More

    ಪರ್ತಾಪುರ ಸೇರಿ ಮೂರು ಗ್ರಾಮ ಕಲ್ಯಾಣ ವ್ಯಾಪ್ತಿಗೆ

    ಬಸವಕಲ್ಯಾಣ: ನಗರ ಸಮೀಪದ ಪರ್ತಾಪುರ, ನಾರಾಯಣಪುರ ಹಾಗೂ ಸಸ್ತಾಪುರ ಗ್ರಾಮಗಳನ್ನು ಬಸವಕಲ್ಯಾಣ ನಗರಸಭೆ ವ್ಯಾಪ್ತಿಗೆ ಸೇರಿಸುವುದು ನನ್ನ ಕನಸಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಶರಣು ಸಲಗರ ಭರವಸೆ ನೀಡಿದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಪರ್ತಾಪುರ ಗ್ರಾಮದಲ್ಲಿ ಶನಿವಾರ ೨.೮೬ ಕೋಟಿ ರೂ. ವೆಚ್ಚದ ಕುಡಿವ ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ನಳ ಸಂಪರ್ಕ ಜೋಡಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಮೂರು ಹಳ್ಳಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿದರೆ ಸ್ಥಳೀಯರಿಗೆ ಬಹಳ ಅನುಕೂಲವಾಗಲಿದೆ. ಹೀಗಾಗಿ ಈ ಭಾಗದ ಜನರು ಹೊಲಗಳನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳಬೇಕು ಎಂದರು.

    ಕಲ್ಯಾಣ ಶಾಸಕ ಎಂದರೆ ವಿಶಿಷ್ಟ ಗೌರವ, ವಿಶೇಷ ಸ್ಥಾನ ಇದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ನಿಲ್ಲದ ಹಾಗೂ ರಾಜಕೀಯ ಅನುಭವ ಇರದ ನನಗೆ ಎರಡು ಬಾರಿ ಇಲ್ಲಿನ ಜನ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ನನ್ನ ಮೇಲೆ ಇಟ್ಟಿರುವ ನಂಬಿಕೆ ಬದುಕಿರುವವರೆಗೆ ಹುಸಿಗೊಳಿಸಲು ಬಿಡಲ್ಲ ಎಂದು ವಾಗ್ದಾನ ನೀಡಿದರು.

    ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಂಥವರು, ೧೨ನೇ ಶತಮಾನದಲ್ಲಿ ಬಸವಣ್ಣನವರಿಗೂ ಬಿಟ್ಟಿಲ್ಲ. ನನ್ನಂಥವರಿಗೆ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದ ಸಲಗರ, ಅಪಪ್ರಚಾರ ಏನೇ ಮಾಡಲಿ. ನನ್ನ ಮೇಲೆ ನಂಬಿಕೆ, ವಿಶ್ವಾಟ ಇಟ್ಟ ಜನರಿಗೆ ಕೈಬಿಡಲ್ಲ ಎಂದು ಅಭಯ ನೀಡಿದರು.

    ಕಾಮಗಾರಿಯನ್ನು ಗುಣಮಟ್ಟದಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಗುಣಮಟ್ಟದ ವಿಷಯದಲ್ಲಿ ಯಾವುದೇ ಹೊಂದಾಣಿಕೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ್, ಪ್ರಮುಖರಾದ ಅಶೋಕ ವಕಾರೆ, ಅರವಿಂದ ಮುತ್ತೆ, ಸುಭಾಷ ರಗಟೆ, ಮಲಪ್ಪ ಮಹಾಜನ್, ನಾಮದೇವ ಪೆದ್ದೆ, ಖುರ್ಷಿದ್ ಮಿಯ್ಯಾ, ಖಂಡೇರಾಯ ಕುಲಕರ್ಣಿ, ನಂದು ಮಹಾರಾಜ್, ವಿದ್ಯಾಸಾಗರ ಉಡಚಾಣ, ಗುರುನಾಥ ಮೂಲಗೆ, ಸುಭಾಷ ಕುದರೆ, ಪ್ರದೀಪ ಗಡವಂತೆ, ಶಿವಕುಮಾರ ಸ್ವಾಮಿ, ಗಣೇಶ ಕುದರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts