More

    ಕರೊನಾ ವಾರಿಯರ್​ ಅಂತ ಸುಳ್ಳು ಹೇಳಿ ಲಸಿಕೆ ಪಡೆದರಾ ಮೀರಾ ಚೋಪ್ರಾ?

    ಮುಂಬೈ: ದರ್ಶನ್​ ಅಭಿನಯದ ‘ಅರ್ಜುನ್​’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮೀರಾ ಚೋಪ್ರಾ ನೆನಪಿದೆಯಾ? ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಸಿನ್​ ಆಗಿರುವ ಮೀರಾ, ‘ಅರ್ಜುನ್​’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಬಂದರು. ಅದೊಂದು ಚಿತ್ರದಲ್ಲಿ ನಟಿಸಿದ ಮೇಲೆ, ಅದೆಲ್ಲಿಗೆ ಹೋದರೋ ಗೊತ್ತಿಲ್ಲ.

    ಇದನ್ನೂ ಓದಿ: ವಿಶಾಲ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ಗಾಯತ್ರಿ ರಘುರಾಮ್​

    ಈಗ ಅವರು ಬಹಳ ದಿನಗಳ ನಂತರ ಸುದ್ದಿಯಲ್ಲಿದ್ದಾರೆ. ಕರೊನಾ ವಾರಿಯರ್​ ಎಂದು ಮೀರಾ ಚೋಪ್ರಾ ಸುಳ್ಳು ಹೇಳಿ ಲಸಿಕೆಯನ್ನು ಪಡೆದಿದ್ದಾರೆ ಎಂಬ ಆರೋಪವೊಂದು ಅವರ ಮೇಲೆ ಕೇಳಿಬಂದಿದ್ದು, ಈ ಆರೋಪವನ್ನು ಇದೀಗ ಮೀನಾ ಅಲ್ಲಗೆಳೆದಿದ್ದಾರೆ.

    ಇತ್ತೀಚೆಗಷ್ಟೇ ಮೀರಾ ಲಸಿಕೆ ಪಡೆದಿದ್ದು, ಲಸಿಕೆ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಕ್ಷಣವೇ ಭಾರತೀಯ ಜನತಾ ಪಕ್ಷದ ಥಾಣೆ ವಿಭಾಗದ ಅಧ್ಯಕ್ಷ ಮತ್ತು ಎಂ.ಎಲ್​.ಸಿ ನಿರಂಜನ್​ ದಾವ್ಕರೆ ಎನ್ನುವವರು, ಲಸಿಕೆ ಪಡೆಯುವ ಸಂದರ್ಭದಲ್ಲಿ ಮೀರಾ ಅವರ ಐಡೆಂಟಿಟಿ ಕಾರ್ಡ್​ನ ಫೋಟೋ ತೆಗೆದು ಹಾಕಿದ್ದರು. ಅದರಲ್ಲಿ ಓಂ ಸಾಯಿ ಆರೋಗ್ಯ ಕೇರ್​ ಪ್ರೈವೇಟ್​ ಲಿಮಿಟೆಡ್​ನಲ್ಲಿ ಕೆಲಸ ಮಾಡುತ್ತಿರುವ ಫ್ರಂಟ್​ಲೈನ್​ ವರ್ಕರ್​ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಲಸಿಕೆ ಪಡೆದಿದ್ದಾರೆ ಎಂದು ನಿರಂಜನ್​ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮೀರಾ ನಿಜಕ್ಕೂ ಫ್ರಂಟ್​ಲೈನ್​ ವರ್ಕರ್​ ಆಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಸುಳ್ಳು ಐಡಿ ತೋರಿಸಿ ಲಸಿಕೆ ಪಡೆದಿದ್ದಾರಾ ಎಂಬ ಕುರಿತು ವಿಚಾರಣೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಚಿತ್ರರಂಗದವರಿಗೆ ಎರಡು ದಿನಗಳ ಕಾಲ ಉಚಿತ ಲಸಿಕೆ

    ಇದೀಗ ಪ್ರತಿಕ್ರಿಯೆ ನೀಡಿರುವ ಮೀರಾ, ‘ನಾನು ಒಂದು ತಿಂಗಳ ಸತತ ಪ್ರಯತ್ನದ ನಂತರ ನೋಂದಾಯಿಸಿ ಲಸಿಕೆ ಪಡೆದಿದ್ದೀನಿ. ನೋಂದಣಿಗಾಗಿ ಆಧಾರ್ ಕಾರ್ಡ್​ ಮಾತ್ರ ನೀಡಿದ್ದೇನೆಯೇ ಹೊರತು, ಯಾವುದೇ ಐಡಿಯನ್ನೂ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಐಡಿ ನನ್ನದಲ್ಲ ಮತ್ತು ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

    ಮಸ್ತಾನಿಯಾದ ರಾಖಿ ಸಾವಂತ್​ … ಏನಿದು ಹೊಸ ಡ್ರಾಮಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts