More

    ಜಗಳ ಮುಗಿದಿದ್ದರೆ ಒಟ್ಟಾಗಿ ಹೋರಾಡೋಣವೇ? ಪ್ರಶ್ನೆ ಕೇಳಿದ ಅರವಿಂದ್ ಕೇಜ್ರಿವಾಲ್

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಕ್ಸಿಜನ್ ವಿವಾದ ಭುಗಿಲೆದ್ದಿದೆ. ಹೀಗಿರುವಾಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ಟ್ವೀಟ್​ ಮಾಡಿ ಗಮನ ಸೆಳೆದಿದ್ದಾರೆ.

    ದೆಹಲಿಯಲ್ಲಿ ಎಷ್ಟು ಆಕ್ಸಿಜನ್ ಅಗತ್ಯವಿತ್ತೋ ಅದಕ್ಕಿಂತ 4 ಪಟ್ಟು ಹೆಚ್ಚು ಅಗತ್ಯ ತೋರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ವಿಚಾರವನ್ನಿಟ್ಟುಕೊಂಡು ವಿರೋಧ ಪಕ್ಷಗಳು ಈಗಾಗಲೇ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.

    ಆದರೆ ಅದಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರವಿಂದ್ ಕೇಜ್ರಿವಾಲ್, “ಆಮ್ಲಜನಕದ ಬಗ್ಗೆ ನಿಮ್ಮ ಹೋರಾಟಗಳೆಲ್ಲ ಮುಗಿದಿದ್ದರೆ ಸ್ವಲ್ಪ ಕೆಲಸ ಮಾಡೋಣವೇ? ಮೂರನೆಯ ಅಲೆಯಲ್ಲಿ ಯಾರಿಗೂ ಆಮ್ಲಜನಕದ ಕೊರತೆ ಬಾರದಂತೆ ವ್ಯವಸ್ಥೆ ನಿರ್ಮಿಸೋಣ. ಎರಡನೇ ಅಲೆಯಲ್ಲಿ ಜನರು ಆಮ್ಲಜನಕ ಕೊರತೆ ಅನುಭವಿಸಿದ್ದರು. ಈಗ ಮೂರನೇ ಅಲೆಯಲ್ಲೂ ಹಾಗೆ ಆಗಬಾರದು. ನಾವು ನಮ್ಮ ನಡುವೆಯೇ ಹೋರಾಟ ಮಾಡಿಕೊಂಡರೆ ಕರೊನಾ ಗೆದ್ದುಬಿಡುತ್ತದೆ. ನಾವು ಒಟ್ಟಾಗಿ ಹೋರಾಡಿದರೆ ಮಾತ್ರ ದೇಶ ಗೆಲ್ಲುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ನಕಲಿ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದಿದ್ದ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ತುತ್ತು

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts