More

    25 ವರ್ಷಗಳ ಹಿಂದೆ ವಶಕ್ಕೆ ಪಡೆದ ಪಂಚೇನ್​ ಲಾಮಾ ಎಲ್ಲಿದ್ದಾರೆ? ಅಮೆರಿಕ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ ಚೀನಾ

    ನವದೆಹಲಿ: ಭಾರತವೂ ಸೇರಿ ಜಗತ್ತಿನ ವಿವಿಧೆಡೆಗಳಲ್ಲಿರುವ ಟಿಬೆಟಿಯನ್ನರು ಈಗಲೂ ತಮ್ಮದು ‘ಸ್ವತಂತ್ರ ಟಿಬೆಟ್​’ ಎಂದೇ ಘೋಷಿಸಿಕೊಳ್ಳುತ್ತಾರೆ. ‘ಪರಾಧೀನದ ಅಥವಾ ಗಡಿಪಾರಾದ ಸರ್ಕಾರ’ (Govt in Exile) ಎಂದೇ ಕರೆದುಕೊಳ್ಳುತ್ತಾರೆ.

    ಶತಮಾನಗಳವರೆಗೆ ಸ್ವತಂತ್ರವಾಗಿದ್ದ ಟಿಬೆಟ್​ ಈಗ ಚೀನಾದ ಭಾಗವಾಗಿದೆ. ಆರಂಭದಲ್ಲಿ ಟಿಬೆಟ್​ನ ಸ್ವಾಯತ್ತೆಯನ್ನು ಮನ್ನಿಸಿದ್ದ ಚೀನಾ, ಬಳಿಕ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತು. ಇದಕ್ಕಾಗಿಯೇ 25 ವರ್ಷಗಳ ಹಿಂದೆ 11ನೇ ಪಂಚೇನ್​ ಲಾಮಾನ ಅವತಾರವೆಂದು ಘೋಷಿಸಿದ್ದ ಆರು ವರ್ಷದ ಬಾಲಕನನ್ನು ವಶಕ್ಕೆ ಪಡೆಯಿತು. ಆ ಮೂಲಕ ಜಗತ್ತಿನ ಅತ್ಯಂತ ಕಿರಿಯ ರಾಜಕೀಯ ಕೈದಿ ಎಂಬ ಹಣೆಪಟ್ಟಿ ಪಂಚೇನ್​ ಲಾಮಾದ್ದಾಯಿತು.

    ಇದನ್ನೂ ಓದಿ; ಸಂಬಳ ಕಡಿತ ಮಾಡಲ್ಲ, ಬೋನಸ್ಸೂ ಕೊಡ್ತೀವಿ…! ಈ ಕಂಪನಿ ಉದ್ಯೋಗಿಗಳೇ ಧನ್ಯರು

    ಕರೊನಾ ಕಾರಣಕ್ಕಾಗಿ ಚೀನಾ ವಿರುದ್ಧ ನಿತ್ಯವೂ ಹರಿಹಾಯುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, 11ನೇ ಪಂಚೇನ್​ ಲಾಮಾ ಎಲ್ಲಿದ್ದಾರೆ? ಎಂದು ಚೀನಾವನ್ನು ಇತ್ತೀಚೆಗೆ ಪ್ರಶ್ನಿಸಿದ್ದರು. ಇದೀಗ ಅದಕ್ಕೆ ಉತ್ತರ ದೊರೆತಿದೆ.

    ಆಗ, ಆರು ವರ್ಷದವನಾಗಿದ್ದ ಬಾಲಕ ಗೇಧುನ್​ ಚೊಯ್ಕಿ ನೀಮಾ ಈಗ ಪದವೀಧರ ಹಾಗೂ ಸುಭದ್ರವಾದ ಉದ್ಯೋಗವನ್ನು ಹೊಂದಿದ್ದಾನೆ ಎಂದು ಚೀನಾ ಹೇಳಿದೆ. ನೀಮಾ ಆಗಲಿ, ಆತನ ಕುಟುಂಬವಾಗಲಿ ಸಾಮಾನ್ಯ ಬದುಕು ಸಾಗಿಸುವುದಕ್ಕೆ ಯಾವುದೇ ಅಡ್ಡಿಯಾಗುವುದನ್ನು ಇಷ್ಟಪಡುವುದಿಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್​ ಹೇಳಿದ್ದಾರೆ.

    ಆದರೆ ಆತನ ಭಾವಚಿತ್ರವನ್ನಾಗಲಿ, ಎಲ್ಲಿದ್ದಾನೆ ಎಂಬ ವಿವರವನ್ನು ಚೀನಾ ಬಿಡುಗಡೆ ಮಾಡಿಲ್ಲ. ಕಳೆದ ವರ್ಷ ಬಿಬಿಸಿ ವಾಹಿನಿ ಪ್ರಸಾರ ಮಾಡಿದ್ದ ಆತನ ಕಾಲ್ಪನಿಕ ಚಿತ್ರವೇ ಇಂದಿಗೂ ಹರಿದಾಡುತ್ತಿದೆ.

    ಇದನ್ನೂ ಓದಿ; ಅಂತರ ಜಿಲ್ಲಾ ಸಂಚಾರಕ್ಕೆ ಬೇಕಿಲ್ಲ ಪಾಸ್​; ಬಸ್​, ರೈಲು, ವಿಮಾನ ಪ್ರಯಾಣಕ್ಕೆ ಈ ನಿಯಮ ಪಾಲನೆ ಕಡ್ಡಾಯ

    ಟಿಬೇಟಿಯನ್​ ಧರ್ಮಗುರು ದಲೈ ಲಾಮಾ ಅವರಿಂದ 1995ರಲ್ಲಿ 11ನೇ ಪಂಚೇನ್​​ ಲಾಮಾ ಆಗಿ ಗುರುತಿಸಲ್ಪಟ್ಟಿದ್ದ ನೀಮಾ ಆಯ್ಕೆಯನ್ನು ತಿರಸ್ಕರಿಸಿದ್ದ ಚೀನಾ, ಗ್ಯಾನ್​ಸೇನ್​ ನೊರ್ಬು ಎಂಬುವರನ್ನು ಆ ಪದವಿಗೆ ಆಯ್ಕೆ ಮಾಡಿತ್ತು.

    ಪಂಚೇನ್​ ಲಾಮಾ ಬಗ್ಗೆ ಚೀನಾ ಮಾಹಿತಿ ನೀಡುತ್ತಿದ್ದಂತೆ, ಆತನನ್ನು ಬಿಡುಗಡೆ ಮಾಡಬೇಕು. ಹೇಗಿದ್ದಾನೆ ಎಂಬುದನ್ನು ಜಗತ್ತಿಗೆ ತಿಳಿಸಬೇಕೆಂದು ಅಮೆರಿಕ ಒತ್ತಾಯಿಸಿದೆ. ಇನ್ನೊಂದೆಡೆ, ಅಧಿಕಾರವಿಲ್ಲದಿದ್ದರೂ, ದಲೈ ಲಾಮಾ ಉತ್ತರಾಧಿಕಾರಿಯನ್ನು ನೇಮಿಸಲು ಚೀನಾ ಉತ್ಸುಕವಾಗಿದೆ ಎಂದು ಅಮೆರಿಕ ಆರೋಪಿಸಿದೆ.

    ಬೇಬಿ ಪೌಡರ್​ನಿಂದ ಕ್ಯಾನ್ಸರ್​ ವಿವಾದ; ಅಮೆರಿಕ, ಕೆನಡಾದಲ್ಲಿ ಮಾರಾಟ ನಿಲ್ಲಿಸಿದ ಜಾನ್​ಸನ್​ ಆ್ಯಂಡ್​ ಜಾನ್​ಸನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts