More

    ಫಾದರ್ ಮುಲ್ಲರ್ ತಲಸ್ಸೇಮಿಯಾ ಸೆಂಟರ್ ಉದ್ಘಾಟನೆ



    ಮಂಗಳೂರು: ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವತಿಯಿಂದ ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಹಯೋಗದಲ್ಲಿ ಫಾದರ್ ಮುಲ್ಲರ್ ತಲಸ್ಸೇಮಿಯಾ ಸೆಂಟರ್‌ನ ಉದ್ಘಾಟನೆ ಗುರುವಾರ ನೆರವೇರಿತು. ಇದೇ ಸಂದರ್ಭ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥರಪಿ ಆಶ್ರಯಲ್ಲಿ ಎಂಬೋಲ್ಡನ್-2024 ವಿಶ್ವ ಭಿನ್ನ ಸಾಮರ್ಥ್ಯ ದಿನಾಚರಣೆ ನಡೆಯಿತು.
    ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಮಣಿಪಾಲ ಕೆಎಂಸಿಯ ಮೆಡಿಕಲ್ ಜೆನೆಟಿಕ್ ವಿಭಾಗದ
    ಸಹಾಯಕ ಪ್ರಾಧ್ಯಾಪಕ ಡಾ.ವಿವೇಕಾನಂದ ಭಟ್, ಅಮೆಝಾನ್‌ನ ಎಸ್‌ಪಿಎಸ್ ಅಸೋಸಿಯೇಟ್ ಚೈತ್ರಾ ಎಸ್. ಮುಖ್ಯ
    ಅತಿಥಿಗಳಾಗಿ ಭಾಗವಹಿಸಿದ್ದರು. ಎಫ್‌ಎಂಸಿಐ ನಿರ್ದೇಶಕ ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
    ಸಂಸ್ಥೆಯ ಆಡಳಿತಾಧಿಕಾರಿಗಳಾದ ಫಾ.ಅಜಿತ್ ಬಿ.ಮಿನೇಜಸ್, ಫಾ. ಜಾರ್ಜ್ ಜೀವನ್ ಸಿಕ್ವೇರ, ಡೀನ್ ಡಾ. ಂಟನಿ ಸಿಲ್ವನ್ ಡಿಸೋಜ, ಡಾ. ಶ್ರೀಧರ್, ಇಮ್ಯುನೊ ಹೆಮೊಟಲಜಿ ವಿಭಾಗದ ಮುಖ್ಯಸ್ಥ ಡಾ.ಕಿರಣ್ ಪೈಲೂರ್ ಉಪಸ್ಥಿತರಿದ್ದರು.
    ಫಾ. ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಚೆರಿಷ್ಮಾ ಡಿಸಿಲ್ವ ಸ್ವಾಗತಿಸಿದರು. ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್ ಡಾ.ಚಂದನ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಅನುಪಮಾ ಕೆ. ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts