More

    ಶ್ರದ್ಧೆ-ನಿಷ್ಠೆಯಿಂದ ಕಾರ್ಯ ನಿರ್ವಹಣೆ

    ಕಾರಟಗಿ: ಮಹಿಳೆ ಎಂದರೆ ವರ್ಣಿಸಲು ಪದಗಳು ದೊರೆಯದ ದೊಡ್ಡ ಶಕ್ತಿ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಬಣ್ಣಿಸಿದರು.

    ಇದನ್ನೂ ಓದಿ: ಮತದಾರ ಸಾಕ್ಷರತಾ ತರಬೇತಿ ಕಾರ್ಯಾಗಾರ

    ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

    ಮಹಿಳೆ ಇಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶಕ್ತಿ, ಧೈರ್ಯ, ಪ್ರೀತಿ, ಮಮತೆ-ಮಮಕಾರ, ಕಾಳಜಿಗಳ ಪ್ರತಿರೂಪ ಸ್ತ್ರೀ. ಅವಳು ಅನೇಕ ಜವಾಬ್ದಾರಿಗಳನ್ನು ಅತ್ಯಂತ ನಿಷ್ಠೆ, ಶ್ರದ್ಧೆಯಿಂದ ನಿರ್ವಹಿಸುತ್ತಾಳೆ.

    ಮನುಷ್ಯ ಜೀವ ಜಾಲದ ಸೃಷ್ಟಿಕರ್ತೆ. ತನ್ನೊಳಗಿನ ತುಮುಲಗಳನ್ನು ಹೇಳಿಕೊಳ್ಳದೇ ಕುಟುಂಬದಿಂದ ಹಿಡಿದು ಸಮಾಜಕ್ಕೆ ಕೊಡುಗೆ ನೀಡುತ್ತಾಳೆ. ಮಹಿಳೆಯರನ್ನು ಸಮಾನವಾಗಿ ಗೌರವಿಸುವ ಮತ್ತು ಪ್ರೀತಿಸುವುದನ್ನು ಮಕ್ಕಳಿಗೆ ಕಲಿಸಬೇಕು ಎಂದರು.

    ಆಕೆಯನ್ನು ದುರ್ಬಲಳು, ಅಸಹಾಯಕಳು ಎಂದು ಜರಿಯುವುದು ಬೇಡ. ಅನೇಕ ಮಹಿಳಾ ಸಾಧಕರು ಕಣ್ಣಮುಂದೆಯೇ ಇದ್ದಾರೆ. ಸಮಾಜದ ವಿವಿಧ ಕಟ್ಟುಪಾಡುಗಳನ್ನು ವಿರೋಧಿಸಿ ಮಹಿಳಾ ಸಮಾನತೆಗಾಗಿ ಹೋರಾಡಿದ್ದಾರೆ. ಅವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

    ಪುರಸಭೆ ಸದಸ್ಯೆ ಸುಪ್ರಿಯಾ ಅರಳಿ, ಶಾಲೆ ಪರಿಚಾತರಕಿ ರಾಜಮ್ಮ, ಶಿಕ್ಷಕಿ ಪ್ರಮೀಳಾ, ಪೌರಕಾರ್ಮಿಕರಾದ ದ್ಯಾವಮ್ಮ ಹನುಮಂತಪ್ಪ, ದ್ಯಾವಮ್ಮ ಹನುಮಂತ ಎಂಬುವವರನ್ನು ಪುರಸಭೆಯಿಂದ ಸನ್ಮಾನಿಸಲಾಯಿತು.

    ಶಿಕ್ಷಕರಾದ ರಾಮಣ್ಣ, ಸ್ವಸಹಾಯ ಸಂಘದ ಪದಾಧಿಕಾರಿಗಳಾದ ಸಹನಾ, ನಂದಿನಿ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿಯರಾದ ಅಕ್ಷತಾ ಕಮ್ಮಾರ್, ಮಲ್ಲಮ್ಮ, ಸಿಬ್ಬಂದಿ ಚನ್ನಬಸವ, ಹನುಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts