More

    ಶವ ಸಾಗಾಟದ ಪ್ರಹಸನ ಸುಸ್ತೋ ಸುಸ್ತು..; ಸಿನಿಮಾ ವಿಮರ್ಶೆ

    ಚಿತ್ರ: ಬಾಡಿ ಗಾಡ್

    ನಿರ್ದೇಶಕ: ಪ್ರಭು ಶ್ರೀನಿವಾಸ್

    ನಿರ್ಮಾಣ: ಆಲ್ಪಾ ಆಂಡ್ ಒಮೇಗಾ ಪ್ರೊಡಕ್ಷನ್ಸ್

    ತಾರಾಗಣ: ಗುರುಪ್ರಸಾದ್, ಮನೋಜ್, ದೀಪಿಕಾ ಮುಂತಾದವರು

    | ಮಂಜು ಕೊಟಗುಣಸಿ

    ಪುರುಷ ನರ್ಸ್ ಒಬ್ಬ ‘ಶವ’ದಿಂದ ಹೇಗೆ ತನ್ನ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನೆ ಎಂಬುದೇ ‘ಬಾಡಿ ಗಾಡ್’ ಕಥಾಹಂದರ. ಮಧ್ಯಮವರ್ಗದ ಯುವಕನ ಸಂಕಟ, ಬೇಕು-ಬೇಡಿಕೆಗಳೇ ಇಲ್ಲಿ ಹೈಲೈಟ್ ಆದರೂ, ಅದನ್ನು ಹೇಳಿರುವ ರೀತಿ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದೇ ವಿಷಾದ. ಹಾಗಾಗಿ ರೋಚಕತೆಯ ಬದಲು ನೀರಸವಾಗಿಯೇ ‘ಬಾಡಿ ಗಾಡ್’ ಸಿನಿಮಾ ಸಾಗುತ್ತದೆ.

    ಬಾಡಿಗೆಗಿದ್ದ ಮನೆಯನ್ನು ಖರೀದಿಸಬೇಕೆಂದು ತಾಯಿ, ಪತಿಗೆ ಆಟೋ ಕೊಡಿಸದಿದ್ದರೆ ಗಂಡನ ಮನೆಗೆ ಹೋಗಲ್ಲ ಎಂದು ತಂಗಿ … ಈ ಸಮಸ್ಯೆಗಳ ನಡುವೆ ಸಿಲುಕುವ ಕಥಾನಾಯಕ, ಕೆಲ ಎಡವಟ್ಟು ಮಾಡಿಕೊಂಡು ಕೈಸುಟ್ಟುಕೊಳ್ಳುತ್ತಾನೆ. ಕೊನೆಗೆ ಅದರಿಂದ ಆಚೆ ಬರಲು ‘ಬಾಡಿ’ಯ ‘ಗಾರ್ಡ್’ ಆಗಲು ಒಪ್ಪಿಕೊಳ್ಳುತ್ತಾನೆ. ಅಲ್ಲಿಂದ ಶುರು ಕಣ್ಣಾಮುಚ್ಚಾಲೆ ಆಟ! ನಿರ್ದೇಶಕ ಪ್ರಭು ಶ್ರೀನಿವಾಸ್, ಒಳ್ಳೆಯ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ನಿಜ. ಆದರೆ, ಅದನ್ನು ಪ್ರೇಕ್ಷಕನ ತಟ್ಟೆಗೆ ಬಡಿಸುವಾಗ ಚೂರು ಹೆಚ್ಚೇ ಕೈ ನಡುಗಿಸಿದ್ದಾರೆ. ಆ ಒಂದು ಕಾರಣಕ್ಕೆ ಥ್ರಿಲ್ಲರ್ ಸಿನಿಮಾದಲ್ಲಿ ಎಲ್ಲಿಯೂ ಗಂಭೀರತೆ ಕಾಣಿಸದು. ಕೌತುಕ ಭಾವವೂ ನಿಮ್ಮನ್ನು ಕಟ್ಟಿಹಾಕದು.

    ನಟ-ನಿರ್ದೇಶಕ ಗುರುಪ್ರಸಾದ್ ಪಾರ್ಶ್ವವಾಯು ಪೀಡಿತನಾಗಿ ಸಂಭಾಷಣೆ ಮೂಲಕವೇ ಟಕ್ಕರ್ ಕೊಡುವ ಧಾಟಿ ಇಷ್ಟವಾಗುತ್ತದೆ. ನಾಯಕ-ನಾಯಕಿಯ ಪ್ರೇಮಾಂಕುರಕ್ಕೆ ಸ್ಪಷ್ಟತೆಯಿಲ್ಲ. ನಟನೆ ವಿಚಾರದಲ್ಲಿ ನಾಯಕ ಮನೋಜ್ ಅವರದ್ದು ಸಹಜ ಅಭಿನಯ. ನಾಯಕಿ ದೀಪಿಕಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಡುಗಳಲ್ಲಿಯೂ ಕೇಳುವ ಗುಣವಿಲ್ಲ.

    ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts