ಈಚೆಗೆ ಬೆಜ್ಜವಳ್ಳಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ವಿತರಣಾ ಕೇಂದ್ರ ಆರಂಭವಾಗಿದೆ. ಆದರೆ ಈ ಹೋಬಳಿಯ ಶಿವಮೊಗ್ಗ ತಾಲೂಕಿನ ಗಡಿಭಾಗದವರೆಗೂ ಅಗತ್ಯ ವಿದ್ಯುತ್ ಒದಗಿಸುವ ಸಲುವಾಗಿ 9 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ನಾಲ್ಕನೇ ಪವರ್ ಸ್ಟೇಷನ್ ಮಂಜೂರು ಮಾಡಿಸಿದ್ದೇನೆ ಎಂದು ತಿಳಿಸಿದರು.
    ಮಂಡಗದ್ದೆ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಸುನಿಲ್ ಶೆಟ್ಟಿ, ತೂದೂರು ಗ್ರಾಪಂ ಸದಸ್ಯ ಮಧುರಾಜ್ ಹೆಗ್ಡೆ, ಬೇಗುವಳ್ಳಿ ಸತೀಶ್, ಕವಿರಾಜ್, ಮೆಸ್ಕಾಂ ಅಧಿಕಾರಿಗಳಾದ ಸುರೇಶ್, ಕುಮಾರಸ್ವಾಮಿ, ಪ್ರಶಾಂತ್, ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts