More

    ಅಪಘಾತದಲ್ಲಿ ಮೃತನಾದವನ ದೇಹ ವೈದ್ಯಕಿಯ ಸಂಸ್ಥೆಗೆ ದಾನ

    ಬೇತಮಂಗಲ : ಚಿಕಿತ್ಸೆ ಲಿಸದೆ ಮೃತಪಟ್ಟ ವ್ಯಕ್ತಿಯ ದೇಹವನ್ನು ಬೆಂಗಳೂರಿನ ವೈದ್ಯಕಿಯ ಸಂಸ್ಥೆಗೆ ದಾನ ಮಾಡುವ ಮೂಲಕ ಕುಟುಂಬದವರು ಇತರರಿಗೆ ಮಾದರಿಯಾಗಿದ್ದಾರೆ.
    ಕೆಜಿಎ್​ ತಾಲೂಕಿನ ಬಂಗಾರು ತಿರುಪತಿ ದೇವಾಲಯ ಸಮೀಪದ ವೆಂಕಟಾಪುರದ ವೆಂಕಟೇಶಪ್ಪ (52) ಮೇ 3ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದರು. ಕೋಲಾರ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆ ನೀಡಿದ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೆ ಮೇ 5ರಂದು ಕೊನೆಯುಸಿರೆಳೆದರು. ಮೃತರಿಗೆ ಪತ್ನಿ , ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ. ಕುಟುಂಬ ನಿರ್ವಹಣೆಗೆ ಟೇಲರಿಂಗ್​ ಮಾಡಿಕೊಂಡಿದ್ದ ವೆಂಕಟೇಶಪ್ಪ ನಿಧನದಿಂದ ನೋವಿನಲ್ಲಿದ್ದರೂ ದೇಹದಾನ ಮಾಡುವ ಮೂಲಕ ಕುಟುಂಬ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.


    ಅಪಘಾತದಲ್ಲಿ ತಲೆ, ಮಿದುಳಿಗೆ ಮಾತ್ರ ಗಾಯವಾಗಿತ್ತು. ದೇಹದ ಉಳಿದ ಭಾಗಗಳು ಚೆನ್ನಾಗಿವೆ ಎಂದು ವೈದ್ಯರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಾಯಿ ಜತೆ ಚರ್ಚೆ ನಡೆಸಿದ ಮಕ್ಕಳು, ಪೊಲೀಸ್​ ಇಲಾಖೆಯಲ್ಲಿರುವ ಮಾವ ಮತ್ತು ಇತರ ಸಂಬಂಧಿಕರ ಸಲಹೆ ಮೇರೆಗೆ ಮಿದುಳು ಹೊರತುಪಡಿಸಿ ಇಡೀ ದೇಹದ ಒಟ್ಟು 12 ಅಂಗಾಂಗಗಳನ್ನು ದಾನ ಮಾಡುವುದಾಗಿ ಆಸ್ಪತ್ರೆ ಮುಖ್ಯಸ್ಥರಿಗೆ ತಿಳಿಸಿದ್ದಾರೆ. ನಂತರ ಆಸ್ಪತ್ರೆ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಕುಟುಂಬದ ಸದಸ್ಯರ ನಿರ್ಧಾರಕ್ಕೆ ಶ್ಲಾಘಿಸಿ, ಪ್ರಶಂಸೆ ಪತ್ರ ನೀಡಿ ದೇಹವನ್ನು ಪಡೆದುಕೊಂಡಿದ್ದಾರೆ.


    ಶಾಸಕಿ ರೂಪಕಲಾ ಭೇಟಿ, ಸಾಂತ್ವನ: ದೇಹದಾನ ಮಾಡಿರುವ ಬಗ್ಗೆ ಮಾಹಿತಿ ಪಡೆದ ಶಾಸಕಿ ಎಂ.ರೂಪಕಲಾ ಮಂಗಳವಾರ ಮೃತರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬದ ಜೀವನಕ್ಕೆ ದಾರಿ ದೀಪವಾಗಿದ್ದ ಮುಖ್ಯಸ್ಥರನ್ನು ಕಳೆದುಕೊಂಡು ಸಾಕಷ್ಟು ನೋವಿನಲ್ಲಿದ್ದರೂ ಮಾನವೀಯ ದೃಷ್ಟಿಯಿಂದ ದೇಹ ದಾನ ಮಾಡಿರುವ ಕುಟುಂಬದ ನಿರ್ಧಾರ ಎಲ್ಲರಿಗೂ ಮಾದರಿಯಾಗಿದೆ. ನಾನೂ ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆ. ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts