More

    ವಡೆಯರ್-ಪುರಾಣಿಕ್ ಜೋಡಿಯ ಚೊಚ್ಚಲ ಸಾಹಸ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿ

    ಬೆಂಗಳೂರು: ನಿರ್ದೇಶಕ ಪವನ್ ವಡೆಯರ್ ಅವರ ಚೊಚ್ಚಲ ನಿರ್ಮಾಣ ಹಾಗೂ ನಿರ್ದೇಶಕ ಸಾಗರ್ ಪುರಾಣಿಕ್ ಅವರ ಪ್ರಪ್ರಥಮ ನಿರ್ದೇಶನದ ಸಿನಿಮಾ ‘ಡೊಳ್ಳು’ ಬಿಡುಗಡೆಗೆ ಮೊದಲೇ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಮತ್ತೆರಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

    ಡೊಳ್ಳು ಈಗಾಗಲೇ ಗೋವಾದಲ್ಲಿ ನಡೆದ 52ನೇ ಭಾರತ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದ ಪನೊರಮಾ ವಿಭಾಗದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿತ್ತು. ಅಲ್ಲದೆ ಇನೊವೇಟಿವ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪಡೆದಿತ್ತು.

    ಅದಕ್ಕೂ ಮೊದಲು ಢಾಕಾ ಸಿನಿಮಾ ಉತ್ಸವದಲ್ಲೂ ಈ ಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಜೊತೆಗೆ ಬೋಸ್ಟನ್ ಚಿತ್ರೋತ್ಸವದಲ್ಲಿ 2 ಪ್ರಶಸ್ತಿ, ಕಲೈಡೊ ಚಿತ್ರೋತ್ಸವದಲ್ಲಿ 1 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅದಲ್ಲದೆ ನೇಪಾಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜಾಗತಿಕ ಸ್ಪರ್ಧೆ ವಿಭಾಗಕ್ಕೂ ಆಯ್ಕೆ ಆಗಿತ್ತು.

    ಫೆ. 12 ಮತ್ತು 14ರಂದು ಕೇಂದ್ರ ಸರ್ಕಾರ ಅಂದರೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಕಾನ್​​ಫೆಡರೇಷನ್​ ಆಫ್ ಇಂಡಸ್ಟ್ರಿಯು ಈ ಚಿತ್ರವನ್ನು 72ನೇ ಬರ್ಲಿನೇಲ್ಸ್​ ಯುರೋಪಿಯನ್​ ಫಿಲ್ಮ್​ ಮಾರ್ಕೆಟ್​ನಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿತ್ತು. ಹಾಗೆ ಆಯ್ಕೆಯಾಗಿದ್ದ 9 ಸಿನಿಮಾಗಳ ಪೈಕಿ ಡೊಳ್ಳು ಕೂಡ ಒಂದು.

    ಇದೀಗ ರಾಜಸ್ಥಾನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಡೊಳ್ಳು ಎರಡು ಪ್ರಶಸ್ತಿಗಳನ್ನು ಗಳಿಸಿದ ಖುಷಿಯನ್ನು ನಿರ್ಮಾಪಕ ಪವನ್ ವಡೆಯರ್ ಹಂಚಿಕೊಂಡಿದ್ದಾರೆ. ಅಲ್ಲಿ ಡೊಳ್ಳು ಸ್ಪೆಷಲ್ ಜ್ಯೂರಿ ಅವಾರ್ಡ್ ಜತೆಗೆ, ಶ್ರೇಷ್ಠ ಚೊಚ್ಚಲ ನಿರ್ದೇಶಕ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.

    ವಡೆಯರ್-ಪುರಾಣಿಕ್ ಜೋಡಿಯ ಚೊಚ್ಚಲ ಸಾಹಸ 'ಡೊಳ್ಳು' ಚಿತ್ರಕ್ಕೆ ಮತ್ತೆರಡು ಪ್ರಶಸ್ತಿ

    ಈ ಚಿತ್ರವು ನಿರ್ದೇಶಕ ಪವನ್ ವಡೆಯರ್ ಅವರ ವಡೆಯರ್ ಮೂವೀಸ್ ಸಂಸ್ಥೆಯ ಚೊಚ್ಚಲ ನಿರ್ಮಾಣವಾಗಿದ್ದು, ಹೊಸಬರಾದ ಕಾರ್ತಿಕ್ ಮಹೇಶ್ ಮತ್ತು ನಿಧಿ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಿನ ಪೀಳಿಗೆಯ ಮಕ್ಕಳಿಗೆ ನಮ್ಮ ನಾಡಿನ ಜನಪದ ಕಲೆಯೊಂದನ್ನು ಪರಿಚಯಿಸುವುದರ ಸಲುವಾಗಿ ‘ಡೊಳ್ಳು’ ಸಿನಿಮಾ ಮಾಡಲಾಗಿದೆ. ಕೇವಲ ಮನರಂಜನೆ ಅಲ್ಲದೇ ಈ ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶ ಕೂಡ ಇದೆ. ಜನಪದ ಕಲೆಯಾದ ‘ಡೊಳ್ಳು’ ಸದ್ಯ ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಇದೇ ಕಲೆಯನ್ನು ನಂಬಿಕೊಂಡು ಬದುಕುತ್ತಿರುವ ಕಲಾವಿದರ ಕಷ್ಟಗಳ ಪ್ರತಿಬಿಂಬವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಕಾಳಜಿಯೇ ಈ ಮಿನಿಸ್ಟರ್​ನ ಆಸ್ತಿ; ವಿಜಯವಾಣಿ ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts