More

    ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸಲ್ ನೀಡದಿರಿ

    ಹರಪನಹಳ್ಳಿ: ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಏಕಬಳಕೆ ಹಾಗೂ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಸಿದಲ್ಲಿ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಎಚ್ಚರಿಸಿದರು.

    ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಸ್ತೆಬದಿಯ ಫಾಸ್ಟ್‌ಫುಡ್ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದರು. ಬೀದಿಬದಿ ವ್ಯಾಪಾರ ಮಾಡುವ ಎಗ್‌ರೈಸ್, ಗೋಬಿ, ಪಾನಿಪುರಿ ಮುಂತಾದ ವ್ಯಾಪಾರಸ್ಥರು ಪ್ಲಾಸ್ಟಿಕ್‌ನಲ್ಲಿ ಪಾರ್ಸಲ್ ಕೊಡಬಾರದು. ಇದರಿಂದ ಜನರ ಆರೋಗ್ಯ ಹದಗೆಡುವುದು ಖಚಿತ. ಆದ್ದರಿಂದ ಬಾಳೆ ಎಲೆ, ಪತ್ರವಳಿ, ಕಾಗದ ಚೀಲ ಈ ರೀತಿ ವಸ್ತುಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

    ಇದನ್ನೂ ಓದಿ:http://ಪ್ಲಾಸ್ಟಿಕ್ ಕವರ್‌ನಲ್ಲಿ ಪಾರ್ಸಲ್ ನೀಡದಿರಿ
    ಅಡುಗೆಯಲ್ಲಿ ಟೇಸ್ಟಿಂಗ್ ಪೌಡರ್ ಬಳುಸುವುದು ಸರಿಯಲ್ಲ. ಇದು ಕ್ಯಾನ್ಸರಕಾರಕವಾಗಿದೆ. ಎಗ್ ರೈಸ್ ಅಂಗಡಿಯವರು ರಸ್ತೆ ಬದಿ ಅಂಗಡಿ ಇಟ್ಟುಕೊಂಡು ಖಾರದ ಪುಡಿಯನ್ನು ಜೋರಾಗಿ ಪಾತ್ರೆಯಲ್ಲಿ ಎಸೆಯುತ್ತೀರಿ ಇದರಿಂದ ದಾರಿಯಲ್ಲಿ ಹೋಗುವವರ ಕಣ್ಣಿಗೆ ಖಾರದ ಪುಡಿ ತಾಗುತ್ತಿದೆ ಎಂಬ ದೂರುಗಳು ಬಂದಿವೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯುವುದಿಲ್ಲ, ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ.

    ನಾವು ಬದುಕಬೇಕು, ಇತರರನ್ನು ಬದುಕಿಸಬೇಕು, ಪ್ಲಾಸ್ಟಿಕ್ ಬಳಸಿದರೆ ಮೊದಲಿಗೆ ದಂಡ ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಿಸಿಎಂ ಇಲಾಖೆಯ ಅಧಿಕಾರಿ ಬಿ.ಎಚ್.ಚಂದ್ರಪ್ಪ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts